Ujaas EV: ಬೆಲೆ ಕೇವಲ 35 ಸಾವಿರ, ಆದರೆ ಮೈಲೇಜ್ ಭರ್ಜರಿ 75 KM, ಕಡಿಮೆ ತೂಕದ ಸ್ಕೂಟರ್ ಇಂದೇ ಬುಕ್ ಮಾಡಿ.

ಕೇವಲ 35 ಸಾವಿರಕ್ಕೆ ಖರೀದಿ ಮಾಡಬಹುದು 75 Km ಮೈಲೇಜ್ ನೀಡುವ ಈ ಎಲೆಕ್ಟ್ರಿಕ್ ಸ್ಕೂಟರ್

Ujaas eGo LA Electric Scooter: ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ (Electric Vehicle) ಮೇಲಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಹೊಸ ಹೊಸ ರೀತಿಯ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನೂ ಬಿಡುಗಡೆ ಮಾಡುತ್ತಲಿವೆ. ಇದೀಗ ಉಜಾಸ್ ಇವಿ (Ujaas EV) ಕಂಪನಿಯು ಹೊಸ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಈ ಉಜಾಸ್ ಇವಿ ಎಲೆಕ್ಟ್ರಿಕ್ ಸ್ಕೂಟರ್ ನ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

ujaas ezy electric scooter
Image Credit: bikedekho

ಬೆಲೆ ಕೇವಲ 35 ಸಾವಿರ, ಆದರೆ ಮೈಲೇಜ್ ಭರ್ಜರಿ 75 KM
ಇದೀಗ ಮಾರುಕಟ್ಟೆಯಲ್ಲಿ Ujaas eGo LA Electric Scooter ಗ್ರಾಹಕರ ಆಯ್ಕೆಗೆ ಸೇರಿಕೊಂಡಿದೆ. ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ, ಈ ಸ್ಕೂಟರ್ ನಿಮಗೆ 75 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ. ಕಚೇರಿ ಅಥವಾ ಮನೆಯ ಕೆಲಸಕ್ಕೆ ನಿಮ್ಮ ದೈನಂದಿನ ಪ್ರಯಾಣಕ್ಕೆ ಈ ಬೈಕ್ ಬೆಸ್ಟ್ ಆಗಿರಲಿದೆ. Ujaas eGo LA Electric Scooter ಮಾರುಕತೆಯಲ್ಲಿ ರೂ. 39,880 ನಿಗದಿಪಡಿಸಲಾಗಿದೆ. ಉಜಾಸ್ ಇಗೋ LA ನ ದೊಡ್ಡ ವೈಶಿಷ್ಟ್ಯವೆಂದರೆ ನಿಮ್ಮ ಬಜೆಟ್ ಬೆಲೆಯಲ್ಲಿಯೇ ಸಿಗಲಿದೆ. ಕಡಿಮೆ ಬಜೆಟ್ ನಲ್ಲೂ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಬಹುದು. ಈ ಸ್ಕೂಟಿಯ ನೋಟ ಮತ್ತು ವಿನ್ಯಾಸ ಕೂಡ ತುಂಬಾ ಚೆನ್ನಾಗಿದೆ.

Ujaas Ezy Electric Scooter
Image Source: RetroEV

ಕಡಿಮೆ ತೂಕದ ಸ್ಕೂಟರ್ ಇಂದೇ ಬುಕ್ ಮಾಡಿ
ಇನ್ನು Ujaas eGo LA ನಿಮಗೆ ಗಂಟೆಗೆ 25 ಕಿಲೋಮೀಟರ್ ವೇಗವನ್ನು ನೀಡುವುದಲ್ಲದೆ, ಇದು ಅನೇಕ ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಡಿಜಿಟಲ್ ಟ್ರಿಪ್ ಮೀಟರ್, ಡಿಜಿಟಲ್ ಸ್ಪೀಡೋಮೀಟರ್, ರಿಮೋಟ್ ಸ್ಟಾರ್ಟ್, ಪುಶ್ ಬಟನ್ ಸ್ಟಾರ್ಟ್, ಆಂಟಿ ಥೆಫ್ಟ್ ಅಲಾರ್ಮ್, ವೀಲ್ ಲಾಕಿಂಗ್ ಮೆಕ್ಯಾನಿಸಂ, ಫೈಂಡ್ ಮೈ ಸ್ಕೂಟರ್ ಫೀಚರ್, ಎಲ್ ಇಡಿ ಹೆಡ್ ಲೈಟ್, ಎಲ್ ಇಡಿ ಟೈಲ್ ಲೈಟ್, ಎಲ್ ಇಡಿ ಟರ್ನ್ ಸಿಗ್ನಲ್ ಲ್ಯಾಂಪ್ ಮತ್ತು ಕಡಿಮೆ ಬ್ಯಾಟರಿ ಇಂಡಿಕೇಟರ್ ಮುಂತಾದ ವೈಶಿಷ್ಟ್ಯಗಳು ನೀವು ನೋಡುತ್ತಿರಿ.

 

Join Nadunudi News WhatsApp Group

Join Nadunudi News WhatsApp Group