Udyogini Yojana: ಸ್ವಂತ ಉದ್ಯಮ ಮಾಡುವ ಮಹಿಳೆಯರ ಖಾತೆಗೆ ನೇರವಾಗಿ 3 ಲಕ್ಷ, ಹೊಸ ಯೋಜನೆಗೆ ಇಂದೇ ಅರ್ಜಿ ಹಾಕಿ.

ಸ್ವಂತ ಉದ್ಯಮ ಮಾಡುವ ಮಹಿಳೆಯರ ಖಾತೆಗೆ ನೇರವಾಗಿ 3 ಲಕ್ಷ

Udyogini Yojana Loan: ಕೇಂದ್ರ ಸರ್ಕಾರವು ಮಹಿಳೆರಿಗಾಗಿ ಅನೇಕ ಯೋಜನೆಯನ್ನು ಜಾರಿಗೊಳಿಸಿದೆ. ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಸರ್ಕಾರ ಸಾಕಷ್ಟು ಯೋಜನೆಯನ್ನು ರೂಪಿಸಿದೆ. ಮಹಿಳೆಯರು ಸ್ವಾವಲಂಭಿಯಾಗಿ ಜೀವನ ನಡೆಸಬೇಕು ಅನ್ನುವುದು ಸರ್ಕಾರದ ಗುರಿಯಾಗಿದೆ.

ಇದೀಗ ಸರ್ಕಾರ ಮಹಿಳೆಯರಿಗಾಗಿ ಹೊಸ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಮಹಿಳೆಯರ ಸ್ವಂತ ಉದ್ಯೋಗ ಕನಸಿಗೆ ನೆರವಾಗಲಿದೆ. ಮಹಿಳೆಯರು ಈ ಯೋಜನೆಯ ಲಾಭವನ್ನು ಪಡೆಯುವ ಮೂಲಕ ತಮ್ಮ ಆದಾಯವನ್ನು ತಾವು ಗಳಿಸಿಕೊಳ್ಳಬಹುದಾಗಿದೆ. 

Udyogini Yojana Loan
Image Credit: Thebegusarai

ಸ್ವಂತ ಉದ್ಯಮ ಮಾಡುವ ಮಹಿಳೆಯರ ಖಾತೆಗೆ ನೇರವಾಗಿ 3 ಲಕ್ಷ
ಮಹಿಳೆಯರಿಗಾಗಿ ಸರ್ಕಾರವು ಉದ್ಯೋಗಿನಿ ಯೋಜನೆಯನ್ನು (Udyogini Yojana) ಜಾರಿಗೊಳಿಸುವ ಮೂಲಕ ಮಹಿಳೆಯರಿಗೆ ಹೊಸ ಅವಕಾಶವನ್ನು ನೀಡಲಿದೆ. ಈ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ 3 ಲಕ್ಷದವರೆಗೆ ಸಾಲವನ್ನು ನೀಡಲಾಗುತ್ತದೆ. ಮಹಿಳೆಯರು 88 ಬಗೆಯ ಸಣ್ಣ ಉದ್ಯೋಗಗಳನ್ನು ಸ್ಥಾಪಿಸಲು ಈ ಯೋಜನೆಯು ನೆರವಾಗಲಿದೆ. ಇನ್ನು ಮಹಿಳೆಯರು ಉದ್ಯಮಿಗಳಾಗಿ ಮತ್ತು ದೊಡ್ಡ ಮಟ್ಟದಲ್ಲಿ ಉದ್ಯಮಿಗಳಾಗಿ ಬೆಳೆದು ತಮ್ಮ ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ.

ಈ ಯೋಜನೆಯನ್ನು ಮೊದಲು ಕರ್ನಾಟಕ ಸರ್ಕಾರ ಜಾರಿಗೆ ತಂದಿದೆ. ನಂತರ ಮಹಿಳೆಯರ ಅಭಿವೃದ್ದಿಗಾಗಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ. ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಆರ್ಥಿಕವಾಗಿ ನೆರವಾಗಲು ಸರ್ಕಾರ ಈ ಯೋಜನೆಯನ್ನು ರೂಪಿಸಿದೆ. ಇನ್ನು ಈ ಯೋಜನೆಯ ಅಡಿಯಲ್ಲಿ 48,000 ಮಹಿಳೆಯರು ಸಣ್ಣ ಉದ್ಯಮಿಗಳಾಗಿದ್ದಾರೆ. 18 ರಿಂದ 55 ವರ್ಷದವರು ಈ ಯೋಜನೆಯ ಲಾಭವನ್ನು ಪಡೆಯಬಹುದು.

Udyogini Yojana Loan New Update
Image Credit: Goodreturns

ಹೊಸ ಯೋಜನೆಗೆ ಇಂದೇ ಅರ್ಜಿ ಹಾಕಿ
ಈ ಉದ್ಯೋಗನಿಧಿ ಯೋಜನೆಯ ಅಡಿಯಲ್ಲಿ ಮಹಿಳೆಯರು 3 ಲಕ್ಷದವರೆಗೆ ಸಾಲವನ್ನು ಪಡೆಯಬಹುದು. ಇನ್ನು ಅಂಗವಿಕಲ ಮಹಿಳೆಯರು, ವಿಧವೆಯರಿಗೆ ಸಾಲದ ಮಿತಿ ಇಲ್ಲ. ವ್ಯವಹಾರ ಮತ್ತು ವಿದ್ಯಾರ್ಹತೆಯ ಆಧಾರದ ಮೇಲೆ ಅಂಗವಿಕಲ ಮಹಿಳೆಯರು, ವಿಧವೆಯರಿಗೆ ಹೆಚ್ಚಿನ ಸಾಲವನ್ನು ನೀಡಲಾಗುತ್ತದೆ.

Join Nadunudi News WhatsApp Group

ಅಂಗವಿಕಲರಿಗೆ ಹಾಗೂ ವಿಧವೆಯರಿಗೆ ಬಡ್ಡಿ ರಹಿತ ಸಾಲವನ್ನು ನೀಡಲಾಗುತ್ತದೆ. ಇತರ ಮಹಿಳೆಯರಿಗೆ ಶೇ. 10 ರಿಂದ ಶೇ. 12 ರ ಬಡ್ಡಿದರದಲ್ಲಿ ಸಾಲವನ್ನು ನೀಡಲಾಗುತ್ತದೆ. ಉದ್ಯೋಗನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವವರು ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರ, ರೇಷನ್ ಕಾರ್ಡ್ ಸೇರಿದಂತೆ ಇನ್ನಿತರ ಮುಖ್ಯ ದಾಖಲೆಯ ವಿವರವನ್ನು ನೀಡುವ ಮೂಲಕ ಅರ್ಜಿ ಸಲ್ಲಿಸಿ ಯೋಜನೆಯ ಲಾಭವನ್ನು ಪಡೆಯಬಹುದು.

Udyogini Yojana Money
Image Credit: Kannadanews

Join Nadunudi News WhatsApp Group