Yuva Nidhi: ದಿಡೀರ್ ಯುವನಿಧಿ ಯೋಜನೆ ನಿಯಮ ಬದಲಿಸಿದ ಸರ್ಕಾರದ, ಈ ದಾಖಲೆ ಕೊಡದಿದ್ದರೆ ಬರಲ್ಲ ಹಣ

ಯುವ ನಿಧಿ ಯೋಜನೆಯ ಹಣವನ್ನು ಮುಂದಿನ ತಿಂಗಳು ಪಡೆಯಬೇಕಿದ್ದರೆ ಈ ದಾಖಲೆ ನೀಡುವುದು ಕಡ್ಡಾಯವಾಗಿದೆ

These Document Is Mandatory For Yuva Nidhi: ಇನ್ನು 2022 -23 ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಇಲ್ಲದವರಿಗೆ ರಾಜ್ಯ ಸರ್ಕಾರದ ಯುವ ನಿಧಿ ಯೋಜನೆಯನ್ನು ಜಾರಿಗೊಳಿಸಿದೆ. ವಿಧಾನಸಭಾ ಚುನವಣಾ ಸಮಯದಲ್ಲಿ ಘೋಷಣೆಯಾಗಿದ್ದ Yuva Nidhi ಯೋಜನೆ ಎಂಟು ತಿಂಗಳ ನಂತರ ಅನುಷ್ಠಾನಗೊಂಡಿದೆ.

ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಯುವ ನಿಧಿ ಕೊನೆಯದಾಗಿ ಅನುಷ್ಠಾನಗೊಂಡಿದೆ. ಪದವಿ ವಿದ್ಯಾರ್ಥಿಗಳಿಗೆ 3,000 ಹಾಗೂ ಡಿಪ್ಲೊಮೊ ವಿದ್ಯಾರ್ಥಿಗಳಿಗೆ 1,500 ಮಾಸಿಕ ನಿರುದ್ಯೋಗ ಭತ್ಯೆ ದೊರೆಯಲಿದೆ. ಇದೀಗ ಯುವ ನಿಧಿ ಯೋಜನೆಗೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಯಾಗಿದೆ.

These Document Is Mandatory For Yuva Nidhi
Image Credit: Mahalakshmischeme

ದಿಡೀರ್ ಯುವನಿಧಿ ಯೋಜನೆ ನಿಯಮ ಬದಲಿಸಿದ ಸರ್ಕಾರದ
ಸದ್ಯ ರಾಜ್ಯ ಸರ್ಕಾರ ನಿರುದ್ಯೋಗ ಭತ್ಯೆ ಪಡೆಯುತ್ತಿರುವವರಿಗೆ ಹೊಸ ರೂಲ್ಸ್ ಜಾರಿಮಾಡಿದೆ. ಯುವ ನಿಧಿ ಯೋಜನೆಗೆ ಸರ್ಕಾರ ವಿಧಿಸಿರುವ ನಿಯಮಗಳ ಉಲ್ಲಂಘನೆ ಆಗಬಾರದು ಎನ್ನುವ ಕಾರಣದಿಂದ ಸರ್ಕಾರ ಈ ಹೊಸ ನಿಯಮವನ್ನು ಜಾರಿಗೊಳಿಸಿದೆ. ನಿರುದ್ಯೋಗ ಭತ್ಯೆ  ಪಡೆಯಬೇಕಿದ್ದರೆ ಈ ನಿಯಮ ಪಾಲನೆ ಕಡ್ಡಾಯವಾಗಿದೆ. ನೀವು ಯುವ ನಿಧಿ ಯೋಜನೆಯ ಹಣವನ್ನು ಮುಂದಿನ ತಿಂಗಳು ಪಡೆಯಬೇಕಿದ್ದರೆ ಈ ದಾಖಲೆ ನೀಡುವುದು ಕಡ್ಡಾಯವಾಗಿದೆ.

ಈ ದಾಖಲೆ ಕೊಡದಿದ್ದರೆ ಬರಲ್ಲ ಹಣ
ನಿರುದ್ಯೋಗ ಭತ್ಯೆ ಪಡೆಯುವ ಫಲಾನುಭವಿಗಳು ಪ್ರತಿ ತಿಂಗಳು ಸ್ವಯಂ ಘೋಷಿತ ಪ್ರಮಾಣಪತ್ರವನ್ನು ಅಪ್‌ ಲೋಡ್ ಮಾಡಬೇಕು ಎಂದು ರಾಜ್ಯ ಸರ್ಕಾರ ಘೋಷಿಸಿದೆ. NAD (National Academy Depository) ಬಳಿ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಪದವೀಧರರ ಪ್ರಮಾಣಪತ್ರಗಳಿವೆ.

Yuva Nidhi Scheme Latest News Updates
Image Credit: Studybizz

ಅಲ್ಲಿಂದ ಮಾಹಿತಿ ಪಡೆಯಲಾಗುತ್ತಿದೆ. ದಾಖಲೆಗಳು ತಾಳೆಯಾಗಿದ್ದು, ಫಲಿತಾಂಶ ಬಂದ ಆರು ತಿಂಗಳ ನಂತರ ಅಭ್ಯರ್ಥಿಗಳಿಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ. ಪ್ರತಿ ತಿಂಗಳು ಅಭ್ಯರ್ಥಿಗಳು ತಾವು ಉದ್ಯೋಗ ಪಡೆದಿಲ್ಲ ಮತ್ತು ಉನ್ನತ ಶಿಕ್ಷಣಕ್ಕೆ ಹೋಗಿಲ್ಲ ಎಂದು ಸ್ವಯಂ ಘೋಷಿತ ಪ್ರಮಾಣಪತ್ರವನ್ನು ಅಪ್‌ ಲೋಡ್ ಮಾಡಬೇಕು ಎಂದು ಕೌಶಲ್ಯಾಭಿವೃದ್ಧಿ ಸಚಿವ ಶರಣಪ್ರಕಾಶ ಪಾಟೀಲ ಈ ಕುರಿತು ಹೇಳಿಕೆ ನೀಡಿದ್ದಾರೆ. ಸ್ವಯಂ ಘೋಷಿತ ಪ್ರಮಾಣಪತ್ರವನ್ನು ಅಪ್‌ ಲೋಡ್ ಮಾಡಿದರೆ ಮಾತ್ರ ಫಲಾನುಭವಿಗಳು ನಿರುದ್ಯೋಗ ಭತ್ಯೆಯನ್ನು ಪಡೆಯಲು ಸಾಧ್ಯವಾಗುತ್ತದೆ.

Join Nadunudi News WhatsApp Group

Join Nadunudi News WhatsApp Group