Swiggy: ಸ್ವಿಗ್ಗಿ ಮೂಲಕ ಫುಡ್ ಆರ್ಡರ್ ಮಾಡಿ ಇದುವರೆಗೆ ಎಷ್ಟು ಖರ್ಚು ಮಾಡಿದ್ದೀರಿ ಎಂದು ತಿಳಿಯುವ ವಿಧಾನ ಇಲ್ಲಿದೆ

ಮೊದಲೆಲ್ಲಾ ನಮಗೆ ಏನಾದರೂ ಹೊಟೇಲ್ ಊಟ ಮಾಡಬೇಕು ಅಂತ ಅನ್ನಿಸಿದರೆ ನೇರವಾಗಿ ಹೊಟೇಲ್‌ಗೆ ಹೋಗಿ ಇಷ್ಟವಾದ ಆಹಾರ ತಿನ್ನುತ್ತಿದ್ದೆವು. ಹೀಗೆ ವಾರಕ್ಕೊಮ್ಮೆಯಾದರೂ ಹೊರಗಡೆ ಊಟ ಮಾಡುವ ಪದ್ಧತಿ ಇಟ್ಟುಕೊಂಡಿರುತ್ತಿದ್ದು ಆದರೆ ಈಗ ಪ್ರತಿಯೊಂದೂ ಆನ್‌ಲೈನ್‌ ಅವಲಂಬಿತವಾಗಿದೆ.
ಹೌದು ಏಕೆಂದರೆ ಆಹಾರ ಸಂಸ್ಥೆಗಳು ತಮ್ಮ ಮೊಬೈಲ್ ಆ್ಯಪ್‌ಗಳನ್ನು ಪ್ರಾರಂಭಿಸಿದ ಮೇಲಂತೂ ಆಹಾರ ಪ್ರಿಯರು ತಮಗೆ ಇಷ್ಟವಾದ ಆಹಾರವನ್ನು ತಮ್ಮ ಇಷ್ಟವಾದ ಹೊಟೇಲ್ ಅಥವಾ ರೆಸ್ಟೋರೆಂಟ್ ನಿಂದ ಮೊಬೈಲ್ ಆ್ಯಪ್‌ನ ಮೂಲಕ ಆರ್ಡರ್ ಮಾಡಿ ಮನೆ ಬಾಗಿಲಿಗೆ ಊಟವನ್ನು ತರಿಸಿಕೊಳ್ಳುತ್ತಿದ್ದಾರೆ ಹೀಗೆ ಆ್ಯಪ್ ಅವಲಂಬಿಸಿ ಆಹಾರ ಆರ್ಡರ್ ಮಾಡುವ ವ್ಯವಸ್ಥೆ ಕೂಡ ಪ್ರಚಲಿತದಲ್ಲಿದೆ.

ಒಟ್ಟಿನಲ್ಲಿ ಆಹಾರ ಸಂಸ್ಥೆಗಳ ಮೊಬೈಲ್ ಆ್ಯಪ್‌ಗಳು ಅನೇಕರ ಜೀವನವನ್ನು ಹಿಂದೆಂದಿಗಿಂತಲೂ ಸುಲಭವಾಗಿಸಿದ್ದು ಕೋವಿಡ್‌ನಂತಹ ಸಂದರ್ಭದಲ್ಲಿ ಕೂಡ ಫುಡ್ ಡೆಲಿವರಿ ಆ್ಯಪ್‌ಗಳು ಜನಸಾಮಾನ್ಯರಿಗೆ ಪ್ರಯೋಜನಕಾರಿಯಾಗಿ ಮಾರ್ಪಡಾಗಿದ್ದವು. ಇನ್ನು ನಿಸ್ಸಂದೇಹವಾಗಿ ಭಾರತದಲ್ಲಿ ಹೆಚ್ಚು ಬಳಸಲಾಗುವ ಎರಡು ಆಹಾರ ವಿತರಣಾ ಅಪ್ಲಿಕೇಶನ್ ಗಳೆಂದರೆ swiggy  ಮತ್ತು ಜೊಮ್ಯಾಟೊ.  ಹಾಗಿದ್ದರೆ ಸ್ವಿಗ್ಗಿಯಂತಹ ಅಪ್ಲಿಕೇಶನ್‌ಗಳಲ್ಲಿ ಇಲ್ಲಿಯವರೆಗೆ ನೀವು ವ್ಯಯಿಸಿರುವ ಹಣವೆಷ್ಟು ಎಂಬುದನ್ನು ನೀವು ನಿಜವಾಗಿಯೂ ಟ್ರ್ಯಾಕ್ ಮಾಡಬಹುದು.

swiggy india
Image Credit: https://www.thebetterindia.com/
ಆದರೆ ಸ್ವಿಗ್ಗಿ ಆರ್ಡರ್‌ಗಳಿಗೆ ನೀವು ಇಲ್ಲಿಯವರೆಗೆ ಎಷ್ಟು ಹಣವನ್ನು ಖರ್ಚು ಮಾಡಿದ್ದೀರಿ ಎಂಬುದನ್ನು ಟ್ರ್ಯಾಕ್ ಮಾಡಲು ವಾಸ್ತವವಾಗಿ ಒಂದು ಮಾರ್ಗವಿದೆ ನೋಡಿ.
ಟ್ರಿಕ್ ನಿಜವಾಗಿಯೂ ಸರಳವಾಗಿದೆ ಆದರೆ ಸ್ವಿಗ್ಗಿಯಿಂದ ಆಹಾರವನ್ನು ಆರ್ಡರ್ ಮಾಡಲು ಮಾಡಿರುವ ಖರ್ಚನ್ನು ಕಂಡು ಹಿಡಿಯಲು ನೀವು ಮೊದಲು ನಿಮ್ಮ ಡೆಸ್ಕ್ ಟಾಪ್ ಅಥವಾ ಪಿಸಿಯನ್ನು ಬಳಸಬೇಕು. ಸ್ವಿಗ್ಗಿಯಲ್ಲಿ ನೀವು ಇಲ್ಲಿಯವರೆಗೆ ಎಷ್ಟು ಹಣದ ಆಹಾರವನ್ನು ಆರ್ಡರ್ ಮಾಡಿದ್ದೀರಿ ಅಂತ ತಿಳಿದುಕೊಳ್ಳಲು ನೀವು ಕೆಳಗಿನ ಹಂತಗಳನ್ನು ಅನುಸರಿಸಿದರೆ ಸಾಕು.
ಹೌದು ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ.ನಿಮ್ಮ ಲ್ಯಾಪ್‌ಟಾಪ್ ಅಥವಾ PC ಯಲ್ಲಿ ನಿಮ್ಮ ವೆಬ್ ಬ್ರೌಸರ್‌ನಿಂದ ಸ್ವಿಗ್ಗಿ ವೆಬ್‌ಸೈಟ್‌ಗೆ ಹೋಗಿ. ಇಮೇಲ್ ಅಥವಾ ಫೋನ್ ಸಂಖ್ಯೆಯನ್ನು ಬಳಸಿಕೊಂಡು ನಿಮ್ಮ ಖಾತೆಗೆ ಲಾಗಿನ್ ಮಾಡಿ. ಒಮ್ಮೆ ಲಾಗ್ ಇನ್ ಮಾಡಿದ ನಂತರ ನಿಮ್ಮ ಪರದೆಯ ಮೇಲಿನ ಬಲ ಮೂಲೆಯಲ್ಲಿರುವ ನಿಮ್ಮ ಹೆಸರಿನ ಮೇಲೆ ಕ್ಲಿಕ್ ಮಾಡಿಮುಂದೆ ಆರ್ಡರ್‌ಗಳ ಮೇಲೆ ಕ್ಲಿಕ್ ಮಾಡಿ ಮತ್ತು ಪುಟದ ಕೆಳಭಾಗದಲ್ಲಿರುವ ಹೆಚ್ಚು ಆರ್ಡರ್‌ಗಳನ್ನು ತೋರಿಸು ಕ್ಲಿಕ್ ಮಾಡುವ ಮೂಲಕ ಕೆಳಗೆ ಸ್ಕ್ರಾಲ್ ಮಾಡಿ.ಈಗ ಟಚ್‌ಪ್ಯಾಡ್/ಮೌಸ್ ಮೇಲೆ ಬಲ ಕ್ಲಿಕ್ ಮಾಡಿ ಮತ್ತು ಪರಿಶೀಲಿಸು ಕ್ಲಿಕ್ ಮಾಡಿ.  ಇಲ್ಲಿ ನಿಮ್ಮ ಪುಟದ ಕೆಳಭಾಗದಲ್ಲಿ ತೋರಿಸಿರುವ ನ್ಸೋಲ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

Join Nadunudi News WhatsApp Group