Tirumala Temple Free Darshan: ತಿರುಪತಿ ತಿಮ್ಮಪ್ಪನ ದರ್ಶನ ಮಾಡುವವರಿಗೆ ಗುಡ್ ನ್ಯೂಸ್, ಇನ್ಮುಂದೆ ಇವರಿಗೆ ಉಚಿತ ದರ್ಶನ.

ತಿರುಪತಿ ತಿಮ್ಮಪ್ಪನ ದರ್ಶನ ಮಾಡುವವರಿಗೆ ಗುಡ್ ನ್ಯೂಸ್

Tirumala Temple Free Darshan Latest Update: ತಿರುಪತಿಯ ತಿಮ್ಮಪ್ಪನ (Tirumala Tirupati) ದರ್ಶನ ಪಡೆಯಲು ದಿನನಿತ್ಯ ಸಾವಿರಾರು ಭಕ್ತರು ಹಾಜರಿರುತ್ತಾರೆ. ತಿರುಮಲ ತಿಮ್ಮಪನ ದೇವಸ್ಥಾನವು ಅತಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದೆ. ಇನ್ನು ಭಕ್ತರಿಗಾಗಿ ದೇವಸ್ಥಾನದಲ್ಲಿ ಸಾಕಷ್ಟು ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತದೆ.

ಹಿರಿಯ ನಾಗರಿಕರು, ಗರ್ಭಿಣಿಯರು, ವೃದ್ದರು ಸೇರಿದಂತೆ ಹೆಚ್ಚಿನ ಜನರಿಗೆ ತಿರುಪತಿ ತಿಮ್ಮಪ್ಪನ ದೇವಾಲಯದಲ್ಲಿ ವಿಶೇಷ ಸೌಲಭ್ಯಗಳಿವೆ. ಇದೀಗ ತಿರುಮಲ ಟ್ರಸ್ಟ್ ನವರು ಸಣ್ಣ ಮಕ್ಕಳಿಗೆ ತಿಮ್ಮಪ್ಪನ ಸನ್ನಿಧಾನದಲ್ಲಿ ವಿಶೇಷ ಸೌಲಭ್ಯವನ್ನು ನೀಡಲು ಮುಂದಾಗಿದ್ದಾರೆ. ಇನ್ನು ಟಿಟಿಡಿ ಮಕ್ಕಳಿಗಾಗಿ ಒದಗಿಸಿದ ವಿಶೇಷ ಸೌಲಭ್ಯದ ಬಗ್ಗೆ ಮಾಹಿತಿ ತಿಳಿಯೋಣ.

Tirumala Temple Free Darshan Latest Update
Image Credit: India TV News

ತಿರುಪತಿ ತಿಮ್ಮಪ್ಪನ ದರ್ಶನ ಮಾಡುವವರಿಗೆ ಗುಡ್ ನ್ಯೂಸ್
ಭಕ್ತರಿಗೆ ತಿಮ್ಮಪ್ಪನ ದರ್ಶನ ಪಡೆಯಲು ವಿಶೇಷ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತದೆ. ವೃದ್ಧರಿಗೆ ಹಾಗೂ ಮಹಿಳೆಯರಿಗೆ ವಿವಿಧ ಸೌಲಭ್ಯಗಳನ್ನು ನೀಡಲಾಗಿದೆ. ಇದೀಗ 12 ವರ್ಷದ ಒಳಗಿನ ಮಕ್ಕಳಿಗೆ ತಿಮ್ಮಪ್ಪನ ದರ್ಶನ ಪಡೆಯಲು ವಿಶೇಷ ಅವಕಾಶವಿದೆ. 12 ವರ್ಷದೊಳಗಿನ ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಉಚಿತ ದರ್ಶನ ಸೇವೆ ನೀಡಲು ಟಿಟಿಡಿ ವಿಶೇಷ ದರ್ಶನಕ್ಕೆ ಆದ್ಯತೆ ನೀಡಿದೆ. 12 ವರ್ಷದೊಳಗಿನ ಮಕ್ಕಳಿರುವ ಪೋಷಕರು ಈ ಹೊಸ ಸೌಲಭ್ಯದೊಂದಿಗೆ ತಿಮ್ಮಪ್ಪನ ದರ್ಶನವನ್ನು ಪಡೆಯಬಹುದು.

ಇನ್ಮುಂದೆ ಇವರಿಗೆ ಉಚಿತ ದರ್ಶನ
ಇನ್ನು ಮಕ್ಕಳಿಗಾಗಿ ನೀಡಿರುವ ಈ ವಿಶೇಷ ಸೌಲಭ್ಯವನ್ನು ಪಡೆಯಲು ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಮಕ್ಕಳ ಪೋಷಕರು ಮಗುವಿನ ಮೂಲ ಜನನ ಪ್ರಮಾಣಪತ್ರ ಕಡ್ಡಾಯವಾಗಿ ತರಬೇಕು. ಈ ದರ್ಶನಕ್ಕೆ ಹೋಗಲು ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರದಂತಹ ಯಾವುದೇ ಪರಿಶೀಲನೆ ದಾಖಲೆಯನ್ನು ಟಿಟಿಡಿಗೆ ತೋರಿಸಬೇಕು. ಪೋಷಕರೂ ತಮ್ಮ ಆಧಾರ್ ಕಾರ್ಡ್ ಅನ್ನು ಅಧಿಕಾರಿಗಳಿಗೆ ತೋರಿಸಬೇಕು. ಈ ಸುಪಥಮಾರ್ಗದ ಮೂಲಕ ಭಕ್ತರಿಗೆ ಕಲ್ಯಾಣೋತ್ಸವ ಸೇವೆಗೆ ಅವಕಾಶ ಕಲ್ಪಿಸಲಾಗಿದೆ. ಮಕ್ಕಳು ಸೇರಿದಂತೆ ಎರಡು ದಂಪತಿಗಳಿಗೆ ಅವಕಾಶ ನೀಡಲಾಗುತ್ತದೆ. 12 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಈ ವಿಶೇಷ ಸೌಲಭ್ಯ ಅನ್ವಯಿಸುತ್ತದೆ.

Tirumala Temple Free Darshan
Image Credit: News9live

Join Nadunudi News WhatsApp Group

Join Nadunudi News WhatsApp Group