Toll Exemption: ಇಂತಹ ಜನರು ಯಾವುದೇ ಟೋಲ್ ಹಣ ಕಟ್ಟುವ ಅಗತ್ಯ ಇಲ್ಲ, ಕೇಂದ್ರ ಸರ್ಕಾರದ ನಿಯಮ.

ದೇಶದಲ್ಲಿ ಇಂತಹ ವ್ಯಕ್ತಿಗಳಿಗೆ ಟೋಲ್ ತೆರಿಗೆ ವಿನಾಯಿತಿಯನ್ನ ನೀಡಲಾಗಿದೆ.

Toll Exemption: ದೇಶದಲ್ಲಿ ಸಾಕಷ್ಟು ಜನರು ಪ್ರತಿನಿತ್ಯ ಸಾಕಷ್ಟು ಟೋಲ್ ಕಟ್ಟುತ್ತಾರೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರ ಮಾಡುವ ವಾಹನಗಳು ಸಾಮಾನ್ಯವಾಗಿ ಟೋಲ್ ಕಟ್ಟಬೇಕಾಗುತ್ತದೆ. ಅದೇ ರೀತಿಯಲ್ಲಿ ದೇಶದಲ್ಲಿ ಟೋಲ್ ಪ್ಲಾಜಾ ನಿಯಮದಲ್ಲಿ ಕೆಲವು ಬದಲಾವಣೆಯನ್ನ ಮಾಡಲಾಗಿದೆ.

ಟೋಲ್ ಶುಲ್ಕ ಹೆಚ್ಚಳ ಮತ್ತು GPS ಟೋಲ್ ಸಿಸ್ಟಮ್ ಜಾರಿಗೆ ತರಲು ಈಗ ಕೇಂದ್ರ ಸರ್ಕಾರ ಚಿಂತನೆಯನ್ನ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ವಾಹನ ಸವಾರರ ಖಾತೆಯಿಂದ ನೇರವಾಗಿ ಹಣ ಕಟ್ ಆಗುವ ವ್ಯವಸ್ಥೆಯನ್ನ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧಾರವನ್ನ ಮಾಡಿದೆ.

Toll tax exemption has been given to such persons in the country.
Image Credit: parkplus

ಇಂತಹ ಜನರು ಯಾವುದೇ ಟೋಲ್ ಪಾವತಿ ಮಾಡುವ ಅಗತ್ಯ ಇಲ್ಲ
ನಿಮಗೆಲ್ಲ ತಿಳಿದಿರುವ ಹಾಗೆ ದೇಶದಲ್ಲಿ ಕೆಲವು ಪ್ರಜೆಗಳಿಗೆ ಕೆಲವು ವಿಷಯದಲ್ಲಿ ರೀಯಾಯಿತಿಯನ್ನ ನೀಡಲಾಗುತ್ತದೆ. ಅದೇ ರೀತಿಯಲ್ಲಿ ಸಂಚಾರಿ ನಿಯಮ ಮತ್ತು ತೆರಿಗೆ ನಿಯಾಮದಲ್ಲಿ ಕೆಲವು ಪ್ರಜೆಗಳಿಗೆ ವಿನಾಯಿತಿಯನ್ನ ನೀಡಲಾಗುತ್ತದೆ. ಸದ್ಯ ಟೋಲ್ ಪ್ಲಾಜಾ ನಿಯಮದಲ್ಲಿ ಕೂಡ ಕೆಲವು ಪ್ರಜೆಗಳಿಗೆ ವಿನಾಯಿತಿಯನ್ನ ನೀಡುವ ನಿಯಮ ಇದ್ದು ಇಂತಹ ಜನರು ಟೋಲ್ ಪ್ಲಾಜಾ ಗಳಲ್ಲಿ ಯಾವುದೇ ತೆರಿಗೆ ಪಾವತಿ ಮಾಡದೆ ವಾಹನ ಚಲಾಯಿಸಬಹುದು.

ಯಾರು ಯಾರು ಟೋಲ್ ತೆರಿಗೆ ಕಟ್ಟುವ ಅಗತ್ಯ ಇಲ್ಲ
ಭಾರತ ಸರ್ಕಾರದ ಮಾರ್ಗಸೂಚಿ ಪ್ರಕಾರ ಇಂತಹ ಜನರು ಯಾವುದೇ ಟೋಲ್ ಗಳಲ್ಲಿ ತೆರಿಗೆ ಪಾವತಿ ಮಾಡುವ ಅಗತ್ಯ ಇರುವುದಿಲ್ಲ. ಭಾರತದ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು, ಮುಖ್ಯ ನ್ಯಾಯಾಧೀಶರು, ಉಪಾಧ್ಯಕ್ಷರು, ರಾಜ್ಯ ಗರ್ವರ್ನರ್ ಗಳು, ಕೇಂದ್ರ ಸಂಪುಟ ಸಚಿವರು, ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಲೋಕಸಭೆಯ ಸ್ಪೀಕರ್, ಕೇಂದ್ರ ರಾಜ್ಯ ಸಚಿವರು, ರಾಜ್ಯದ ಮುಖ್ಯ ಮಂತ್ರಿಗಳು, ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಟ್ ಗವರ್ನರ್ ಗಳು, ರಾಜ್ಯ ವಿಧಾನಸಭೆಯ ಸ್ಪೀಕರ್, ಹೈಕೋರ್ಟ್ ಮುಖ್ಯ ನ್ಯಾಯಾಧೀಶರು.

No toll tax is required for elite persons of the country
Image Credit: indiatimes

ಒಂದು ರಾಜ್ಯದ ವಿಧಾನ ಪರಿಷತ್ತಿನ ಅಧ್ಯಕ್ಷ, ಭಾರತ ಸರ್ಕಾರದ ಕಾರ್ಯದರ್ಶಿ, ಸಂಸತ್ತಿನ ಸದಸ್ಯ, ಸೇನಾ ಕಮಾಂಡರ್, ಸೇನಾ ಸಿಬ್ಬಂಧಿಯ ಉಪ ಮುಖ್ಯಸ್ಥ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಶಾಸಕಾಂಗ ಸಭೆಯ ಸದಸ್ಯ, ರಾಜ್ಯ ಬೇಟಿಗಳಲ್ಲಿ ವಿದೇಶಿ ಗಣ್ಯರು.

Join Nadunudi News WhatsApp Group

ಈ ಎಲ್ಲಾ ಗಣ್ಯ ವ್ಯಕ್ತಿಗಳು ಯಾವುದೇ ಟೋಲ್ ನಲ್ಲಿ ತೆರಿಗೆ ಪಾವತಿ ಮಾಡುವ ಅಗತ್ಯ ಇರುವುದಿಲ್ಲ. ಇದೊಂದು ಸಾಮಾನ್ಯ ಜ್ಞಾನದ ವಿಷಯವಾಗಿದ್ದು ಇದನ್ನ ತಿಳಿದುಕೊಳ್ಳುವುದು ಅತೀ ಅವಶ್ಯಕ ಕೂಡ ಆಗಿದೆ. ಈ ಎಲ್ಲಾ ಜನರನ್ನ ಬಿಟ್ಟು ಸಾಮಾನ್ಯ ಜನರಿಗೆ ಟೋಲ್ ನಲ್ಲಿ ಯಾವುದೇ ತೆರಿಗೆ ವಿನಾಯಿತಿ ಇರುವುದಿಲ್ಲ.

Join Nadunudi News WhatsApp Group