Tata Curvv EV: ರತನ್ ಟಾಟಾ ಕಂಪನಿಯ ಹೊಸ ಕಾರ್ ಲಾಂಚ್, ಒಂದೇ ಚಾರ್ಜ್ ನಲ್ಲಿ 500km ಮೈಲೇಜ್.

ರತನ್ ಟಾಟಾ ಕಂಪನಿಯ ಹೊಸ ಕಾರ್ ಲಾಂಚ್

Tata Curvv Launch In India: ಭಾರತೀಯ ಆಟೋ ವಲಯದಲ್ಲಿ Tata ಕಂಪನಿಯು ಅನೇಕ ಮಾದರಿಯ ಕಾರ್ ಗಳನ್ನೂ ಪರಿಚಯಿಸುತ್ತಿದೆ. ಜನರು ಹೊಸ ಮಾದರಿಯ ಕಾರ್ ಅನ್ನು ಖರೀದಿಸುವ ಸಮಯದಲ್ಲಿ ಮೊದಲು ಟಾಟಾ ಕಂಪನಿಯ ಕಾರನ್ನು ಆರಿಸಿಕೊಳ್ಳುತ್ತಿದ್ದಾರೆ.

ಕಂಪನಿಯು ಅತ್ಯಂತ ಸುರಕ್ಷತಾ ಫೀಚರ್ ಅನ್ನು ನೀಡುವುದರೊಂದಿಗೆ ತನ್ನ ಅನೇಕ ಮಾದರಿಯ ಕಾರ್ ಗಳನ್ನು ಪರಿಚಯಿಸುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಟಾಟಾ ಕಂಪನಿಯ ಜನಪ್ರಿಯ Curvv ಮಾದರಿ ಮಾರುಕಟ್ಟೆಯನ್ನು ಪ್ರವೇಶಿಸಲು ತಯಾರಿ ನಡೆಸುತ್ತಿದೆ.

Tata Curvv Launch In India
Image Credit: Carwale

ರತನ್ ಟಾಟಾ ಕಂಪನಿಯ ಹೊಸ ಕಾರ್ ಲಾಂಚ್
ಮುಂಬರುವ ಟಾಟಾ Curvv ಅನ್ನು ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ ಪೋದಲ್ಲಿ ಪ್ರದರ್ಶಿಸಲಾಯಿತು. ಈಗಾಗಲೇ, ಕರ್ವ್ ಎಸ್‌ಯುವಿ ಉತ್ಪಾದನೆಗೆ ಸಿದ್ಧವಾಗಿದೆ. ಸದ್ಯ ಕಂಪನಿಯು ತನ್ನ Curvv ಮಾದರಿಯನ್ನು ಎಲೆಕ್ಟ್ರಿಕ್ ವರ್ಷನ್ ನಲ್ಲಿ ಪರಿಚಯಿಸಲು ಯೋಜನೆ ಹೂಡಿದೆ. ಟಾಟಾ ಮೋಟಾರ್ಸ್ ಹೆಚ್ಚು ನಿರೀಕ್ಷಿತ EV ಗಳ ಸರಣಿಯನ್ನು ಈ ವರ್ಷ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಬಿಡುಗಡೆಗೊಳ್ಳಲಿರುವ ಎಲೆಕ್ಟ್ರಿಕ್ ಮಾದರಿಗಳಲ್ಲಿ Tata Curvv ಮೊದಲಿದೆ ಎನ್ನಬಹುದು.

ಹೊಸ ಟಾಟಾ ಕರ್ವ್ ಕೂಪ್ ಎಸ್‌ಯುವಿ, ಒಳಾಂಗಣವು ಅತ್ಯುತ್ತಮ ವಿನ್ಯಾಸವನ್ನು ಪಡೆದುಕೊಂಡಿದೆ. ಇದು ಹ್ಯಾರಿಯರ್, ಸಫಾರಿ ಮತ್ತು ನೆಕ್ಸಾನ್‌ ನಂತಹ ಎಸ್‌ಯುವಿಗಳಂತೆಯೇ ಅದೇ ವೈಶಿಷ್ಟ್ಯವನ್ನು ಪಡೆಯುವ ನಿರೀಕ್ಷೆಯಿದೆ. ಇದು ಟಾಟಾ ಲೋಗೋದೊಂದಿಗೆ 4-ಸ್ಪೋಕ್ ಸ್ಟೀರಿಂಗ್ ವೀಲ್, 12.3-ಇಂಚಿನ ಇನ್ಫೋಟೈನ್‌ ಮೆಂಟ್ ಸಿಸ್ಟಮ್, 10.25-ಇಂಚಿನ ಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ ಗಳು ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿರುವ ಸಾಧ್ಯತೆಯಿದೆ.

Tata Curvv Price In India
Image Credit: Carwale

ಒಂದೇ ಚಾರ್ಜ್ ನಲ್ಲಿ 500km ಮೈಲೇಜ್
ಈ ಕಾರು ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಪವರ್‌ ಟ್ರೇನ್ ಆಯ್ಕೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿದಿದೆ. ಇದರ 1.2-ಲೀಟರ್ TGDI ಪೆಟ್ರೋಲ್ ಎಂಜಿನ್ 125 PS ಗರಿಷ್ಠ ಶಕ್ತಿ ಮತ್ತು 225 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ನಿರೀಕ್ಷೆಯಿದೆ, ಇದನ್ನು 6-ಸ್ಪೀಡ್ ಮ್ಯಾನುವಲ್ ಮತ್ತು DCT ಗೇರ್‌ ಬಾಕ್ಸ್‌ ಗೆ ಜೋಡಿಸಲಾಗಿದೆ.

Join Nadunudi News WhatsApp Group

ಮತ್ತೊಂದು 1.5-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆ ಇರುತ್ತದೆ, ಇದು 115 PS ಪವರ್ ಮತ್ತು 260 Nm ಪೀಕ್ ಟಾರ್ಕ್ ಅನ್ನು ಹೊರಹಾಕುತ್ತದೆ. ಎಲೆಕ್ಟ್ರಿಕ್ ರೂಪಾಂತರದಲ್ಲಿ ಬರುತ್ತಿರುವ ಟಾಟಾ ಕರ್ವ್ ಕೂಪ್ ಎಸ್‌ಯುವಿ ಶಕ್ತಿಯುತ ಬ್ಯಾಟರಿ ಪ್ಯಾಕ್ ಅನ್ನು ಪಡೆಯುತ್ತದೆ. ಇದು ಪೂರ್ಣ ಚಾರ್ಜ್‌ನಲ್ಲಿ 500 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

Tata Curvv Price And Feature
Image Credit: Carwale

Join Nadunudi News WhatsApp Group