Free Tube Well: ರೈತರಿಗೆ ಬೋರವೆಲ್ ತಗೆಯಲು ಕೇಂದ್ರದಿಂದ ಹೊಸ ಯೋಜನೆ, 10,000 ರೂಪಾಯಿ ಉಚಿತ.

ರೈತರಿಗಾಗಿ ಉಚಿತ ಬೋರಿಂಗ್ ಯೋಜನೆ ಪರಿಚಯಿಸಲು ಮುಂದಾದ ಸರ್ಕಾರ.

UP Govt Free Tube Well Scheme: ಸದ್ಯ ದೇಶದಲ್ಲಿ ರೈತರ ಆರ್ಥಿಕ ಬೆಂಬಲಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಮೋದಿ ಸರ್ಕಾರದ ಕಿಸಾನ್ ಯೋಜನೆಯು ದೇಶದ ರೈತರನ್ನು ಒಂದು ರೀತಿಯಲ್ಲಿ ಆರ್ಥಿಕವಾಗಿ ಸಬಲರನ್ನಾಗಿಸುತ್ತದೆ ಎನ್ನಬಹುದು.

ಇನ್ನು PM Kisan ಯೋಜನೆಯಡಿ ರೈತರು 6,000 ಹಣ ಪಡೆಯುತ್ತಿದ್ದಾರೆ. ಇನ್ನು ಈ ಯೋಜನೆಯ ಲಾಭ ಪಡೆಯುತ್ತಿರುವ ಬೆನ್ನಲ್ಲೇ ರೈತರಿಗಾಗಿ ಈ ರಾಜ್ಯ ಸರ್ಕಾರ ಹೊಸ ಯೋಜನೆಯನ್ನು ಪರಿಚಯಿಸಲು ಮುಂದಾಗಿದೆ.

Tube Well Scheme
Image Credit: Krishijagran

ರೈತರಿಗಾಗಿ ಉಚಿತ ಬೋರಿಂಗ್ ಯೋಜನೆ
ದೇಶದ ರೈತರು ಹೆಚ್ಚಾಗಿ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸಕಾಲದಲ್ಲಿಈ ಮಳೆ ಆಗದೆ ಇದ್ದರೆ ರೈತರು ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಮಳೆಯ ಕೊರೆತೆಯಿಂದ ರೈತರು ಈಗಾಗಲೇ ಕೋಟಿಗಟ್ಟಲೆ ಹಣವನ್ನು ಕಳೆದುಕೊಂಡ ಪ್ರಕರಣಗಳು ಸಾಕಷ್ಟಿವೆ. ಇದೀಗ ರೈತರಿಗೆ ನೆರವಾಗಲು Uttara Pradesh Govt ಹೊಸ ಹೆಜ್ಜೆ ಇಟ್ಟಿದೆ. ರೈತರಿಗಾಗಿ ಉಚಿತ ಬೋರಿಂಗ್ ಯೋಜನೆ (Tube Well) ಪರಿಚಯಿಸಲು UP ಸರ್ಕಾರ ಮುಂದಾಗಿದೆ.

ಈ ಯೋಜನೆಯಡಿ ರೈತರಿಗೆ ಉಚಿತವಾಗಿ ಸಿಗಲಿದೆ 10,000
UP ಸರ್ಕಾರ ಇದೀಗ ರೈತರಿಗೆ ಉಚಿತ ಬೋರಿಂಗ್ ಯೋಜನೆಯಡಿ ಭಾವಿ ತೊಡಲು ಹಣ ನೀಡಲು ನಿರ್ಧರಿಸಿದೆ. ಸರ್ಕಾರ ನೀಡುವ ಮೊತ್ತವು ರೈತರ ಜಮೀನಿನ ಗಾತ್ರವನ್ನು ಅವಲಂಬಿಸಿರುತ್ತದೆ ಹಾಗೆಯೆ ವಿವಿಧ ಸಮುದಾಯದ ಆಧಾರದ ಮೇಲೆ ಹಣ ನೀಡಲಾಗುತ್ತದೆ.

UP Govt Free Tube Well Scheme
Image Credit: Economictimes.indiatimes

ಸಣ್ಣ ರೈತರಿಗೆ 4500 ರೂ., ಮಧ್ಯಮ ವರ್ಗದ ರೈತರಿಗೆ ರೂ. 6,000 ಮತ್ತು ಎಸ್‌ಸಿ/ಎಸ್‌ಟಿ ಸಮುದಾಯದ ರೈತರಿಗೆ ರೂ. 10,000 ಹಣ ಸಿಗುತ್ತದೆ. ಈ ಯೋಜನೆಯ ಲಾಭ ಪಡೆಯಲು ರೈತರೇ ಪಂಪ್ ಖರೀದಿಸಬೇಕು. ಸರ್ಕಾರದಿಂದ ಈ ಸಹಾಯವನ್ನು ಪಡೆಯಲು, ರೈತರು ಕನಿಷ್ಠ 0.2 ಹೆಕ್ಟೇರ್ ಭೂಮಿಯನ್ನು ಹೊಂದಿರಬೇಕು.

Join Nadunudi News WhatsApp Group

ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ..?
*ಟ್ಯೂಬ್‌ ವೆಲ್ ಯೋಜನೆಗೆ ಅರ್ಜಿ ಸಲ್ಲಿಸಲು, ನೀವು ಸಣ್ಣ ನೀರಾವರಿ ಇಲಾಖೆಯ ಅಧಿಕೃತ ವೆಬ್‌ ಸೈಟ್‌ https://minorirrigationup.gov.in/Index-hi.aspx ಗೆ ಭೇಟಿ ನೀಡಬೇಕು.

*ಅಲ್ಲಿ ಕೊಳವೆ ಬಾವಿ ಯೋಜನೆಯನ್ನು ಹುಡುಕಿ ಮತ್ತು ಅರ್ಜಿ ನಮೂನೆಯನ್ನು ಡೌನ್‌ ಲೋಡ್ ಮಾಡಿ.

*ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಿ.

ಆದಾಯ ಪ್ರಮಾಣಪತ್ರ, ಜಾತಿ ಪ್ರಮಾಣ ಪತ್ರ, ಫಾರ್ಮ್ ಪೇಪರ್ (ಭೂಮಿಯ ವಿವರ) ಹಾಗೆಯೆ ಆಧಾರ್ ಸೇರಿದಂತೆ ಇನ್ನಿತರ ವೈಯಕ್ತಿಕ ಮಾಹಿತಿ ನೀಡುವುದು ಅಗತ್ಯ. ಸಾಧ್ಯ ಈ ಯೋಜನೆಗೆ UP ರಾಜ್ಯದಲ್ಲಿ ಜಾರಿಗೆ ಬಂದಿದ್ದು ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ದೇಶಾದ್ಯಂತ ರೈತರಿಗೆ ಈ ಯೋಜನೆಯನ್ನ ವಿಸ್ತರಣೆ ಮಾಡುವ ಸಾಧ್ಯತೆ ಇದೆ.

Join Nadunudi News WhatsApp Group