Tirumala Tirupati: ತಿಮ್ಮಪ್ಪನ ದರ್ಶನ ಪಡೆಯುವ ಮಕ್ಕಳಿಗೆ ವಿಶೇಷ ಸವಲತ್ತು, ಹೊಸ ನಿಯಮ ಜಾರಿಗೆ ಬಂದಿದೆ.

ತಿರುಪತಿ ದೇವಸ್ಥಾನದಲ್ಲಿ ದರ್ಶನ ಮಾಡುವ ಮಕ್ಕಳಿಗಾಗಿ ಹೊಸ ನಿಯಮವನ್ನ ತಿರುಪತಿ ದೇವಸ್ಥಾನ ಸಮಿತಿ ಜಾರಿಗೆ ತಂದಿದೆ.

Tirumala Temple Free Darshan: ತಿರುಪತಿಯ ತಿಮ್ಮಪ್ಪನ (Tirumala Tirupati) ದರ್ಶನ ಪಡೆಯಲು ದಿನನಿತ್ಯ ಸಾವಿರಾರು ಭಕ್ತರು ಹಾಜರಿರುತ್ತಾರೆ. ತಿರುಮಲ ತಿಮ್ಮಪನ ದೇವಸ್ಥಾನವು ಅತಿ ಹೆಚ್ಚು ಪ್ರಸಿದ್ಧಿಯ್ನ್ನು ಪಡೆದಿದೆ.

ಇನ್ನು ಭಕ್ತರಿಗಾಗಿ ದೇವಸ್ಥಾನದಲ್ಲಿ ಸಾಕಷ್ಟು ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತದೆ. ಇದೀಗ ಸಣ್ಣ ಮಕ್ಕಳಿಗೆ ತಿಮ್ಮಪ್ಪನ ಸನ್ನಿಧಾನದಲ್ಲಿ ವಿಶೇಷ ಸೌಲಭ್ಯವನ್ನು ಒದಗಿಸಲಾಗಿದೆ. ಇನ್ನು ಟಿಟಿಡಿ ಮಕ್ಕಳಿಗಾಗಿ ಒದಗಿಸಿದ ವಿಶೇಷ ಸೌಲಭ್ಯದ ಬಗ್ಗೆ ಮಾಹಿತಿ ತಿಳಿಯೋಣ.

Tirumala Temple Free Darshan
Image Source: Republic World

ತಿಮ್ಮಪ್ಪನ ದರ್ಶನ ಪಡೆಯುವ ಮಕ್ಕಳಿಗೆ ವಿಶೇಷ ಸೌಲಭ್ಯ
ಭಕ್ತರಿಗೆ ತಿಮ್ಮಪ್ಪನ ದರ್ಶನ ಪಡೆಯಲು ವಿಶೇಷ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತದೆ. ವೃದ್ಧರಿಗೆ ಹಾಗೂ ಮಹಿಳೆಯರಿಗೆ ವಿವಿಧ ಸೌಲಭ್ಯಗಳನ್ನು ನೀಡಲಾಗಿದೆ. ಇದೀಗ ಒಂದು ವರ್ಷದ ಮಕ್ಕಳಿಗೆ ತಿಮ್ಮಪ್ಪನ ದರ್ಶನ ಪಡೆಯಲು ವಿಶೇಷ ಅವಕಾಶವಿದೆ.

ಒಂದು ವರ್ಷದೊಳಗಿನ ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಉಚಿತ ದರ್ಶನ ಸೇವೆ ನೀಡಲು ಟಿಟಿಡಿ ವಿಶೇಷ ದರ್ಶನಕ್ಕೆ ಆದ್ಯತೆ ನೀಡಿದೆ. ಒಂದು ವರ್ಷದೊಳಗಿನ ಮಕ್ಕಳಿರುವ ಪೋಷಕರು ಈ ಹೊಸ ಸೌಲಭ್ಯದೊಂದಿಗೆ ತಿಮ್ಮಪ್ಪನ ದರ್ಶನವನ್ನು ಪಡೆಯಬಹುದು.

Tirumala Temple Free Darshan
Image Source: News18

ವಿಶೇಷ ದರ್ಶನ ಪಡೆಯಲು ಅನುಸರಿಸಬೇಕಾದ ನಿಯಮಗಳು
ಇನ್ನು ಮಕ್ಕಳಿಗಾಗಿ ನೀಡಿರುವ ಈ ವಿಶೇಷ ಸೌಲಭ್ಯವನ್ನು ಪಡೆಯಲು ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಮಕ್ಕಳ ಪೋಷಕರು ಮಗುವಿನ ಮೂಲ ಜನನ ಪ್ರಮಾಣಪತ್ರ ಕಡ್ಡಾಯವಾಗಿ ತರಬೇಕು. ಜನನ ಪ್ರಮಾಣಪತ್ರದ ಬದಲಾಗಿ ಮಗು ಡೆಲವರಿ ವಾಲಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡ ಪ್ರಮಾಣಪತ್ರ ಸಲ್ಲಿಸಬೇಕು.

Join Nadunudi News WhatsApp Group

ಮೂಲ ಪ್ರಮಾಣಪತ್ರಗಳನ್ನು ತೆಗೆದುಕೊಂಡು ಹೋಗುದರ ಜೊತೆಗೆ ಪೋಷಕರ ಗುರುತಿನ ಚೀಟಿ ಕೂಡ ತೆಗೆದುಕೊಂಡು ಹೋಗಬೇಕು. 12 ವರ್ಷದೊಳಿನ ಮಕ್ಕಳಿಗೂ ಕೂಡ ಈ ವಿಶೇಷ ಸೌಲಭ್ಯ ಲಭ್ಯವಿದೆ. ಬೆಳಿಗ್ಗೆ 10 ರಿಂದ ಸಾಂಜೆ 6 ರವರೆಗೆ ಉಚಿತವಾಗಿ ಮಕ್ಕಳು ದರ್ಶನವನ್ನು ಪಡೆಯಬಹುದು.

Join Nadunudi News WhatsApp Group