Dual Sim: ಮೊಬೈಲ್ ಡಬಲ್ ಸಿಮ್ ಬಳಸುವವರಿಗೆ ಶಾಕಿಂಗ್ ಸುದ್ದಿ, ಜಾರಿಗೆ ಬಂತು ಹೊಸ ರೂಲ್ಸ್.

ಮೊಬೈಲ್ ಡಬಲ್ ಸಿಮ್ ಬಳಸುವವರಿಗೆ ಶಾಕಿಂಗ್ ಸುದ್ದಿ

Telecom Tariff Hike: ಸಾಮಾನ್ಯವಾಗಿ ಎಲ್ಲರು ಕೂಡ ಮೊಬೈಲ್ ಫೋನ್ ಗಳನ್ನೂ ಬಳಸುತ್ತಿದ್ದಾರೆ. ಇನ್ನು ಇತ್ತೀಚಿಗೆ ಬಿಡುಗಡೆಗೊಂಡಿರುವ ಎಲ್ಲ ಸ್ಮಾರ್ಟ್ ಫೋನ್ ಗಳು ಡ್ಯುಯೆಲ್ ಸಿಮ್ ಫೀಚರ್ ಗಳನ್ನೂ ಹೊಂದಿರುವುದರನ್ನು ಎರಡೆರಡು ಸಿಮ್ ಕಾರ್ಡ್ ಗಳನ್ನೂ ಉಪಯೋಗಿಸುವುದು ಸಹಜ.

ಇನ್ನು ಈಗಾಗಲೇ ದೇಶದಲ್ಲಿ ಕೇಂದ್ರ ಸರ್ಕಾರ ಸಿಮ್ ಖರೀದಿ ಹಾಗೂ ಬಳಕೆಯಲ್ಲಿ ಸಾಕಷ್ಟು ಹೊಸ ಹೊಸ ನಿಯಮವನ್ನು ರೂಪಿಸಿದೆ. ಸದ್ಯ ಎರಡೆರಡು ಸಿಮ್ ಕಾರ್ಡ್ ಬಳಕೆ ಮಾಡುತ್ತಿರುವವರಿಗೆ ಬೇಸರದ ಸುದ್ದಿಯೊಂದು ಹೊರಬಿದ್ದಿದೆ.

Telecom Tariff Hike
Image Credit: Gizbot

ಮೊಬೈಲ್ ಡಬಲ್ ಸಿಮ್ ಬಳಸುವವರಿಗೆ ಶಾಕಿಂಗ್ ಸುದ್ದಿ
ಮೊಬೈಲ್ ಫೋನ್ ಗಳಲ್ಲಿ ಎರಡೆರಡು ಸಿಮ್ ಗಳನ್ನೂ ಹೊಂದಿರುವವರಿಗೆ ಬಿಗ್ ಶಾಕಿಂಗ್ ನ್ಯೂಸ್ ಎದುರಾಗಿದೆ. ಟೆಲಿಕಾಂ ವಲಯದಲ್ಲಿ ಟ್ಯಾರಿಫ್ ಪ್ಲಾನ್‌ ಗಳ ಬೆಲೆಗಳು ಕೆಲವೇ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ. ಅಂದರೆ, ಸಿಮ್ ಕಾರ್ಡ್ ರೀಚಾರ್ಜ್‌ ಗಳ ವೆಚ್ಚವು ಹೆಚ್ಚಾಗುತ್ತದೆ. ಟೆಲಿಕಾಂ ಕಂಪನಿಗಳು ಕೊನೆಯದಾಗಿ ಡಿಸೆಂಬರ್ 2021 ರಲ್ಲಿ ಸುಂಕದ ಪ್ಲಾನ್ ಬೆಲೆಗಳನ್ನು ಹೆಚ್ಚಿಸಿವೆ. ಈಗ ಎರಡೂವರೆ ವರ್ಷಗಳ ನಂತರ, ಟೆಲಿಕಾಂ ತನ್ನ ಬೆಲೆಗಳನ್ನು ಪರಿಷ್ಕರಿಸಲು ಸಿದ್ಧವಾಗಿದೆ ಎಂದು ವರದಿಯಾಗಿದೆ.

ಜಾರಿಗೆ ಬಂತು ಹೊಸ ರೂಲ್ಸ್
ಇಲ್ಲಿಯವರೆಗೆ, ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಯೋಜನೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಮುಂದಿನ ಕೆಲವು ತಿಂಗಳುಗಳಲ್ಲಿ ಟೆಲಿಕಾಂ ಸಂಸ್ಥೆಯು ತನ್ನ ಪ್ರಿಪೇಯ್ಡ್ ಮತ್ತು ಪೋಸ್ಟ್‌ ಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ. ಎರಡನೇ ಸಿಮ್ ಅನ್ನು ಸಕ್ರಿಯವಾಗಿಡಲು ಬಳಕೆದಾರರು ಹೆಚ್ಚಿನ ಬೆಲೆಯನ್ನು ಪಾವತಿಸಬೇಕಾಗಬಹುದು. ಪ್ರಸ್ತುತ, ಜಿಯೋ, ಏರ್‌ ಟೆಲ್ ಮತ್ತು ವೊಡಾಫೋನ್ ಐಡಿಯಾ ಸಿಮ್ ಅನ್ನು ಸಕ್ರಿಯವಾಗಿಡಲು, ಕನಿಷ್ಠ 150 ರೂ. ಗಳನ್ನು ರೀಚಾರ್ಜ್ ಮಾಡಬೇಕಾಗಿದೆ.

recharge price hike news
Image Credit: Financialexpress

ಆದರೆ ಸುಂಕ ಹೆಚ್ಚಳದ ನಂತರ 150 ರೂ.ಗಳ ಬದಲಾಗಿ ಸಿಮ್ ಅನ್ನು ಸಕ್ರಿಯಗೊಳಿಸಲು ನೀವು 180 ರಿಂದ 200 ರೂ. ರಿಚಾರ್ಜ್ ಮಾಡಬೇಕಾಗಬಹುದು. ಇದರರ್ಥ ನೀವು ಎರಡು ಸಿಮ್‌ ಗಳನ್ನು ಇರಿಸಿಕೊಳ್ಳಲು ಬಯಸಿದರೆ, ನೀವು ಮಾಸಿಕ ಕನಿಷ್ಠ 400 ರೂಪಾಯಿಗಳನ್ನು ರೀಚಾರ್ಜ್ ಮಾಡಬೇಕಾಗುತ್ತದೆ. ಇದಲ್ಲದೆ, ರಿಲಯನ್ಸ್ ಜಿಯೋ, ಏರ್‌ ಟೆಲ್ ಶೀಘ್ರದಲ್ಲೇ 5G ರೀಚಾರ್ಜ್ ಯೋಜನೆಗಳನ್ನು ಪ್ರಾರಂಭಿಸುವ ಸಾಧ್ಯತೆಯಿದೆ. ಅಂದರೆ 4G ಬೆಲೆಯಲ್ಲಿ 5G ಕೂಡ ಲಭ್ಯವಿದೆ. ನೀವು ಮುಂದಿನ ದಿನಗಳಲ್ಲಿ ಒಂದು ಸಿಮ್ 5G ಮತ್ತು ಇನ್ನೊಂದು ಸಿಮ್ 4G ಅನ್ನು ಇಟ್ಟುಕೊಂಡರೆ, ನಿಮ್ಮ ಮಾಸಿಕ ವೆಚ್ಚವು ಸುಮಾರು 50 ಪ್ರತಿಶತದಷ್ಟು ಹೆಚ್ಚಾಗಲಿದೆ.

Join Nadunudi News WhatsApp Group

dual sim users in india
Image Credit: Whatalife

Join Nadunudi News WhatsApp Group