Online Scam: ನಿಮ್ಮ ಮೊಬೈಲ್ ಗೆ ಈ ಮೆಸೇಜ್ ಬಂದರೆ ತಕ್ಷಣ ಡಿಲೀಟ್ ಮಾಡಿ, ಕೇಂದ್ರದ ಆದೇಶ

ಈ ಮೆಸೇಜ್ ನಿಮಗೆ ಬಂದ್ರೆ ತಕ್ಷಣ ಡಿಲೀಟ್ ಮಾಡಿ.

Three Month Free Recharge Scam: ಸದ್ಯ ಎಲ್ಲೆಡೆ ಆನ್ಲೈನ್ ವಂಚನೆ ಹಲವು ವಿಧಾನದ ಮೂಲಕ ನಡೆಯುತ್ತಿದೆ. ಹೊಸ ಹೊಸ ಪ್ಲಾನ್ ಮಾಡಿಕೊಂಡು ಸೈಬರ್ ಕ್ರಿಮಿನಲ್ ಗಳು ಜನಸಾಮಾನ್ಯರನ್ನು ವಂಚಿಸುತ್ತಿದ್ದಾರೆ. ಹಲವು ಸಮಯದಿಂದ ಕೂಡಿಟ್ಟ ಹಣವನ್ನು ವಂಚಕರು ಕ್ಷಣಾರ್ಧದಲ್ಲಿ ಕಬಳಿಸುತ್ತಿದ್ದಾರೆ.

ವಂಚನೆಯ ತಡೆಗಾಗಿ ಎಷ್ಟೇ ಕ್ರಮ ಕೈಗೊಳ್ಳುತ್ತಿದ್ದರು ಕೂಡ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸದ್ಯ ಆನ್ಲೈನ್ ನಲ್ಲಿ ಹೊಸ ರೀತಿಯ ಸ್ಕ್ಯಾಮ್ ಶುರುವಾಗಿದೆ. ನೀವು ಈ ಹೊಸ ಸ್ಕ್ಯಾಮ್ ಗೆ ಬಲಿಯಾಗದಿರಲು ಈ ಲೇಖನದಲ್ಲಿನ ಮಾಹಿತಿ ತಿಳಿದುಕೊಳ್ಳುವುದು ಉತ್ತಮ. ನಾವೀಗ ಈ ಲೇಖನದಲ್ಲಿ ಸದ್ಯ ನಡೆಯುತ್ತಿರುವ ಹೊಸ ಸ್ಕ್ಯಾಮ್ ನ ಬಗ್ಗೆ ಮಾಹಿತಿ ನೀಡಲಿದ್ದೇವೆ.

Free Recharge Scam
Image Credit: Gizbot

ಬೆಲೆ ಹೆಚ್ಚಳದ ಕಾರಣ ಮೂರು ತಿಂಗಳ ರಿಚಾರ್ಜ್ ಫ್ರೀ…!
ಸೈಬರ್ ಕ್ರಿಮಿನಲ್ ಗಳು ವಂಚನೆಗಾಗಿ ಹಲವಾರು ಮಾರ್ಗಗಳನ್ನು ಹುಡುಕುತ್ತ ಇರುತ್ತಾರೆ. ಈಗಂತೂ ವಾಟ್ಸಾಪ್ ನಲ್ಲಿ ಹಲವು ವಿಧಾನದ ಮೂಲಕ ವಂಚನೆ ನಡೆಯುತ್ತಿದೆ ಎನ್ನಬಹುದು. ಸದ್ಯ ದೇಶದಲ್ಲಿ ಜಿಯೋ ಮತ್ತು ಏರ್ಟೆಲ್ ಕಂಪನಿಗಳು ತನ್ನ ರಿಚಾರ್ಜ್ ದರವನ್ನು ಹೆಚ್ಚಿಸಿದೆ. ಸದ್ಯ ಇದಕ್ಕೆ ಸಂಬಂಧಿಸಿದಂತೆ ಜನರನ್ನು ಮೋಸಗೊಳಿಸಲು ಹೊಸ ಪ್ಲಾನ್ ಹಾಕಲಾಗಿದೆ. ಮೂರು ತಿಂಗಳ ಫ್ರೀ ರಿಚಾರ್ಜ್ ನ ಸಂದೇಶದೊಂದಿಗೆ ಇದೀಗ ಹೊಸ ರೀತಿಯ ಸ್ಕ್ಯಾಮ್ ಶುರುವಾಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ಮೆಸೇಜ್ ನಿಮಗೆ ಬಂದ್ರೆ ತಕ್ಷಣ ಡಿಲೀಟ್ ಮಾಡಿ
ವಂಚಕರು, ಖಾತೆಯ ವಿವರಗಳು ಅಥವಾ ಪ್ಯಾನ್ ಕಾರ್ಡ್ ಮಾಹಿತಿಯನ್ನು ನವೀಕರಿಸಲು ಬ್ಯಾಂಕ್‌ ಗಳಿಂದಲೇ ಮೋಸದ ಸಂದೇಶಗಳನ್ನು ಕಳುಹಿಸುತ್ತಾರೆ. ಸಂದೇಶ ಕಳುಹಿಸುವ ವೇದಿಕೆಯಲ್ಲಿ WhatsApp ಸಂದೇಶವನ್ನು ಪ್ರಸಾರ ಮಾಡಲಾಗುತ್ತಿದೆ. ಇನ್ನು 3 ತಿಂಗಳ ಉಚಿತ ರೀಚಾರ್ಜ್‌ ಗೆ ಮಾನ್ಯವಾಗಿರುತ್ತದೆ ಮತ್ತು ಲಿಂಕ್ ಅನ್ನು ಕ್ಲಿಕ್ ಮಾಡಲು ಬಳಕೆದಾರರನ್ನು ಕೇಳುತ್ತದೆ ಎಂದು ಸಂದೇಶವು ಹೇಳುತ್ತದೆ.

Three Month Free Recharge Scam
Image Credit: tv9hindi

ನೀವು ಉಚಿತ ರಿಚಾರ್ಜ್ ನ ಆಮಿಷಕ್ಕೆ ಒಳಗಾದರೆ ನೀವು ನಷ್ಟವನ್ನು ಅನುಭವಿಸಬೇಕಾಗುತ್ತದೆ. ಇಂತಹ ಮೆಸೇಜ್ ಬಂದ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗುವುದಂತೂ ಖಂಡಿತ. ಆದಾಗ್ಯೂ, ಪಿಐಬಿ ಫ್ಯಾಕ್ಟ್ ಚೆಕ್ ಈ ಸಂದೇಶವನ್ನು ಟ್ವಿಟರ್‌ ಗೆ ತೆಗೆದುಕೊಂಡು ಸಂದೇಶವು ಸಂಪೂರ್ಣವಾಗಿ ನಕಲಿ ಎಂದು ಘೋಷಿಸಿದೆ. ಸರ್ಕಾರವು ಅಂತಹ ಯಾವುದೇ ಯೋಜನೆಯನ್ನು ಘೋಷಿಸಿಲ್ಲ ಎಂದು PIB ಫ್ಯಾಕ್ಟ್ ಚೆಕ್ ವರದಿ ಮಾಡಿದೆ. ಹೀಗಾಗಿ ನೀವು ಪೂರ್ಣ ಮಾಹಿತಿ ಇಲ್ಲದೆ ಯಾವುದೇ ಸಂದೇಶವನ್ನು ನಂಬಲು ಹೋಗದಿರುವುದು ಉತ್ತಮ.

Join Nadunudi News WhatsApp Group

Scam Alert
Image Credit: Boehringer-ingelheim

Join Nadunudi News WhatsApp Group