Tirupati: ತಿರುಪತಿ ತಿಮ್ಮಪ್ಪನ ದರ್ಶನ ಮಾಡುವ ಎಲ್ಲರಿಗೂ ಹೊಸ ನಿಯಮ, ಆಡಳಿತ ಮಂಡಳಿಯ ಆದೇಶ.

ತಿರುಪತಿ ದೇವಸ್ಥಾನದ ದೇವರ ದರ್ಶನದಲ್ಲಿ ಬದಲಾವಣೆ ತಂದ ದೇವಸ್ಥಾನ ಆಡಳಿತ ಮಂಡಳಿ.

Tirumala Tirupati Temple Darshana Rules: ಇದೀಗ ತಿರುಪತಿ ತಿರುಮಲ ದೇವರ ದರ್ಶನಕ್ಕೆ ಹೋಗುವವರಿಗೆ ಹೊಸ ಸುದ್ದಿ ಒಂದು ಹೊರ ಬಿದ್ದಿದೆ. ತಿರುಪತಿ ತಿರುಮಲ ದೇವಸ್ಥಾನದಲ್ಲಿ ಕೆಲವು ನಿಯಮಗಳು ಜಾರಿ ಆಗಿವೆ. ಇದರ ಬಗ್ಗೆ ಮಾಹಿತಿ ತಿಳಿಯೋಣ.

ತಿರುಮಲ ತಿರುಪತಿ ದೇವಸ್ಥಾನ ಹೊಸ ನಿಯಮ
ತಿರುಮಲ ತಿರುಪತಿ ದೇವಸ್ಥಾನ ಮೂರೂ ವರ್ಷಗಳ ಕೋವಿಡ್ ನಿಯಮಗಳನ್ನು ಸಡಿಲಗೊಳಿಸಿದ ನಂತರ ಬೇಸಿಗೆ ಸಂದರ್ಭದಲ್ಲಿ ಭಾರಿ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಿದ್ದು ದೇವರ ದರ್ಶನದಲ್ಲಿ ಭಾರಿ ವಿಳಂಬವಾಗುತ್ತಿದೆ.

Change in God's Darshan in Tirupati Temple
Image Credit: wikipedia

ಇದರಿಂದ ದರ್ಶನ ನಿಯಮಗಳಲ್ಲಿ ಬದಲಾವಣೆ ಮಾಡಲು ದೇವಸ್ಥಾನ ಆಡಳಿತ ಮಂಡಳಿ ನಿರ್ಧರಿಸಿದ್ದಾರೆ. ಜೂನ್ 30 ರ ವರೆಗೆ ಹೊಸ ನಿಯಮಗಳು ಜಾರಿಯಲ್ಲಿರುತ್ತದೆ ಎಂದು ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ ಪ್ರಕಟಣೆಯಲ್ಲಿ ಹೇಳಿದ್ದಾರೆ.

ತಿರುಪತಿ ದೇವಸ್ಥಾನದಲ್ಲಿ ದೇವರ ದರ್ಶನದಲ್ಲಿ ಬದಲಾವಣೆ
ಇನ್ನು ಟೋಕನ್ ಇಲ್ಲದೆ ಉಚಿತ ದರ್ಶನ ಮಾಡುವ ಭಕ್ತರಿಗೆ ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ದರ್ಶನ ಸಿಗಲು ಸುಮಾರು 30 ರಿಂದ 40 ಗಂಟೆಗಳ ಸಮಯ ತೆಗೆದುಕೊಳ್ಳುತ್ತಿದೆ ಎಂದು ಟಿಟಿಡಿ ಹೇಳಿದೆ. ಆದ್ದರಿಂದ ಜೂನ್ 30 ರವರೆಗೆ ವಿಐಪಿ ದರ್ಶನ ಮತ್ತು ಆರ್ಜಿತ ಸೇವೆಗಳಲ್ಲಿ ಬದಲಾವಣೆಗಳನ್ನು ಮಾಡಿದೆ.

ಹೊಸ ನಿಯಮದ ಪ್ರಕಾರ ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ಸುಪ್ರಭಾತ ಸೇವೆಯಲ್ಲಿನ ವಿವೇಚನಾ ಕೋಟಾವನ್ನು ಟಿಟಿಡಿ ಹಿಂಪಡೆದಿದ್ದು, ಸಾಮಾನ್ಯ ಭಕ್ತರಿಗೆ 20 ನಿಮಿಷಗಳ ಉಳಿತಾಯವಾಗಲಿದೆ.

Join Nadunudi News WhatsApp Group

tirupati tirumala temple updates
Image Credit: thehindu

ಶುಕ್ರವಾರ ಶನಿವಾರ ಮತ್ತು ಭಾನುವಾರದಂದು ವಿಐಪಿ ಶಿಫಾರಸು ಪತ್ರಗಳನ್ನು ಸ್ವೀಕರಿಸದಿರಲು ನಿರ್ಧರಿಸಲಾಗಿದೆ. ಆದರೆ ಸ್ವಯಂ ವಿಐಪಿಗಳಿಗೆ ಮಾತ್ರ ದರ್ಶನವನ್ನು ಅನುಮತಿಸಲಾಗಿದೆ, ಇದು ಈ ದಿನಗಳಲ್ಲಿ ಪ್ರತಿ ದಿನ 3 ಗಂಟೆಗಳ ದರ್ಶನ ಸಮಯವನ್ನು ಉಳಿಸುತ್ತದೆ ಎಂದು ಟಿಟಿಡಿ ಹೇಳಿದೆ.

ಗುರುವಾರದಂದು ಏಕಾಂತಂನಲ್ಲಿ ತಿರುಪ್ಪವಾಡ ಸೇವೆ ಮಾಡಲು ಟಿಟಿಡಿ ನಿರ್ಧರಿಸಿದೆ, ಇದರಿಂದಾಗಿ 30 ನಿಮಿಷಗಳ ಉಳಿತಾಯವಾಗುತ್ತದೆ. ಸಾಮಾನ್ಯ ಭಕ್ತರು ದೀರ್ಘಕಾಲದ ವರೆಗೆ ಸರತಿ ಸಾಲಿನಲ್ಲಿ ಕಾಯುವುದನ್ನು ತಪ್ಪಿಸಲು. ತ್ವರಿತ ಮತ್ತು ಆರಾಮದಾಯಕವಾಗಿ ದೇವರ ದರ್ಶನವನ್ನು ಮಾಡುವಂತೆ ಅವಕಾಶ ನೀಡುವ ದೃಷ್ಟಿಯಿಂದ ಈ ನಿರ್ಧಾರಗಳನ್ನು ಜಾರಿ ಮಾಡಲಾಗಿದೆ ಎಂದು ಟಿಟಿಡಿ ತಿಳಿಸಿದೆ.

Join Nadunudi News WhatsApp Group