T20 Captain: ರೋಹಿತ್ ಶರ್ಮಾ ಬಳಿಕ ಯಾರಾಗ್ತಾರೆ T20 ಕ್ಯಾಪ್ಟನ್…? ಸಂಕಷ್ಟದಲ್ಲಿ ಹಾರ್ದಿಕ್ ಪಾಂಡ್ಯ

ರೋಹಿತ್ ಶರ್ಮಾ ಬಳಿಕ ಯಾರಾಗ್ತಾರೆ T20 ಕ್ಯಾಪ್ಟನ್...?

Team India Next T20 Captain: ಟಿ20 2024 ರಲ್ಲಿ ಭಾರತ ವಿಶ್ವಕಪ್ ಗೆದ್ದು ಹಲವು ವರ್ಷಗಳ ಬಳಿಕ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅಂತಿಮ ಪಂದ್ಯದ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಿ20ಗೆ ವಿದಾಯ ಹೇಳಿದ್ದಾರೆ. ಮುಂದಿನ T20 ಪಂದ್ಯದಲ್ಲಿ ರೋಹಿತ್ ಶರ್ಮ ಇರುವುದಿಲ್ಲ.

ಇದರೊಂದಿಗೆ ಟಿ20 ಮಾದರಿಯಲ್ಲಿ ಭಾರತ ತಂಡದ ನಾಯಕನ ಸ್ಥಾನ ಖಾಲಿಯಾಗಿ ಉಳಿದಿದೆ. ಆದರೆ ರೋಹಿತ್ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಇಲ್ಲಿಯವರೆಗೆ ಟಿ20 ಸರಣಿಯ ನಾಯಕರಾಗಿದ್ದರು. ರೋಹಿತ್ ನಂತರ ಎಲ್ಲರೂ ಹಾರ್ದಿಕ್ ಅವರನ್ನು ಭವಿಷ್ಯದ ನಾಯಕ ಎಂದು ಫಿಕ್ಸ್ ಆಗಿದ್ದರು. ಆದರೆ ಈಗ ನಾಯಕತ್ವದ ಓಟದಲ್ಲಿ ಹೊಸ ಹೆಸರು ಕೇಳಿ ಬರುತ್ತಿದೆ. ಮುಂದಿನ T20 ಕ್ಯಾಪ್ಟನ್ ಆಗಲು ಈ ಆಟಗಾರನಿಗೆ ಲಕ್ ಬಂದಿದೆ ಎನ್ನಬಹುದು.

Team India Next T20 Captain
Image Credit: Times Now News

ರೋಹಿತ್ ಶರ್ಮಾ ಬಳಿಕ ಯಾರಾಗ್ತಾರೆ T20 ಕ್ಯಾಪ್ಟನ್…?
ಇನ್ನು 2026 ರ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಟೀಂ ಇಂಡಿಯಾ ಹೊಸ ನಾಯಕನನ್ನು ಸಿದ್ಧಪಡಿಸುತ್ತಿದೆ. ಹೊಸ ಕೋಚ್ ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆದಾರರು ತೀವ್ರ ಚರ್ಚೆ ನಡೆಸಿ ಹಾರ್ದಿಕ್ ಪಾಂಡ್ಯ ಅವರನ್ನು ಭವಿಷ್ಯದ ನಾಯಕತ್ವ ಯೋಜನೆಯಿಂದ ಹೊರಗಿಟ್ಟಿದ್ದಾರೆ.

ಸೂರ್ಯಕುಮಾರ್ ಯಾದವ್ ಅವರನ್ನು ನಾಯಕರನ್ನಾಗಿ ಮಾಡುವ ನಿರ್ಧಾರಕ್ಕೆ ಗಂಭೀರ್ ಹಾಗೂ ಕೋಚ್ ಗಳು ಬಂದಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಕೇಳಿಬರುತ್ತಿದೆ. ರೋಹಿತ್ ಮತ್ತು ಹಾರ್ದಿಕ್ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ಈಗಾಗಲೇ ಟಿ20 ಸರಣಿಗೆ ನಾಯಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. 2026ರ ಟಿ20 ವಿಶ್ವಕಪ್ ವರೆಗೆ ಸೂರ್ಯ ಟಿ20 ನಾಯಕರಾಗಿ ಮುಂದುವರಿಯಬೇಕೆಂದು ಬಿಸಿಸಿಐ ಬಯಸಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

Team India T20 Captain Suryakumar Yadav
Image Credit: Geosuper

ಈ ಆಟಗಾರನಿಗೆ ಒಲಿಯಿತು ಲಕ್…!
ರೋಹಿತ್ ಶರ್ಮಾ ಟಿ20ಗೆ ನಿವೃತ್ತಿ ಘೋಷಿಸಿದ ನಂತರ ನಾಯಕತ್ವದ ರೇಸ್‌ ನಲ್ಲಿ ಹಲವು ಹೆಸರುಗಳು ಕೇಳಿಬಂದಿದ್ದವು. ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ರುತುರಾಜ್ ಗಾಯಕ್ವಾಡ್ ಮತ್ತು ಶುಭಮನ್ ಗಿಲ್ ರೇಸ್ ಪಟ್ಟಿಯಲ್ಲಿದ್ದಾರೆ. ನಾಯಕತ್ವದ ವಿಷಯದಲ್ಲಿ ಬುಮ್ರಾ ಸೂರ್ಯ ಅವರಿಗೆ ಕಠಿಣ ಪೈಪೋಟಿ ನೀಡುತ್ತಿದ್ದಾರೆ.

Join Nadunudi News WhatsApp Group

ಏಕದಿನ ವಿಶ್ವಕಪ್‌ ಗೂ ಮುನ್ನ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಬುಮ್ರಾ ಭಾರತ ತಂಡವನ್ನು ಮುನ್ನಡೆಸಿದ್ದರು. ಆದರೆ ಕೆಲಸದ ಹೊರೆಯೊಂದಿಗೆ ಬುಮ್ರಾ ಮೇಲೆ ನಾಯಕತ್ವದ ಒತ್ತಡವನ್ನು ತರಬಾರದು ಎಂದು ಬಿಸಿಸಿಐ ಸೂರ್ಯ ಅವರನ್ನು ಆಯ್ಕೆ ಮಾಡುತ್ತಿದೆ ಎಂದು ತೋರುತ್ತದೆ. ಇದಲ್ಲದೆ, ಸೂರ್ಯ ಕಳೆದ ಕೆಲವು ವರ್ಷಗಳಿಂದ ಟಿ20 ಬ್ಯಾಟ್ಸ್‌ ಮನ್‌ ಗಳ ಪೈಕಿ ಟಾಪ್-2 ನಲ್ಲಿದ್ದಾರೆ. ಸೂರ್ಯ ಟಿ20ಯಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ಬೆನ್ನೆಲುಬು. ಇದರೊಂದಿಗೆ ಹಾರ್ದಿಕ್ ಬದಲಿಗೆ ಸೂರ್ಯಕುಮಾರ್ ನಾಯಕರಾಗುವ ನಿರೀಕ್ಷೆಯಿದೆ.

Team India T20 Captain
Image Credit: Indianexpress

Join Nadunudi News WhatsApp Group