ರೂಟ್ ಕ್ಯಾನಲ್ ಮಾಡಿಸಿಕೊಳ್ಳಲು ಹೋಗಿ ಈ ನಟಿಯ ಪರಿಸ್ಥಿತಿ ಈಗ ಏನಾಗಿದೆ ಗೊತ್ತಾ, ವೈದ್ಯ ಮಾಡಿದ್ದೇನು ನೋಡಿ.

ಒಮ್ಮೊಮ್ಮೆ ನಾವು ಮಾಡದ ತಪ್ಪುಗಳಿಗೆ ನಾವು ಬಹಳ ದೊಡ್ಡ ಶಿಕ್ಷೆಯನ್ನ ಅನುಭವಿಸಬೇಕಾಗುತ್ತದೆ ಎಂದು ಹೇಳಬಹುದು. ಹಲ್ಲು ಸಾಮಾನ್ಯವಾಗಿ ಜೀವನದಲ್ಲಿ ಒಮ್ಮೆಯಾದರೂ ಎಲ್ಲರಿಗೂ ಬಂದೆ ಬರುತ್ತದೆ ಮತ್ತು ಹಲ್ಲು ನೋವಿನ ಸಮಸ್ಯೆಯಿಂದ ಬಲಳಾದ ಮಾನವ ಇಲ್ಲ ಎಂದು ಹೇಳಬಹುದು. ಹಾಲು ನೋವು ಬಂದಾಗ ನಾವು ಸಾಮಾನ್ಯವಾಗಿ ವೈದ್ಯರ ಬಳಿ ಹೋಗಿ ಅದಕ್ಕೆ ಸರಿಯಾದ ಚಿಕಿತ್ಸೆಯನ್ನ ಪಡೆದುಕೊಳ್ಳುತ್ತೇವೆ. ಇನ್ನು ವಿಷಯಕ್ಕೆ ಬರುವುದಾದರೆ. ನಾವು ಹೇಳುವ ಈ ನಟಿಗೆ ಹಲ್ಲು ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಚಿಕಿತ್ಸೆ ಪಡೆದುಕೊಳ್ಳಲು ಹೋಗಿದ್ದಾರೆ, ಆದರೆ ವೈದ್ಯರ ಎಡವಟ್ಟಿನ ಕಾರಣ ಈಕೆ ದೊಡ್ಡ ಸಮಸ್ಯೆಯನ್ನ ಈಗ ಎದುರಿಸಬೇಕಾಗಿದೆ.

ಈಕೆ ತನಗಾದ ಸಮಸ್ಯೆಯನ್ನ ಸಾಮಾಜಿಕ ಮಾದ್ಯಮದಲ್ಲಿ ಹಂಚಿಕೊಂಡಿದ್ದು ಸದ್ಯ ಈ ನಟಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿಸ್ ಕಟ್ ವೈರಲ್ ಆಗಿದೆ ಎಂದು ಹೇಳಬಹುದು. ಹಾಗಾದರೆ ಈ ನಟಿ ಯಾರು ಮತ್ತು ಈಕೆಗೆ ಆದ ಸಮಸ್ಯೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ನಟಿ ಸ್ವಾತಿ ಸತೀಶ್ ಹೆಚ್ಚಿನ ಜನರಿಗೆ ತಿಳಿಯುತ್ತದೆ. ಈ ನಟಿಗೆ ಹಲ್ಲು ನೋವು ಕಾಣಿಸಿಕೊಂಡಿದ್ದು ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳುವ ಸಲುವಾಗಿ ಈಕೆ ಓರಿಕ್ಸ್ ಡೆಂಟಲ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿನ ವೈದ್ಯರು ಹಳ್ಳಿ ಹುಳುಕು ಇರುವ ಕಾರಣ ರೂಟ್ ಕ್ಯಾನಲ್ ಮಾಡಬೇಕು ಎಂದು ಹೇಳಿದ್ದಾರೆ.

Teeth root canal

ವೈದ್ಯರ ಸಲಹೆಯ ಮೇರೆಗೆ ಈಕೆ ರೂಟ್ ಕ್ಯಾನಲ್ ಮಾಡಲು ಒಪ್ಪಿಕೊಂಡಿದ್ದಾಳೆ. ಇನ್ನು ಅದೇ ರೀತಿಯಲ್ಲಿ ಆಸ್ಪತ್ರೆಯ ರೂಟ್ ಕ್ಯಾನಲ್ ವೈದ್ಯರೊಬ್ಬರು ಈಕೆಗೆ ರೂಟ್ ಕ್ಯಾನಲ್ ಮಾಡಿ ಚಿಕಿತ್ಸೆಯನ್ನ ನೀಡಿದರು. ಇನ್ನು ರೂಟ್ ಕ್ಯಾನಲ್ ಚಿಕೆತ್ಸೆ ಪೂರ್ಣವಾದ ಬಳಿಕ ಈ ನಟಿಯ ದವಡೆ ಊದಿಕೊಳ್ಳಲು ಆರಂಭ ಆಯಿತು. ರೂಟ್ ಕೆನ್ಯಾಲ್ ಮಾಡಿದ ಕಾರಣ ಹೀಗೆ ಆಗಿದೆ ಮತ್ತು ಎರಡು ಮೂರೂ ದಿನದಲ್ಲಿ ಅದು ಕಡಿಮೆ ಆಗುತ್ತದೆ ಎಂದು ವೈದ್ಯರು ಹೇಳಿದರು. ಸದ್ಯ ನಟಿಗೆ ಚಿಕೆತ್ಸೆ ನೀಡಿ 20 ದಿನಗಳು ಆಗಿದ್ದು ಈ ನಟಿಯ ದವಡೆ ಇನ್ನು ಕೂಡ ಊದಿಕೊಂಡು ಇದೆ.

ಇಂಟೆರ್ ನೆಟ್ ನಲ್ಲಿ ಈ ಆಸ್ಪತ್ರೆಗೆ ಬಹಳ ಒಳ್ಳೆಯ ರಾಂಕಿಂಗ್ ಇರುವ ಕಾರಣ ಈ ಆಸ್ಪತ್ರೆಗೆ ಚಿಕಿತ್ಸೆಯಲ್ಲಿ ಚಿಕೆತ್ಸೆ ಪಡೆದುಕೊಂಡೆ, ಆದರೆ ಈಗ ನನ್ನ ಪರಿಸ್ಥಿತಿ ಹೀಗೆ ಆಗಿದೆ ಎಂದು ನಟಿ ಕಣ್ಣೀರು ಹಾಕಿದ್ದಾರೆ. ರೂಟ್ ಕ್ಯಾನಲ್ ಮಾಡುವ ಸಮಯದಲ್ಲಿ ನನಗೆ ಅನಸ್ತೇಶಿಯಾ ಬದಲಿಗೆ ಸಾಲಿಸೈನಿಕ್ ಆಸಿಡ್ ನೀಡಿದ್ದಾರೆ ಮತ್ತು ಇದರನ್ನು ನನ್ನ ಬಾಯಿಯ ಅರ್ಧ ಬಾಗ ಬರ್ನ್ ಆಗಿದೆ. ಚಿಕಿತ್ಸೆ ನೀಡಿದ 2 ಅಥವಾ 3 ಘಂಟೆಯಲ್ಲಿ ಅದೂ ಸರಿ ಆಗಬೇಕು, ಆದರೆ 20 ದಿನವಾದರೂ ಸರಿ ಆಗಿಲ್ಲ. ವೈದ್ಯರಿಗೆ ಕರೆ ಮಾಡಿದರೆ ಅವರು ಮುಂಬೈ ಗೆ ಹೋಗಿದ್ದೇನೆ ಎಂದು ಹೇಳುತ್ತಿದ್ದಾರೆ. ಇದರ ನಂತರ ಬೇರೆ ಆಸ್ಪತ್ರೆಗೆ ಹೋದಾಗ ಅಲ್ಲಿ ವಿಷಯ ತಿಳಿದಿದೆ. ಈಗ ನಾನು ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ ಎಂದು ನಟಿ ಸ್ವಾತಿ ಹೇಳಿದ್ದಾರೆ.

Join Nadunudi News WhatsApp Group

Teeth root canal

Join Nadunudi News WhatsApp Group