Solar Pump Set: ರಾಜ್ಯದ ರೈತರಿಗೆ ಗುಡ್ ನ್ಯೂಸ್ ನೀಡಿದ ಸಿದ್ದರಾಮಯ್ಯ, ಪಂಪ್ ಸೆಟ್ ಖರೀದಿಸಲು ಸಬ್ಸಿಡಿ ಯೋಜನೆ ಜಾರಿ

ಕೃಷಿ ಪಂಪ್ ಸೆಟ್ ಗಳ ಅಳವಡಿಕೆಗೆ ಸಿಗಲಿದೆ 50 % ಸಬ್ಸಿಡಿ

Solar Pump Set Subsidy In Karnataka: ಸದ್ಯ ರಾಜ್ಯದಲ್ಲಿ ರೈತರಿಗಾಗಿ ವಿಶೇಷ ಯೋಜನೆಗಳು ತಲೆಎತ್ತಿಕೊಳ್ಳುತ್ತಿವೆ. ರೈತರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಹೆಚ್ಚಿನ ಮಹತ್ವ ನೀಡುತ್ತಿದೆ ಎನ್ನಬಹುದು. ರೈತರ ಕೃಷಿ ಬೆಳವಣಿಗೆಗೆ ಸಹಾಯವಾಗಲು ಈಗಾಗಲೇ ರಾಜ್ಯದಲ್ಲಿ ನಾನಾ ಯೋಜನೆಗಳು ಜಾರಿಯಾಗಿವೆ.

ಇನ್ನು ಈ ಬಾರಿ ರಾಜ್ಯದ ರೈತರು ಮಳೆಯ ಅಭಾವದಿಂದ ಬೆಳೆಹಾನಿಯಿಂದಾಗಿ ಬಾರಿ ನಷ್ಟವನ್ನು ಅನುಭವಿಸಿದ್ದಾರೆ. ರೈತರ ಈ ಸಮಸ್ಯೆಗೆ ರಾಜ್ಯ ಸರ್ಕಾರ ಬೆಳೆ ಪರಿಹಾರ ಮೊತ್ತವನ್ನು ಕೂಡ ನೀಡಿದೆ. ಮಳೆಯ ಕೊರತೆಯಿಂದ ರೈತರ ಬೆಳೆ ಹಾನಿಯಾಗಿರುವುದನ್ನು ಗಮನಿಸಿರುವ ರಾಜ್ಯ ಸರ್ಕಾರ ರೈತರಿಗೆ ನೀರಾವರಿ ಸೌಲಭ್ಯ ನೀಡಲು ವಿವಿಧ ರೀತಿಯಲ್ಲಿ ನೆರವಾಗುತ್ತಿದೆ. ಇದೀಗ ರಾಜ್ಯ ಸರ್ಕಾರ ರೈತರಿಗೆ ಹೊಸ ಸೌಲಭ್ಯವನ್ನು ನೀಡಲು ಮುಂದಾಗಿದೆ.

Solar Pump Set Subsidy In Karnataka
Image Credit: Oneindia

ರಾಜ್ಯದ ರೈತರಿಗೆ ಗುಡ್ ನ್ಯೂಸ್ ನೀಡಿದ ಸಿದ್ದರಾಮಯ್ಯ
ಈಗಾಗಲೇ ಕರ್ನಾಟಕ ಸರ್ಕಾರವು ಲಕ್ಷಾಂತರ ನೀರಾವರಿ ಪಂಪ್ ಸೆಟ್‌ ಗಳನ್ನು ಸೌರಶಕ್ತಿ ಚಾಲಿತ ಪಂಪ್‌ ಸೆಟ್‌ ಗಳಾಗಿ ಪರಿವರ್ತಿಸುವ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯು ಪಂಪ್ ಸೆಟ್‌ ಗಳಿಗೆ ನೀಡಲಾಗುವ ವಿದ್ಯುತ್ ಸಬ್ಸಿಡಿಯ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದೀಗ ರಾಜ್ಯ ಸರ್ಕಾರ ಕೃಷಿ ಪಂಪ್ ಸೆಟ್ ಗಳ ಅಳವಡಿಕೆಗೆ ಸಹಾಯಧನವನ್ನು ನೀಡಲು ಮುಂದಾಗಿದೆ. ಈ ಮೂಲಕ ರೈತರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ.

Kusum B Free Solar Pump Set Scheme
Image Credit: Krishijagran

ಸೋಲಾರ್ ಪಂಪ್ ಸೆಟ್ ಅಳವಡಿಕೆಗೆ ಸಿಗಲಿದೆ 50 % ಸಬ್ಸಿಡಿ
ರೈತರ ನೀರಾವರಿಗೆ ಸಾಂಪ್ರದಾಯಕ ವಿದ್ಯುತ್ ಬಳಕೆ ಕಡಿಮೆ ಮಾಡಿ ಸೌರಶಕ್ತಿ ಬಳಕೆ ಮೂಲಕ ಸ್ವಾವಲಂಬಿ ಸಾಧಿಸುವ ರೈತರ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಪೂರೈಸಲು ಸೌರ ಪಂಪ್ ಸೆಟ್ ಬಳಕೆ ಉತ್ತೇಜನಗೊಳಿಸಲಾಗುವುದು ಎಂದು ಇಂಧನ ಸಚಿವ ಜಾರ್ಜ್ ತಿಳಿಸಿದ್ದಾರೆ. ಸೌರ ಪಂಪ್ ಸೆಟ್ ಬಳಕೆ ಉತ್ತೇಜನಗೊಳಿಸಲು “ಕುಸುಮ್ ಬಿ ಯೋಜನಾ” (Kusum B Free Solar Pump Set Scheme) ಅನುಷ್ಠಾನಕ್ಕೆ ಸರ್ಕಾರಕ್ಕೆ ಒಟ್ಟು ನೀಡುತ್ತಿದೆ. ಈವರೆಗೆ ಸೋಲಾರ್ ಪಂಪ್ ಸೆಟ್ ಅಳವಡಿಕೆಗೆ ನೀಡುತ್ತಿದ್ದ 30 % ಸಬ್ಸಿಡಿ ಹಣವನ್ನು 50 % ಗೆ ಹೆಚ್ಚಳ ಮಾಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group