Curvv EV: ಬಿಡುಗಡೆಗೂ ಮುನ್ನವೇ ಲೀಕ್ ಆಯಿತು ಟಾಟಾ ಕರ್ವ್ ಕಾರಿಗೆ ಫೀಚರ್, ಜನರು ಫುಲ್ ಫಿದಾ

ಬಿಡುಗಡೆಗೂ ಮುನ್ನವೇ ಲೀಕ್ ಆಯಿತು ಟಾಟಾ ಕರ್ವ್ ಕಾರಿನ ಫೀಚರ್

Tata Curvv EV: ಈಗಾಗಲೇ ಮಾರುಕಟ್ಟೆಯಲ್ಲಿ TATA ಕಂಪನಿ ವಿವಿಧ ಮಾದರಿಯ ಕಾರ್ ಗಳನ್ನೂ ಪರಿಚಯಿಸುವ ಮೂಲಕ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ವಿವಿಧ ಮಾದರಿಯ ಪೆಟ್ರೋಲ್, CNG, Electric ನ ಹಲವಾರು ಮಾದರಿಗಳನ್ನು ಟಾಟಾ ಕಂಪನಿ ಬಿಡುಗಡೆ ಮಾಡಿದೆ.

ಜನರು ಹೊಸ ಮಾದರಿಯ ಕಾರ್ ಅನ್ನು ಖರೀದಿಸುವ ಸಮಯದಲ್ಲಿ ಮೊದಲು ಟಾಟಾ ಕಂಪನಿಯ ಕಾರನ್ನು ಆರಿಸಿಕೊಳ್ಳುತ್ತಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಟಾಟಾ ಕಂಪನಿಯ ಜನಪ್ರಿಯ Curvv ಮಾದರಿ ಮಾರುಕಟ್ಟೆಯನ್ನು ಪ್ರವೇಶಿಸಲು ತಯಾರಿ ನಡೆಸುತ್ತಿದೆ.

Tata Curvv EV Price
Image Credit: Cardekho

ಟಾಟಾದ ಹೊಸ ಕಾರ್ ಲಾಂಚ್
ಮುಂಬರುವ ಟಾಟಾ Curvv ಅನ್ನು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ ಪೋದಲ್ಲಿ ಪ್ರದರ್ಶಿಸಲಾಯಿತು. ಈಗಾಗಲೇ, ಕರ್ವ್ ಎಸ್‌ಯುವಿ ಉತ್ಪಾದನೆಗೆ ಸಿದ್ಧವಾಗಿದೆ. ಸದ್ಯ ಕಂಪನಿಯು ತನ್ನ Curvv ಮಾದರಿಯನ್ನು ಎಲೆಕ್ಟ್ರಿಕ್ ವರ್ಷನ್ ನಲ್ಲಿ ಪರಿಚಯಿಸಲು ಯೋಜನೆ ಹೂಡಿದೆ. ಟಾಟಾ ಮೋಟಾರ್ಸ್ ಹೆಚ್ಚು ನಿರೀಕ್ಷಿತ EV ಗಳ ಸರಣಿಯನ್ನು ಈ ವರ್ಷ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಬಿಡುಗಡೆಗೊಳ್ಳಲಿರುವ ಎಲೆಕ್ಟ್ರಿಕ್ ಮಾದರಿಗಳಲ್ಲಿ Tata Curvv ಮೊದಲಿದೆ ಎನ್ನಬಹುದು. Tata Curvv EV ಅನ್ನು ಮೊದಲು ಮಾರಾಟ ಮಾಡಲು ನಿರೀಕ್ಷಿಸಲಾಗಿದೆ, ಆಗಸ್ಟ್ 7, 2024 ರಂದು ಬಿಡುಗಡೆಯಾಗಲಿದೆ.

Tata Curvv EV Mileage
Image Credit: Cardekho

ಬಿಡುಗಡೆಗೂ ಮುನ್ನವೇ ಲೀಕ್ ಆಯಿತು ಟಾಟಾ ಕರ್ವ್ ಕಾರಿನ ಫೀಚರ್
•ಹೊಸ ಟಾಟಾ ಕರ್ವ್ ಕೂಪ್ ಎಸ್‌ಯುವಿ, ಒಳಾಂಗಣವು ಅತ್ಯುತ್ತಮ ವಿನ್ಯಾಸವನ್ನು ಪಡೆದುಕೊಂಡಿದೆ. ಇದು Harrier, Safari ಮತ್ತು Nexon ನಂತಹ SUV ಗಳಂತೆಯೇ ಅದೇ ವೈಶಿಷ್ಟ್ಯವನ್ನು ಪಡೆಯುವ ನಿರೀಕ್ಷೆಯಿದೆ.

•ಇನ್ನು ಟಾಟಾ ಲೋಗೋದೊಂದಿಗೆ 4-ಸ್ಪೋಕ್ ಸ್ಟೀರಿಂಗ್ ವೀಲ್, 12.3-ಇಂಚಿನ ಇನ್ಫೋಟೈನ್‌ ಮೆಂಟ್ ಸಿಸ್ಟಮ್, 10.25-ಇಂಚಿನ ಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ ಗಳು ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿರುವ ಸಾಧ್ಯತೆಯಿದೆ.

Join Nadunudi News WhatsApp Group

•ಎಲೆಕ್ಟ್ರಿಕ್ ರೂಪಾಂತರದಲ್ಲಿ ಬರುತ್ತಿರುವ ಟಾಟಾ ಕರ್ವ್ ಕೂಪ್ ಎಸ್‌ಯುವಿ ಶಕ್ತಿಯುತ ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ. ಇದು ಪೂರ್ಣ ಚಾರ್ಜ್‌ನಲ್ಲಿ 500 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

Tata Curvv EV Feature
Image Credit: Cardekho

Join Nadunudi News WhatsApp Group