Tirupati Laddu: ಲಡ್ಡುಗಳಿಂದ ಒಂದು ವರ್ಷಕ್ಕೆ ತಿರುಪತಿ ದೇವಾಲಯಕ್ಕೆ ಬರುವ ಲಾಭ ಎಷ್ಟು, ಶ್ರೀಮಂತ ದೇವಾಲಯ.

ಒಂದು ವರ್ಷಕ್ಕೆ ತಿರುಪತಿ ದೇವಾಲಯಕ್ಕೆ ಬರುವ ಲಾಭದ ಬಗ್ಗೆ ಮಾಹಿತಿ.

Tirupati Temple: ಭಾರತದ ಶ್ರೀಮಂತ ದೇವಾಲಯವಾದ ತಿರುಪತಿ ವೆಂಕಟರಮಣನ (Tirupati Temple) ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ತಿರುಮಲ ತಿಮ್ಮಪನ ದೇವಸ್ಥಾನವು ಅತಿ ಹೆಚ್ಚು ಪ್ರಸಿದ್ದಿಯನ್ನು ಪಡೆದಿದೆ. ಇನ್ನು ಭಕ್ತರಿಗಾಗಿ ದೇವಸ್ಥಾನದಲ್ಲಿ ಸಾಕಷ್ಟು ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತದೆ.

ತಿಮಪ್ಪನ ದರ್ಶನಕ್ಕಾಗಿ ಬರುವ ಭಕ್ತರಿಗಾಗಿ ತಿಮ್ಮಪ್ಪನ ಸನ್ನಿಧಾನದಲ್ಲಿ ವಿಶೇಷ ಸೌಲಭ್ಯವನ್ನು ಒದಗಿಸಲಾಗಿದೆ. ಭಕ್ತರಿಗೆ ತಿಮ್ಮಪ್ಪನ ದರ್ಶನ ಪಡೆಯಲು ವಿಶೇಷ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತದೆ. ವೃದ್ಧರಿಗೆ, ಮಹಿಳೆಯರಿಗೆ ಮಕ್ಕಳಿಗೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತದೆ. ವಿವಿಧ ಪ್ರದೇಶಗಳಿಂದ ತಿಮ್ಮನ ದರ್ಶನ ಪಡೆಯಲು ಭಕ್ತರು ಆಗಮಿಸುತ್ತಾರೆ.

Special Laddu Prasad is available at Tirupati Temple
Image Credit: Whatshot

ತಿರುಪತಿ ದೇವಸ್ಥಾನದಲ್ಲಿ ವಿಶೇಷ ಲಡ್ಡು ಪ್ರಸಾದ ಲಭ್ಯ
ತಿರುಪತಿ ತಿರುಮಲ ದೇವಸ್ಥಾನದಲ್ಲಿ ದೇವರ ದರ್ಶನ ಪಡೆಯುವವರಿಗೆ ವಿಶೇಷ ಪ್ರಸಾದಗಳು ದೊರೆಯುತ್ತವೆ. ಇದರಲ್ಲಿ ಲಡ್ಡು ಪ್ರಸಾದವು ಒಂದಾಗಿದೆ. ತಿರುಪತಿ ದೇವಾಲಯದಲ್ಲಿ ಲಡ್ಡು ಪ್ರಸಾದಕ್ಕೆ ಹೆಚ್ಚು ಪ್ರಾಮುಖ್ಯ ಇದೆ ಎನ್ನಬಹುದು. ಲಡ್ಡು ಪ್ರಸಾದವನ್ನು ಹೆಚ್ಚಿನ ಭಕ್ತರು ಸ್ವೀಕರಿಸುತ್ತಾರೆ. ಇನ್ನು ಈ ಲಡ್ಡು ಪ್ರಸಾದದಿಂದ ದೇವಸ್ಥಾನಕ್ಕೆ ವರ್ಷಕ್ಕೆ 326 ರಿಂದ 362 ಕೋಟಿ ಲಾಭ ಸಿಗುತ್ತದೆ ಎಂದು ಅಂದಾಜು ಮಾಡಲಾಗಿದೆ.

tirupati temple hair donation profit
Image Credit: Pinterest

ತಿರುಪತಿ ದೇವಾಲಯದಲ್ಲಿ ವಿಶೇಷ ಹರಕೆಯಿಂದ ಎಷ್ಟು ಲಾಭ ಸಿಗಲಿದೆ
ಇನ್ನು ತಿರುಪತಿ ತಿರುಮಲ ದೇವಸ್ಥಾನದಲ್ಲಿ ವಿಶೇಷ ಹರಕೆಗಳು ಸಹ ಇವೆ. ಅದರಲ್ಲಿ ದೇವರಿಗೆ ಮುಡಿ ಕೊಡುವ ಹರಕೆ ಸಹ ಒಂದಾಗಿವೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿತ್ಯ ತಿಮ್ಮಪ್ಪನಿಗೆ ಮುಡಿ ಕೊಡುತ್ತಾರೆ. ಇದರಿಂದ ಪ್ರತಿ ವರ್ಷ ದೇವಾಲಯಕ್ಕೆ ಲಾಭವಾಗುತ್ತದೆ. ಮುಡಿ ಹರಕೆಯಿಂದ ವರ್ಷಕ್ಕೆ 126 ಕೋಟಿ ಲಾಭ ಆಗುತ್ತದೆ ಎಂದು ಅಂದಾಜು ಮಾಡಲಾಗಿದೆ.

tirupati temple latest news
Image Credit: Thehansindia

ತಿರುಪತಿ ದೇವಸ್ಥಾನದಲ್ಲಿ ವಸತಿ ಗೃಹದಿಂದ ಆಗುವ ಲಾಭ
ಇನ್ನು ತಿರುಪತಿ ತಿರುಮಲ ದೇವಸ್ಥಾನದಲ್ಲಿ ದರ್ಶನಕ್ಕೆ ಬರುವ ಭಕ್ತರಿಗೆ ವಸತಿ ಸಹ ಲಭ್ಯವಿದೆ. ದೇವಸ್ಥಾನಕ್ಕೆ ಪ್ರತಿನಿತ್ಯ ದೂರದ ಭಕ್ತರು ಸಹ ಭೇಟಿ ನೀಡುತ್ತಾರೆ.

Join Nadunudi News WhatsApp Group

ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸುವುದರಿಂದ ದರ್ಶನ ಪಡೆಯಲು ಎರಡು ಮೂರೂ ದಿನವಾಗಬಹುದು. ಇದರಿಂದ ಅವರು ಅದೇ ದೇವಾಲಯದಲ್ಲಿ ಇರುವ ವಸತಿ ಗೃಹದಲ್ಲಿ ಉಳಿದುಕೊಳ್ಳುತ್ತಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ವಸತಿ ಗೃಹದಲ್ಲಿ ಉಳಿದುಕೊಳ್ಳುವುದರಿಂದ ದೇವಾಲಯಕ್ಕೆ ಲಾಭ ಆಗುತ್ತದೆ. ವಸತಿ ಗೃಹದಿಂದ ದೇವಾಲಯಕ್ಕೆ ವರ್ಷಕ್ಕೆ 95 ಕೋಟಿ ಲಾಭ ಆಗುತ್ತದೆ ಎಂದು ಅಂದಾಜು ಮಾಡಲಾಗಿದೆ.

Join Nadunudi News WhatsApp Group