6th Installment: ಗೃಹಲಕ್ಷ್ಮಿ ಯೋಜನೆಯ 6 ನೇ ಕಂತಿನ ಇನ್ನೊಂದು ಬಿಗ್ ಅಪ್ಡೇಟ್, ಮಹಿಳೆಯರಿಗೆ ಗುಡ್ ನ್ಯೂಸ್

ಗೃಹ ಲಕ್ಷ್ಮಿ ಯೋಜನೆಯ 6 ನೇ ಕಂತಿನ ಬಗ್ಗೆ ಇನ್ನೊಂದು ಬಿಗ್ ಅಪ್ಡೇಟ್

Gruha Lakshmi 6th Installment Release Date: ಆಗಸ್ಟ್ ನಲ್ಲಿ ಅನುಷ್ಠಾನಗೊಂಡ ಗೃಹ ಲಕ್ಷ್ಮಿ ಯೋಜನೆ ಈಗಾಗಲೇ ಅರ್ಹ ಮಹಿಳೆಯಯರಿಗೆ ಮಾಸಿಕ ಹಣವನ್ನು ನೀಡಿತ್ತಿದೆ. ಸರ್ಕಾರ ನೀಡುತ್ತಿರುವ ಮಾಸಿಕ 2000 ರೂ. ನಿಂದ ಮಹಿಳೆಯರು ಸಾಕಷ್ಟು ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಹಣಕ್ಕಾಗಿ ಬೇರೆಯವರನ್ನು ಕೇಳುವ ಪರಿಸ್ಥಿತಿಯಿಂದ ಮಹಿಳೆಯರು ತಪ್ಪಿಸಿಕೊಂಡಿದ್ದಾರೆ.

ತಮ್ಮ ಖರ್ಚಿಗೆ ಸರ್ಕಾರ ನೀಡುತ್ತಿರುವ ಹಣವನ್ನು ಬಳಸಿಕೊಳ್ಳುತ್ತಿದ್ದಾರೆ ಎನ್ನಬಹುದು. ಸದ್ಯ ಗೃಹ ಲಕ್ಷ್ಮಿ ಫಲಾನುಭವಿಗಳು 6 ನೇ ಕಂತಿನ ಹಣವನ್ನು ಪಡೆಯುವ ಸಮಯಾವಕಾಶ ಬಂದಿದೆ. ಹೌದು, ರಾಜ್ಯ ಸರ್ಕಾರ 6 ನೇ ಕಂತಿನ ಹಣವನ್ನು ಜಮಾ ಮಾಡಲು ದಿನಾಂಕ ನಿಗದಿ ಮಾಡಿದೆ. ಫಲಾನುಭವಿಗಳು ಯಾವ ದಿನದಂದು 6 ನೇ ಕಂತಿನ ಹಣವನ್ನು ಪಡೆಯಲು ಸಾಧ್ಯ ಅನ್ನುವುದರ ಬಗ್ಗೆ ತಿಳಿಯೋಣ.

Gruha Lakshmi 6th Installment Release Date
Image Credit: Karnataka Times

ಗೃಹಲಕ್ಷ್ಮಿ ಯೋಜನೆಯ 6 ನೇ ಕಂತಿನ ಇನ್ನೊಂದು ಬಿಗ್ ಅಪ್ಡೇಟ್
ಗೃಹ ಲಕ್ಷ್ಮಿ ಯೋಜನೆಯಡಿ ಈಗಾಗಲೇ ಅರ್ಹ ಫಲಾನುಭವಿಗಳು ಐದು ಕಂತುಗಳ ಹಣ ಒಟ್ಟಾಗಿ 10000 ರೂಪಾಯಿ ಮೊತ್ತ ಜಮಾ ಆಗಿದೆ. ಸದ್ಯ ಇನ್ನೇನು ಕೆಲವೇ ದಿನಗಳಲ್ಲಿ ಗೃಹ ಲಕ್ಷ್ಮಿ 6 ನೇ ಕಂತಿನ ಹಣ ಕೂಡ ಬಿಡುಗಡೆಯಾಗಲಿದೆ. ಗೃಹ ಲಕ್ಷ್ಮಿ ಯೋಜನೆಯ ನೋಂದಣಿ ಮಾಡಿಕೊಂಡಿರುವ ಮಹಿಳೆಯರು ತಮ್ಮ ಖಾತೆಗೆ E-KYC ಹಾಗೂ NPCI Link ಮಾಡಿಸುವುದು ಕಡ್ಡಾಯವಾಗಿದೆ.

ಗೃಹ ಲಕ್ಷ್ಮಿ 6 ನೇ ಕಂತಿನ ಹಣ ಪಡೆಯಬೇಕಿದ್ದರೆ ಎಲ್ಲ ಕೆಲಸಗಳು ಪೂರ್ಣಗೊಳ್ಳುವುದು ಕಡ್ಡಾಯವಾಗಿದೆ. ಇನ್ನು ಎಲ್ಲ ದಕಹಳೆಗಳು ಸರಿ ಇದ್ದು, ಸರ್ಕಾರದ ಪ್ರತಿ ನಿಯಮವನ್ನು ಪಾಲಿಸಿರುವ ಅರ್ಜಿದಾರರಿಗೆ ಫೆಬ್ರವರಿ 15 ರಂದು ಅಂದರೆ ನಾಳೆ ಹಣವನ್ನು ಬಿಡುಗಡೆ ಮಾಡಲಿದೆ. ಮಹಿಳೆಯರು ಖಾತೆಗೆ ಹಣ ಜಮಾ ಆಗಿದೆಯೋ ಇಲವೋ ಎಂದು ಪರಿಶೀಲಿಸಿಕೊಳ್ಳಬಹುದು. ಫಲಾನುಭವಿಗಳು ಅಕೌಂಟ್ ಸ್ಟೇಟಸ್ ಚೆಕ್ ಮಾಡಿಕೊಳ್ಳಲು ಈ ಕೆಳಗಿನ ಹಂತವನ್ನು ಅನುಸರಿಸಬಹುದು.

Gruha Lakshmi 6th Installment
Image Credit: Needsofpublic

ಮಹಿಳೆಯರೇ ಈ ರೀತಿಯಾಗಿ ನಿಮ್ಮ ಖಾತೆಯನ್ನು ಚೆಕ್ ಮಾಡಿಕೊಳ್ಳಿ
•ಮೊದಲನೇದಾಗಿ ನಿಮ್ಮ ಸ್ಮಾರ್ಟ್ಫೋನ್ ನಲ್ಲಿ DBT Karnataka App ಅನ್ನು ಪ್ಲೇಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಬೇಕು,

Join Nadunudi News WhatsApp Group

•ನಂತರ ಡೌನ್ಲೋಡ್ ಆದ ಅಪ್ಲಿಕೇಶನ್ ಅನ್ನು ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಿ.

•ಇದಾದ ನಂತರ ಮಹಿಳೆಯ ಆಧಾರ್ ನಂಬರ್ ಅನ್ನು ನಮೂದಿಸಬೇಕು,

•ಆಗ ನೋಂದಾವಣೆ ಆಗಿರುವ ಮೊಬೈಲ್ ನಂಬರ್ ಗೆ ಒಂದು OTP ಬರುತ್ತದೆ, ಅದನ್ನು ನಮೂದಿಸಬೇಕು.

•ನಂತರ ಮೊಬೈಲ್ ಅಪ್ಲಿಕೇಶನ್ ಗೆ ಲಾಗಿನ್ ಆಗಲು ನೀವು ನಾಲ್ಕು ಪಿನ್ ಬಳಸಬೇಕಾಗುತ್ತದೆ. ನಂತರ ಇದನ್ನು ಮತ್ತೆ ವೆರಿಫಿಕೇಷನ್ ಮಾಡಿಕೊಳ್ಳಬೇಕಾಗುತ್ತದೆ.

•ಕೊನೆಗೆ ಸಬ್ಮಿಟ್ ಆಯ್ಕೆ ಕೊಟ್ಟರೆ ಪೇಮೆಂಟ್ ಪುಟ ತೆರೆದುಕೊಳ್ಳುತ್ತದೆ. ಆಗ ನಿಮ್ಮ ಖಾತೆಗೆ ಆರನೇ ಕಂತಿನ ಹಣ ಜಮಾ ಆಗಿದೆಯೇ ಎನ್ನುವ ಸಂಪೂರ್ಣ ಮಾಹಿತಿ ತಿಳಿಯುತ್ತದೆ.

Join Nadunudi News WhatsApp Group