Tax Saving: 1 ರೂ ಕೂಡ ತೆರಿಗೆ ಕಟ್ಟುವ ಅಗತ್ಯ ಇಲ್ಲ, ಇಲ್ಲಿದೆ ನೋಡಿ ತೆರಿಗೆ ಉಳಿಸುವ ವಿಧಾನ

1 ರೂಪಾಯಿ ತೆರಿಗೆ ಕಟ್ಟದೆ ಅಷ್ಟೂ ಹಣ ಉಳಿಸೋದು ಹೇಗೆ...?

Tax Saving Tips: ನಾವು ಸರ್ಕಾರಕ್ಕೆ ಒಂದಲ್ಲ ಒಂದು ರೀತಿಯಲ್ಲಿ ತೆರಿಗೆ ಪಾವತಿಮಾಡುತ್ತೇವೆ. ಹೌದು ನಾವು ಖರೀದಿಸುವ ಪ್ರತಿಯೊಂದು ವಸ್ತುವಿನ ಮೇಲು ತೆರಿಗೆಯನ್ನು ಹಾಕಿರುತ್ತಾರೆ. ಹಾಗೆ ವೇತನ ಪಡೆಯುವ, ಉದ್ಯಮ ನಡೆಸುವ ಜನರು ನೇರವಾಗಿ ತೆರಿಗೆಯನ್ನು ಪಾವತಿಸುತ್ತಾರೆ. ಇನ್ನು ಹೆಚ್ಚಿನ ಜನರು ತೆರಿಗೆ ಉಳಿತಾಯಕ್ಕಾಗಿ ಹೊಸ ಹೊಸ ಮಾರ್ಗವನ್ನು ಹುಡುಕುತ್ತಿರುತ್ತಾರೆ. ಇದೀಗ ನಾವು 1 ರೂಪಾಯಿ ತೆರಿಗೆ ಕಟ್ಟದೆ ನಿಮ್ಮ ಅಷ್ಟೂ ಹಣ ಉಳಿಸೋದು ಹೇಗೆ…? ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

tax saving plan
Image Credit: Cleartax

ಬಜೆಟ್ ನಲ್ಲಿ ತೆರಿಗೆ ಕುರಿತಂತೆ ಹೊಸ ನಿಯಮ ಜಾರಿ
ಭಾರತದ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಜುಲೈ 23 ರಂದು 2024 ರ ಬಜೆಟ್ ಮಂಡಿಸಿದ್ದಾರೆ. ಹೊಸ ಬಜೆಟ್‌ ನಲ್ಲಿ ತೆರಿಗೆ ಕುರಿತಂತೆ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಹೌದು 3 ಲಕ್ಷಕ್ಕಿಂತ ಹೆಚ್ಚಿನ ಆದಾಯ ಗಳಿಸುವ ಜನರು ತೆರಿಗೆ ಪಾವತಿಸಬೇಕಿದೆ. ಅಲ್ಲದೆ ಅವರು ಪಾವತಿಸುತ್ತಿದ್ದ ತೆರಿಗೆ ಪ್ರಮಾಣ ಕೂಡ ಹೆಚ್ಚಾಗಿದೆ. ಸದ್ಯ 3 ಲಕ್ಷದಿಂದ 7 ಲಕ್ಷ ರೂ ವರೆಗಿನ ವೇತನ ಪಡೆಯುವ ಜನರು ಶೇ. 5 ರಷ್ಟು ತೆರಿಗೆ ಪಾವತಿ ಮಾಡಬೇಕಿದೆ.

ತೆರಿಗೆ ಮುಕ್ತ ವಲಯ
ದೇಶದಲ್ಲಿ ಕೆಲವೊಂದು ವಲಯಗಳು ತೆರಿಗೆ ಮುಕ್ತವಾಗಿದೆ. ಅದರಲ್ಲಿ ಕೃಷಿ ವಲಯ ಒಂದಾಗಿದೆ. ಕೃಷಿಕರು ತಾವು ಬೆಳೆದ ಫಸಲಿಗೆ ತೆರಿಗೆ ಪಾವತಿಸುವುದಿಲ್ಲ. ಬದಲಾಗಿ ಅವರು ರಸಗೊಬ್ಬರ, ಬಿತ್ತನೆ ಬೀಜ ಸೇರಿದಂತೆ ಉಳಿದ ವಸ್ತುಗಳಿಗೆ ತೆರಿಗೆ ಪಾವತಿ ಮಾಡುತ್ತಾರೆ. ಹಾಗೆ ಇದರ ಜೊತೆಗೆ ಸಬ್ಸಿಡಿ ಕೂಡ ಪಡೆಯುತ್ತಾರೆ.

1 ರೂಪಾಯಿ ತೆರಿಗೆ ಕಟ್ಟದೆ ಅಷ್ಟೂ ಹಣ ಉಳಿಸೋದು ಹೇಗೆ…?
ಇದೀಗ ನಾವು ಸಂಬಳ ಪಡೆಯುವ ಜನರು ಈ ತೆರಿಗೆಯಿಂದ ಪಾರಾಗುವುದು ಹೇಗೆ…? ಎನ್ನುವ ಬಗ್ಗೆ ತಿಳಿದುಕೊಳ್ಳೋಣ. ಇದಕ್ಕೆ ಉಡುಪಿ ಮೂಲದ ಹವ್ಯಾಸಿ ಟ್ರಾವೆಲ್ ಬ್ಲಾಗರ್ ಶ್ರೀನಿಧಿ ಹಂಡಾ ಅವರು ಒಂದು ಸಲಹೆಯನ್ನು ನೀಡಿದ್ದಾರೆ. ಅವರ ಈ ಸಲಹೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೌದು ಶ್ರೀನಿಧಿ ಹಂಡಾ ಅವರ ಪ್ರಕಾರ, ” ತೆರಿಗೆ ಉಳಿಸಲು ಮನೆಯಲ್ಲಿ ಹುಲ್ಲು ಬೆಳೆಯಬೇಕಂತೆ. ಇದನ್ನು ನೀವು ನಿಮ್ಮ ಮನೆಯಲ್ಲಿ, ಬಾಲ್ಕನಿಯಲ್ಲಿ ಅಥವಾ ನಿಮ್ಮ ಟೆರೇಸ್‌ ನಲ್ಲಿ ಮಾಡಬಹುದು, ಮತ್ತು ಇದು ತುಂಬಾ ಕಾನೂನು ಪ್ರಕ್ರಿಯೆಯಾಗಿದೆ. ನಿಮಗೆ ಯಾವುದೇ ಸಂಬಳ ಬೇಡವೆಂದು ನಿಮ್ಮ ಕಂಪನಿಯ HR ಗೆ ತಿಳಿಸಿ.

Join Nadunudi News WhatsApp Group

ಮತ್ತು ನಿಮ್ಮ ಕಂಪನಿಯು ನಿಮ್ಮ ಸಂಬಳದ ಪ್ರಕಾರ ನಿಮ್ಮಿಂದ ಹುಲ್ಲು ಖರೀದಿಸಬೇಕು ಎಂದು ನಿಮ್ಮ HR ಗೆ ತಿಳಿಸಿ. ನಿಮ್ಮ ಸಂಬಳ 50,000 ಆಗಿದ್ದರೆ, ಅಷ್ಟು ಪ್ರಮಾಣದ ಹುಲ್ಲು ಖರೀದಿಸಲು ಹೇಳಿ. ಇದು ಸಂಪೂರ್ಣ ಕಾನೂನು ಪ್ರಕ್ರಿಯೆಯಾಗಿದೆ. ಹೀಗೆ ಮಾಡುವುದಿರಿಂದ ನಿಮ್ಮ ಆದಾಯವು ಶೂನ್ಯವಾಗುತ್ತದೆ. ಜೊತೆಗೆ ಕೃಷಿ ವಲಯ ತೆರಿಗೆ ಮುಕ್ತವಾಗಿದೆ. ಹೀಗಾಗಿ ನಿಮ್ಮ ವೇತನಕ್ಕೆ ಯಾವುದೆ ಕತ್ತರಿ ಹಾಕದೆ ಸಂಪೂರ್ಣ ಹಣ ನಿಮ್ಮ ಕೈ ಸೇರುತ್ತದೆ ಎಂದಿದ್ದಾರೆ.”ಶ್ರೀ ನಿಧಿ ಹಂಡಾ ಅವರ ಈ ಸಲಹೆ ಸಿಎ ಅಖಿಲ್ ಪಚೋರಿ ಅವರ ಮನ ಗೆದ್ದಿದೆ. ಈ ವಿಡಿಯೋ ನೋಡಿದ ಮಂದಿ ನಿಜಕ್ಕೂ ಅಚ್ಚರಿಗೆ ಒಳಗಾಗಿದ್ದಾರೆ.

save 100% income tax
Image Credit: Tataaia

Join Nadunudi News WhatsApp Group