Tata Curvv EV: ಸಿಂಗಲ್ ಚಾರ್ಜ್ ನಲ್ಲಿ 550 Km ಮೈಲೇಜ್, ಈ ಟಾಟಾ ಕಾರಿಗೆ ಜನರು ಸಂಪೂರ್ಣ ಫಿದಾ

ಟಾಟಾ ಕರ್ವ್ ಮಾದರಿಯ ಬ್ಯಾಟರಿ ಸಾಮರ್ಥ್ಯ ಬಹಿರಂಗ

Tata Curvv EV Battery Capacity And Mileage: ಮುಂಬರುವ ಟಾಟಾ Curvv ಅನ್ನು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ ಪೋದಲ್ಲಿ ಪ್ರದರ್ಶಿಸಲಾಯಿತು. ಈಗಾಗಲೇ, ಕರ್ವ್ ಎಸ್‌ಯುವಿ ಉತ್ಪಾದನೆಗೆ ಸಿದ್ಧವಾಗಿದೆ. ಸದ್ಯ ಕಂಪನಿಯು ತನ್ನ Curvv ಮಾದರಿಯನ್ನು ಎಲೆಕ್ಟ್ರಿಕ್ ವರ್ಷನ್ ನಲ್ಲಿ ಪರಿಚಯಿಸಲು ಯೋಜನೆ ಹೂಡಿದೆ.

ಟಾಟಾ ಮೋಟಾರ್ಸ್ ಹೆಚ್ಚು ನಿರೀಕ್ಷಿತ EV ಗಳ ಸರಣಿಯನ್ನು ಈ ವರ್ಷ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಬಿಡುಗಡೆಗೊಳ್ಳಲಿರುವ ಎಲೆಕ್ಟ್ರಿಕ್ ಮಾದರಿಗಳಲ್ಲಿ Tata Curvv ಮೊದಲಿದೆ ಎನ್ನಬಹುದು. ಇದೀಗ ಕರ್ವ್ ಮಾದರಿಯ ಬ್ಯಾಟರಿ ಕೆಪ್ಯಾಸಿಟಿ ಬಗ್ಗೆ ಮಾಹಿತಿ ಬಹಿರಂಗವಾಗಿದೆ.

Tata Curvv EV Battery Capacity And Mileage
Image Credit: Autocarindia

ಟಾಟಾ ಕರ್ವ್ ಮಾದರಿಯ ಬ್ಯಾಟರಿ ಸಾಮರ್ಥ್ಯ ಬಹಿರಂಗ
ಸದ್ಯ ಮಾರುಕಟ್ಟೆಯಲ್ಲಿ Tata Curvv EV ಬಾರಿ ಸಂಚಲನ ಸೃಷ್ಟಿಸಿದೆ ಎನ್ನಬಹುದು. ಈ ನೂತನ ಮಾದರಿಯು ಆಗಸ್ಟ್ 7, 2024 ರಂದು ಬಿಡುಗಡೆಯಾಗಲಿದೆ. ಈ ಮಾದರಿಯು ಮಾರುಕಟ್ಟೆಯಲ್ಲಿ ಸುಮಾರು 17 ರಿಂದ 22 ಲಕ್ಷ ರೂ. ಬೆಲೆಯಲ್ಲಿ ಬಿಡುಗಡೆಯಾಗಲಿದೆ. ಹೊಸ ಟಾಟಾ ಕರ್ವ್ ಕೂಪ್ ಎಸ್‌ಯುವಿ, ಒಳಾಂಗಣವು ಅತ್ಯುತ್ತಮ ವಿನ್ಯಾಸವನ್ನು ಪಡೆದುಕೊಂಡಿದೆ. ಇದು ಹ್ಯಾರಿಯರ್, ಸಫಾರಿ ಮತ್ತು ನೆಕ್ಸಾನ್‌ ನಂತಹ ಎಸ್‌ಯುವಿಗಳಂತೆಯೇ ಅದೇ ವೈಶಿಷ್ಟ್ಯವನ್ನು ಪಡೆಯುವ ನಿರೀಕ್ಷೆಯಿದೆ.

ಭರ್ಜರಿ 550km ಮೈಲೇಜ್ ನೀಡಲಿದೆ ಈ EV
ಹೊಸ ಕರ್ವ್ EV ಮಾದರಿಗೆ ಎರಡು ಬ್ಯಾಟರಿ ಆಯ್ಕೆಗಳು ಲಭ್ಯವಿರುತ್ತವೆ. ಹೊಸ ಕಾರಿನ ಮಾದರಿಗಾಗಿ 40.5 kWh ಬ್ಯಾಟರಿ ಮತ್ತು ಟಾಪ್ ಎಂಡ್ ಮಾದರಿಗಾಗಿ 55 kWh ಬ್ಯಾಟರಿ ಆಯ್ಕೆಗಳು ಲಭ್ಯವಿರುತ್ತವೆ. ಇನ್ನು 40.5 KVH ಬ್ಯಾಟರಿ ಪ್ಯಾಕ್ ಅನ್ನು ಈಗಾಗಲೇ Nexon EV ಮಾದರಿಗೆ ಅಳವಡಿಸಲಾಗಿದೆ. ಹೊಸದಾಗಿ ನೀಡಲಾದ 55 KVH ಬ್ಯಾಟರಿ ಹೆಚ್ಚಿನ ಮೈಲೇಜ್ ನೀಡುತ್ತದೆ. ಇದರೊಂದಿಗೆ ಹೊಸ ಕಾರಿನ ಸ್ಟಾರ್ಟಿಂಗ್ ಮಾಡೆಲ್ ಪ್ರತಿ ಚಾರ್ಜ್ ಗೆ 465 ಕಿ.ಮೀ ಮೈಲೇಜ್ ನೀಡಲಿದ್ದು, ಟಾಪ್ ಎಂಡ್ ಮಾಡೆಲ್ 550 ಕಿ.ಮೀ ಮೈಲೇಜ್ ನೀಡಲಿದೆ.

Tata Curvv EV Battery Capacity
Image Credit: ABP live

ಟಾಟಾ ಕರ್ವ್ EV ವೈಶಿಷ್ಟ್ಯಗಳೇನು ಗೊತ್ತಾ…?
ಇನ್ನು ಟಾಟಾ ಲೋಗೋದೊಂದಿಗೆ 4-ಸ್ಪೋಕ್ ಸ್ಟೀರಿಂಗ್ ವೀಲ್, 12.3-ಇಂಚಿನ ಇನ್ಫೋಟೈನ್‌ ಮೆಂಟ್ ಸಿಸ್ಟಮ್, 10.25-ಇಂಚಿನ ಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ ಗಳು ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿರುವ ಸಾಧ್ಯತೆಯಿದೆ. ಈ ಕಾರು ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಪವರ್‌ ಟ್ರೇನ್ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿದಿದೆ.

Join Nadunudi News WhatsApp Group

ಇದರ 1.2-ಲೀಟರ್ TGDI ಪೆಟ್ರೋಲ್ ಎಂಜಿನ್ 125 PS ಗರಿಷ್ಠ ಶಕ್ತಿ ಮತ್ತು 225 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ನಿರೀಕ್ಷೆಯಿದೆ, ಇದನ್ನು 6-ಸ್ಪೀಡ್ ಮ್ಯಾನುವಲ್ ಮತ್ತು DCT ಗೇರ್‌ ಬಾಕ್ಸ್‌ ಗೆ ಜೋಡಿಸಲಾಗಿದೆ. ಮತ್ತೊಂದು 1.5-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ಇರುತ್ತದೆ, ಇದು 115 PS ಪವರ್ ಮತ್ತು 260 Nm ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ.

Tata Curvv EV Price And Feature
Image Credit: Team BHP

Join Nadunudi News WhatsApp Group