Swaraj Tractor: ಹೊಸ ಶ್ರೇಣಿಯ ಟ್ರ್ಯಾಕ್ಟರ್ ಗಳನ್ನೂ ಬಿಡುಗಡೆ ಮಾಡಿದ ಸ್ವರಾಜ್ ಟ್ರ್ಯಾಕ್ಟರ್ಸ್.

ದೇಶದ ರೈತರಿಗೆ ಕಡಿಮೆ ಬೆಲೆಯ ಹೊಸ ಮಾದರಿಯ ಟ್ರಾಕ್ಟರ್ ಬಿಡುಗಡೆ, ಸ್ವರಾಜ್ ಟ್ರಾಕ್ಟರ್.

Swaraj Tractor Price In India 2023: ಸ್ವರಾಜ್ ಟ್ರಾಕ್ಟರ್ಸ್ ಇದೀಗ ಹೊಸ ಶ್ರೇಣಿಯ ಕಾಂಪ್ಯಾಕ್ಟ್ ಹಗುರವಾದ ಟ್ರ್ಯಾಕ್ಟರ್ ಗಳನ್ನೂ ಬಿಡುಗಡೆ ಮಾಡಿದ್ದು, ಇದರ ಬೆಲೆ ರೂಪಾಯಿ 5.35 ಲಕ್ಷದಿಂದ ಪ್ರಾರಂಭವಾಗುತ್ತದೆ. ಹೊಸ ಶ್ರೇಣಿಯ ಅಡಿಯಲ್ಲಿ 20-30 ಎಚ್ ಪಿ ವಿಭಾಗದಲ್ಲಿ ಟಾರ್ಗೆಟ್ 630 ಮತ್ತು ಟಾರ್ಗೆಟ್ 625 ಎಂಬ ಎರಡು ಮಾದರಿಗಳನ್ನು ಹೊರತರುವುದಾಗಿ ಕಂಪನಿ ಹೇಳಿದೆ.

Swaraj Tractors has also launched a new range of tractors
Image Credit: tractornews

ಹೊಸ ಶ್ರೇಣಿಯ ಟ್ರ್ಯಾಕ್ಟರ್ ಗಳನ್ನೂ ಬಿಡುಗಡೆ ಮಾಡಿದ ಸ್ವರಾಜ್ ಟ್ರ್ಯಾಕ್ಟರ್ಸ್
ಸ್ವರಾಜ್ ಟಾರ್ಗೆಟ್ 630 ಮಾದರಿಯ ಮೊದಲು ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಅದರ ಡೀಲರ್ ನೆಟ್ ವರ್ಕ್ ಮೂಲಕ ಲಭ್ಯವಿರುತ್ತದೆ. ಬೆಲೆ ರೂಪಾಯಿ 5.35 ಲಕ್ಷದಿಂದ ಪ್ರಾರಂಭವಾಗುತ್ತದೆ. ಎರಡನೇ ಮಾದರಿಯ ಟಾರ್ಗೆಟ್ 625 ಅನ್ನು ಸರಿಯಾದ ಸಮಯದಲ್ಲಿ ಪರಿಚಯಿಸಲಾಗುವುದು ಎಂದು ಮಹಿಂದ್ರಾ ಸಮೂಹದ ಭಾಗವಾಗಿರುವ ಸ್ವರಾಜ್ ಟ್ರ್ಯಾಕ್ಟರ್ಸ್ ತಿಳಿಸಿದೆ. ಗ್ರೂಪ್ ಕಳೆದ ವಾರವಷ್ಟೇ ಹೊಸ ಟ್ರ್ಯಾಕ್ಟರ್ ಪ್ಲಾಟ್ ಫಾರ್ಮ್ ಅನ್ನು ಪ್ರಾರಂಭಿಸುವ ಯೋಜನೆಯನ್ನು ಕಂಪನಿ ಪ್ರಕಟಿಸಿದೆ.

Swaraj Tractors has also launched a new range of tractors
Image Credit: swarajtractors

ಹೊಸ ಸ್ವರಾಜ್ ಟಾರ್ಗೆಟ್
ಹೊಸ ಸ್ವರಾಜ್ ಟಾರ್ಗೆಟ್ ಶ್ರೇಣಿಯು ಶಕ್ತಿ ಮತ್ತು ಸುಧಾರಿತ ತಂತ್ರಜ್ಞಾನದ ವೈಶಿಷ್ಟ್ಯಗಳನ್ನು ಹೊಂದಿದೆ. ಹಲವಾರು ವಿಶಿಷ್ಟ ಅಪ್ಲಿಕೇಶನ್ ಗಳಲ್ಲಿ ಅಸಾಧಾರಣ ದಕ್ಷತೆಯನ್ನು ಒದಗಿಸುತ್ತದೆ ಎಂದು ಕಂಪನಿ ಹೇಳಿದೆ.

Join Nadunudi News WhatsApp Group

Join Nadunudi News WhatsApp Group