Tamannaah Jailer: ಕಾವಾಲಯ್ಯ ಹಾಡಿಗೆ ರಜಿನಿ ಜೊತೆ ಸೊಂಟ ಬಳುಕಿಸಲು ತಮನ್ನಾ ಪಡೆದ ಸಂಭಾವನೆ ಎಷ್ಟು…? ದುಬಾರಿ ಸಂಭಾವನೆ.

ಕಾವಾಲಯ್ಯ ಹಾಡಿಗೆ ತಮನ್ನಾ ಪಡೆದ ಸಂಭಾವನೆ ಎಷ್ಟು...?

Tamannaah Remuneration In Jailer Movie: ತಮಿಳಿನ ಖ್ಯಾತ ನಟ ರಜನಿಕಾಂತ್ (Rajinikanth) ಅವರ ಬಹುನಿರೀಕ್ಷಿತ ಜೈಲರ್(Jailer) ಸಿನಿಮಾ ಆಗಸ್ಟ್ 10 ರಂದು ಭರ್ಜರಿಯಾಗಿ ಬಿಡುಗಡೆಗೊಂಡಿದೆ. ರಜನಿಕಾಂತ್ ಅವರ ಯಾವುದೇ ಸಿನಿಮಾ ತೆರೆ ಕಂಡರೂ ಭರ್ಜರಿ ಸದ್ದು ಮಾಡುತ್ತದೆ. ರಜನಿಕಾಂತ್ ಅವರ ಅಭಿನಯಕ್ಕೆ ಕೋಟ್ಯಾಂತರ ಅಭಿಮಾನಿಗಳು ಮನಸೋತಿದ್ದಾರೆ.

ಬಿಡುಗಡೆಗೊಂಡು ಜೈಲರ್ ಸಿನಿಮಾ ಬಾಕ್ಸ್ ಆಫೀಸ್ ಅನ್ನು ಕೊಳ್ಳೆಹೊಡೆಯುತ್ತಿದೆ. ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾ ಬಿಡುಗಡೆಗೊಂಡ ಮೂರೇ ದಿನದಲ್ಲಿ 150 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಜೈಲರ್ ದೂಳೆಬ್ಬಿಸಿದೆ.

Tamannaah latest news
Image Credit: Hitmoviedialogues

ಜೈಲರ್ ಚಿತ್ರಕ್ಕೆ ಸಿನಿ ಪ್ರಿಯರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಹಣ ಕೊಳ್ಳೆ ಹೊಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಇನ್ನು ರಜನಿಕಾಂತ್ ಅವರ ಜೈಲರ್ ಚಿತ್ರ (Jailer Movie) ಬಿಡುಗಡೆಗೊಳ್ಳುವ ಮೊದಲು ಈ ಚಿತ್ರದ ಟ್ರೈಲರ್ ಬಾರಿ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಅದರಲ್ಲೂ ಜೈಲರ್ ಚಿತ್ರದಲ್ಲಿ ತಮನ್ನಾ (Tamannaah) ಅವರ ನಟನೆಯ ಕಾವಾಲಯ್ಯ ಸಾಂಗ್ ಭರ್ಜರಿ ಹಿಟ್ ಆಗಿದೆ.

ರಜನಿ ಜೊತೆ ಕಾವಾಲಯ್ಯ ಸಾಂಗ್ ಗೆ ಹೆಜ್ಜೆ ಹಾಕಿದ ಮಿಲ್ಕಿ ಬ್ಯೂಟಿ
ಮಿಲ್ಕಿ ಬ್ಯೂಟಿ ತಮನ್ನಾ ಅವರು ಜೈಲರ್ ಚಿತ್ರದಲ್ಲಿ ಕಾವಾಲಯ್ಯ ಸಾಂಗ್ ಬಿಂದಾಸ್ ಹೆಜ್ಜೆ ಹಾಕಿದ್ದಾರೆ. ಕಾವಾಲಯ್ಯ ಸಾಂಗ್ ರಿಸೀಲ್ ಆದ ತಕ್ಷಣೆ ಹೆಚ್ಚಿನ ವೀಕ್ಷಣೆ ಪಡೆದು ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಮೆಚ್ಚುಗೆ ಪಡೆದುಕೊಂಡಿದೆ.

ಇನ್ನು ಸಾಂಗ್ ಬಿಡುಗಡೆಗೊಂಡಾಗಿನಿಂದ ಸೋಶಿಯಲ್ ಮೀಡಿಯಾದಲ್ಲಿ ಹ್ಯಾಶ್ ಟ್ಯಾಗ್ ನಂಬರ್ ಒನ್ ಸ್ಥಾನದಲ್ಲಿದೆ. ಅನೇಕ ಸ್ಟಾರ್ ನಟ ನಟಿಯರು ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಕಾವಾಲಯ್ಯ ಹಾಡಿಗೆ ಹೆಜ್ಜೆ ಹಾಕುವವರು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದಾರೆ.

Join Nadunudi News WhatsApp Group

Tamannaah Remuneration In Jailer Movie
Image Credit: Thehindu

ಕಾವಾಲಯ್ಯ ಹಾಡಿಗೆ ತಮನ್ನಾ ಪಡೆದ ಸಂಭಾವನೆ ಎಷ್ಟು
ಇನ್ನು ಟಾಲಿವುಡ್ ನ ಬಹುಬೇಡಿಕ ನಟಿ ತಮನ್ನಾ ರಜನಿ ಜೊತೆ ಮಾಸ್ ಹೆಜ್ಜೆ ಹಾಕಲು ಭರ್ಜರಿ ಸಂಭಾವನೆಯನ್ನೇ ಪಡೆದಿದ್ದಾರೆ. ಕಾವಳಯ್ಯ ಹಾಡಿಗೆ ಮಿಲ್ಕಿ ಬ್ಯೂಟಿ ಬರೋಬ್ಬರಿ 3 ಕೋಟಿ ಹಣ ಪಡೆದಿದ್ದಾರೆ ಎನ್ನುವ ಬಗ್ಗೆ ವರದಿಯಾಗಿದೆ.

ಇನ್ನು ತಮನ್ನಾ ತೆಲುಗು ಸೇರಿದಂತೆ, ತಮಿಳು, ಹಿಂದಿ ಚಿತ್ರರಂಗದಲ್ಲೂ ಬಹು ಬೇಡಿಕೆಯ ನಟಿಯಾಗಿದ್ದಾರೆ. ಟಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾದ ತಮನ್ನಾ ಅವರು ಕಾವಲಯ್ಯ ಹಾಡಿಗೆ 3 ಕೋಟಿ ಪಡೆದಿರುವುದು ಅಚ್ಚರಿಯ ವಿಷಯವೇನಲ್ಲ. ಇನ್ನು ತಮನ್ನಾ ಅವರ ಕಾವಾಲಯ್ಯ ಸಾಂಗ್ ಈಗಲೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇದೆ.

Join Nadunudi News WhatsApp Group