TRAI Rule: ಜುಲೈ 1 ರಿಂದ ಸಿಮ್ ಕಾರ್ಡ್ ಬಳಸುವವರಿಗೆ ಕೇಂದ್ರದಿಂದ ಹೊಸ ರೂಲ್ಸ್, ಈ ಸೇವೆ ಇನ್ಮುಂದೆ ಬಂದ್

ಜುಲೈ 1 ರಿಂದ ಸಿಮ್ ಕಾರ್ಡ್ ಸಂಬಂಧಿತ ಹೊಸ ನಿಯಮಗಳು ಜಾರಿ.

Sim Card New Rule From July 1st: ಪ್ರಸ್ತುತ ದೇಶದಲ್ಲಿ ಆನ್ಲೈನ್ ವಂಚನೆಯ ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿದೆ. ಜನಸಾಮಾನ್ಯರು ಆನ್ಲೈನ್ ವಂಚನೆಯಿಂದ ರೋಸಿಹೋಗಿದ್ದಾರೆ ಎನ್ನಬಹುದು. ಆನ್ಲೈನ್ ವಂಚನೆಯ ತಡೆಗಾಗಿ ಈಗಾಗಲೇ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಇನ್ನು TRAI ಈಗಾಗಲೇ SIM Card ಗೆ ಸಂಬಂಧಿಸಿದಂತೆ ಅನೇಕ ನಿಯಮಗಳನ್ನು ಜಾರಿಗೊಳಿಸಿದೆ. ಸದ್ಯ TRAI ಆನ್ಲೈನ್ ವಂಚನೆಗಳಿಗೆ ಬ್ರೇಕ್ ಹಾಕಲು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಜುಲೈ 1 ರಿಂದ ಸಿಮ್ ಕಾರ್ಡ್ ಸಂಬಂಧಿತ ಹೊಸ ನಿಯಮಗಳು ಜಾರಿಗೆ ಬರಲಿವೆ.

Sim Card New Rule
Image Credit: Timesbull

ಜುಲೈ 1 ರಿಂದ ಬದಲಾಗಲಿದೆ Sim Card ನಿಯಮ
ಆನ್‌ ಲೈನ್ ವಂಚನೆ ತಡೆಯಲು TRAI ಮಹತ್ವದ ಹೆಜ್ಜೆ ಇಟ್ಟಿದ್ದು, ಜುಲೈ 1 ರಿಂದ ಸಿಮ್ ಕಾರ್ಡ್‌ ಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆಯಾಗಲಿದೆ. ಆನ್‌ ಲೈನ್ ವಂಚನೆಯನ್ನು ತಡೆಯಲು ಟ್ರಾಯ್‌ ನ ಹೊಸ ನಿಯಮಗಳು ಜಾರಿಯಾಗಿವೆ. ಈ ಹೊಸ ನಿಯಮದಿಂದಾಗಿ ಸಾಮಾನ್ಯ ಮೊಬೈಲ್ ಬಳಕೆದಾರರು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಟ್ರಾಯ್ ಪ್ರಕಾರ, ತಮ್ಮ ಸಿಮ್ ಕಾರ್ಡ್‌ ಗಳನ್ನು ಬದಲಾಯಿಸಿದ ಮೊಬೈಲ್ ಬಳಕೆದಾರರು ತಮ್ಮ ಫೋನ್ ಸಂಖ್ಯೆಯನ್ನು ಪೋರ್ಟ್ ಮಾಡಲು ಸಾಧ್ಯವಾಗುವುದಿಲ್ಲ. ವಂಚನೆಯ ಘಟನೆಗಳನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ರಾಯ್ ಹೇಳಿದೆ. ಇನ್ನುಮುಂದೆ ಸಿಮ್‌ ಗಳನ್ನು ಬದಲಾಯಿಸುವ ಮೂಲಕ ವಂಚಕರು ತಕ್ಷಣವೇ ಮೊಬೈಲ್ ಸಂಪರ್ಕವನ್ನು ಪೋರ್ಟ್ ಮಾಡಲು ಸಾಧ್ಯವಿಲ್ಲ.

Sim Card New Rule From July 1st
Image Credit: Airtel

TRAI ಹೊಸ ನಿಯಮವನ್ನು ಜಾರಿಗೊಳಿಸಲು ಕಾರಣವೇನು…?
ಇತ್ತೀಚಿನ ದಿನಗಳಲ್ಲಿ, ಸಿಮ್ ವಿನಿಮಯಕ್ಕೆ ಸಂಬಂಧಿಸಿದ ವಂಚನೆ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಈ ಹಗರಣದಲ್ಲಿ ಜನರು ಸುಲಭವಾಗಿ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಫೋಟೋಗಳನ್ನು ಪಡೆದು ಮೊಬೈಲ್ ಕಳೆದು ಹೋದರೆ ಹೊಸ ಸಿಮ್ ಕಾರ್ಡ್ ಪಡೆಯುತ್ತಾರೆ. ಇದರ ನಂತರ, ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ OTP ವಂಚಕರನ್ನು ತಲುಪುತ್ತದೆ. ಇದನ್ನು ವಂಚನೆಗೆ ಬಳಸುತ್ತಾರೆ. ಹೀಗಾಗಿ TRAI ಹೊಸ ನಿಯಮವನ್ನು ಜಾರಿಗೆ ತರುತ್ತಿದೆ. ಈ ಹೊಸ ನಿಯಮದಿಂದಾಗಿ ಜನಸಾಮಾನ್ಯರಿಗೆ ಹೆಚ್ಚಿನ ಸೇಫ್ಟಿ ಸಿಗಲಿದೆ.

Join Nadunudi News WhatsApp Group

TRAI Rules For Sim Card
Image Credit: Lokmat

Join Nadunudi News WhatsApp Group