Tirupati Temple Close: ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುವ ಭಕ್ತರಿಗೆ ಹೊಸ ನಿಯಮ, ದರ್ಶನ ಇಲ್ಲ.

Tirupati Temple Close: ತಿರುಪತಿ ತಿಮ್ಮಪ್ಪನ ದೇವಸ್ಥಾನ ಸಾಕಷ್ಟು ಪ್ರಸಿದ್ದಿಯನ್ನು ಪಡೆದಿದೆ. ಬೇರೆ ಬೇರೆ ರಾಜ್ಯದ ಜನರು ತಿರುಪತಿ ವೆಂಕಟರಮಣನ ದರ್ಶನವನ್ನು ಪಡೆಯಲು ಬರುತ್ತಾರೆ. ದಿನ ನಿತ್ಯ ಸಾವಿರಾರು ಜನಸಂಖ್ಯೆಯಲ್ಲಿ ತಿಮ್ಮಪ್ಪನ ದರ್ಶನ ಪಡೆಯಲು ಭಕ್ತಾದಿಗಳು ಬರುತ್ತಾರೆ. 

ತಿರುಪತಿ ದೇವಸ್ಥಾನದಲ್ಲಿ ದರ್ಶನಕ್ಕಾಗಿ ಹೊಸ ನಿಯಮ 

ತಿರುಪತಿ ವೆಂಕಟರಮಣನ (Tirupati Venkataramana) ದೇವಸ್ಥಾನದಲ್ಲಿ ದೇಗುಲದ ಆನಂದ ನಿಲಯಂ (Ananda Nilayam) ಚಿನ್ನದ ಲೇಪನವನ್ನು ಬದಲಾಯಿಸಲು ಯೋಚಿಸಿದೆ.

A new rule for devotees seeking darshan of Tirupati Thimmappa.
Image Credit: indiatvnews

ಆಂಧ್ರಪ್ರದೇಶದ (Andrapradesha) ತಿರುಪತಿ ಜಿಲ್ಲೆಯಲ್ಲಿರುವ ತಿರುಮಲ ದೇವಸ್ಥಾನದ ಮುಖ್ಯ ಗರ್ಭಗುಡಿಯನ್ನು 2023 ರಲ್ಲಿ ಆರರಿಂದ ಎಂಟು ತಿಂಗಳವರೆಗೆ ಮುಚ್ಚುವ ಸಾಧ್ಯತೆಯಿದೆ, ಭಾರತದ ಶ್ರೀಮಂತ ದೇವಾಲಯಗಳಲ್ಲಿ ಒಂದನ್ನು ನಿರ್ವಹಿಸುವ ತಿರುಮಲ ತಿರುಪತಿ ದೇವಸ್ಥಾನ ತಿರುಪತಿ ತಿಮ್ಮಪ್ಪನ ದೇಗುಲದ ಆನಂದ ನಿಲಯಂ ನ ಚಿನ್ನದ ಲೇಪನವನ್ನು ಬದಲಾಯಿಸಲು ಯೋಜಿಸಿದೆ.

ಆನಂದ ನಿಲಯಂ ಅಂದರೆ ಗರ್ಭಗುಡಿಯ ಮೇಲಿರುವ ಮೂರು ಅಂತಸ್ತಿನ ವಿಮಾನ. ಹಾಗಾದರೆ ಈ ಸಮಯದಲ್ಲಿ ಭಕ್ತರು ತಿರುಪತಿ ತುಮ್ಮಪ್ಪನ ದರ್ಶನವನ್ನು ಪಡೆಯುವುದು ಹೇಗೆ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.

Join Nadunudi News WhatsApp Group

The main sanctum sanctorum of the Tirumala temple in Andhra Pradesh's Tirupati district is likely to be closed for six to eight months in 2023.
Image Credit: indianexpress

ಇದಕ್ಕಾಗಿ, ಮುಖ್ಯ ದೇವಾಲಯದ ಪಕ್ಕದಲ್ಲಿ ತಾತ್ಕಾಲಿಕವಾಗಿ ತಿರುಪತಿ ವೆಂಕಟೇಶ್ವರ ದೇವರ ತದ್ರೂಪಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಭಕ್ತರ ದರ್ಶನಕ್ಕೆ ಅನುವು ಮಾಡಲು ಯೋಜಿಸಲಾಗಿದೆ ಎಂದು ಟಿಟಿಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದಕ್ಕೂ ಮುನ್ನ 1958 ರಲ್ಲಿ ಆನಂದ ನಿಲಯಕ್ಕೆ ಚಿನ್ನದ ಲೇಪನ ಮಾಡಲಾಗಿತ್ತು. ಆ ಸಮಯದಲ್ಲಿ ಚಿನ್ನದ ಲೇಪನ ಮಾಡಲು ಸುಮಾರು ಎಂಟು ವರ್ಷ ಬೇಕಾಗಿತ್ತು.

ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ 

ತಿರುಮಲ ದೇಗುಲದ ಆನಂದ ನಿಲಯವನ್ನು ನವೀಕರಿಸುವ ಟಿಟಿಡಿ ಟ್ರಸ್ಟ್ ಬೋರ್ಡ್ ನ ನಿರ್ಧಾರಕ್ಕೆ ಯಾರಿಂದಲೂ ವಿರೋಧ ಬಂದಿಲ್ಲ. ಆದರೆ ಪ್ರತಿನಿತ್ಯ ಬೃಹತ್ ಸಂಖ್ಯೆಯಲ್ಲಿ ಭೇಟಿ ನೀಡುವ ಭಕ್ತರನ್ನು ನಿಭಾಯಿಸುವುದು ಹೇಗೆ, ಇಂತಹ ಸಮಯದಲ್ಲಿ ದೇಗುಲದ ನವೀಕರಣ ಹೇಗೆ ಎಂದು ಭಕ್ತರ ಕಳವಳ ವ್ಯಕ್ತಪಡಿಸಿದ್ದಾರೆ.  ಇದಕ್ಕೆ ಟಿಟಿಡಿ ಅಧಿಕಾರಿಗಳು ಪರಿಹಾರವನ್ನು ಕಂಡುಕೊಂಡಿದ್ದಾರೆ.

Some of the temples will be closed due to works going on in the Tirupati temple
Image Credit: india

ಈಗಿನ ದೇಗುಲದ ಸಮೀಪದಲ್ಲಿ ತಾತ್ಕಾಲಿಕ ದೇವಾಲಯ “ಬಾಲಾಲಯʼʼ ನಿರ್ಮಿಸಲಾಗುವುದು. ಭಕ್ತರಿಗೆ ದೇವರ ದರ್ಶನಕ್ಕೆ ತಡೆಯಾಗದಂತೆ ವೆಂಕಟೇಶ್ವರ ದೇವರ ಪ್ರತಿಕೃತಿ ಮೂರ್ತಿಯನ್ನು ಸ್ಥಾಪಿಸಲಾಗುವುದು ಎಂದು ಟಿಟಿಡಿ ಅಧ್ಯಕ್ಷರಾದ ವೈವಿ ಸುಬ್ಬಾ ರೆಡ್ಡಿ ಹೇಳಿದ್ದಾರೆ.

ಚಿನ್ನದ ಲೇಪನ ಮಾಡುವ ಸಮಯದಲ್ಲಿ ಭಕ್ತಾದಿಗಳಿಗೆ ದೇವರ ದರ್ಶನ ಸಿಗುದಿಲ್ಲ

ಚಿನ್ನದ ಲೇಪನ ಮಾಡುವ ಸಮಯದಲ್ಲಿ ಮುಖ್ಯ ದೇಗುಲದಲ್ಲಿ ದರ್ಶನ ಸಾಧ್ಯವಿಲ್ಲ. ಎರಡು ಕಾರಣದಿಂದಾಗಿ ಇದು ಸಾಧ್ಯವಿಲ್ಲ. ಮೊದಲನೆಯದಾಗಿ ದೇವರ ಶಕ್ತಿಯನ್ನು ಬಾಲಾಯಾಲಂಗೆ ಕೊಂಡೊಯ್ಯುವ ಕಾರಣ ಭಕ್ತರು ಮುಖ್ಯ ದೇಗುಲಕ್ಕೆ ಪ್ರವೇಶಿಸುವುದಕ್ಕೆ ಅರ್ಥವಿಲ್ಲ.

The Tirupati temple will remain closed for some time as the repair work is going on
scrollImage Credit:

ಆ ಸಮಯದಲ್ಲಿ ಮೂಲ ಮೂರ್ತಿಗೆ ಯಾವುದೇ ಪ್ರಮುಖ ಪೂಜೆಗಳು, ಧಾರ್ಮಿಕ ಕ್ರಿಯೆಗಳು ನಡೆಯುವುದಿಲ್ಲ. ಎರಡನೆಯದು, ರಿಪೇರಿ ಕೆಲಸ ನಡೆಯುವ ಸಮಯದಲ್ಲಿ ಸಾವಿರಾರು ಭಕ್ತರು ದೇಗುಲ ಪ್ರವೇಶಿಸುವುದು ಸುರಕ್ಷತೆಯ ದೃಷ್ಟಿಯಿಂದ ಸರಿಯಲ್ಲ ಎಂದಿದ್ದಾರೆ.

Join Nadunudi News WhatsApp Group