Aadhar Card: ನಿಮ್ಮ ಆಧಾರ್ ಕಾರ್ಡ್ ಮಾಡಿ 10 ವರ್ಷ ಆಗಿದೆಯಾ..! ಇಂದೇ ಕಚೇರಿಗೆ ಹೋಗಿ ಈ ಕೆಲಸ ಮಾಡಬೇಕು.

ಆಧಾರ್ ಕಾರ್ಡ್ ಅನ್ನು ಮತ್ತೊಮ್ಮೆ ಏಕೆ ಅಪ್ಡೇಟ್ ಮಾಡಬೇಕು ಎನ್ನುದರ ಬಗ್ಗೆ ಮಾಹಿತಿ ತಿಳಿಯಿರಿ.

Aadhar Card Update: ಆಧಾರ್ ಭಾರತೀಯ ಜನರಿಗೆ ಅಗತ್ಯವಾದ ದಾಖಲೆಯಾಗಿದೆ. ಆಧಾರ್ ಕಾರ್ಡ್ (Aadhar Card) ಇಲ್ಲದೆ ಈಗ ಯಾವ ಕೆಲಸವೂ ಸಹ ನಡೆಯುವುದಿಲ್ಲ. ಆಧಾರ್ ಕಾರ್ಡ್ ನಿಂದ ಈಗಿನ ಕಾಲದಲ್ಲಿ ಹೆಚ್ಚಿನ ಕೆಲಸವನ್ನು ಮಾಡಿಕೊಳ್ಳಬಹುದು.

ಆಧಾರ್ ಕಾರ್ಡ್ ಹೊಂದಿರುವವರಿಗೆ ಹೊಸ ಮಾಹಿತಿ
ಆಧಾರ್ ಕಾರ್ಡ್ ಅನ್ನು 10 ವರ್ಷ ಗಳ ಬಳಿಕ ಅಪ್ಡೇಟ್ ಮಾಡುವುದು ಕಡ್ಡಾಯವಾಗಿದೆ. ಜನರಿಗೆ ಯಾವುದೇ ಕೆಲಸ ಮಾಡಬೇಕಿದ್ದರೂ ಆಧಾರ್ ಕಾರ್ಡ್ ಬೇಕಿದೆ. ನೂತನ ಸರ್ಕಾರದ ಗ್ಯಾರೆಂಟಿ ಯೋಜನೆಗಳಿಗಂತೂ ಆಧಾರ್ ಕಾರ್ಡ್ ಅಗತ್ಯವಾಗಿ ಬೇಕಾಗಿದೆ.

ಆದರೆ ಇತ್ತೀಚಿಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿ ಅಂತ ಸಂದೇಶಗಳು ಬರುತ್ತಿವೆ. ಇದಕ್ಕೆ ಕಾರಣ ಆಧಾರ್ ಕಾರ್ಡ್ ಅನ್ನು ಹತ್ತು ವರ್ಷದಿಂದ ಒಮ್ಮೆಯೂ ಅಪ್ಡೇಟ್ ಮಾಡದೆ ಇರುವುದು.

New information for Aadhaar card holders
Image Credit: News18

ಆಧಾರ್ ಕಾರ್ಡ್ ಅನ್ನು ಏಕೆ ಅಪ್ಡೇಟ್ ಮಾಡಬೇಕು
ಆಧಾರ್ ಕಾರ್ಡ್ ಪಡೆದು ಹತ್ತು ವರ್ಷವಾದರೂ ಇದೀಗ ಕಾರ್ಡ್ ಅನ್ನು ಮತ್ತೊಮ್ಮೆ ಅಪ್ಡೇಟ್ ಮಾಡಬೇಕಾಗಿದೆ. ಇದಕ್ಕೆ ಕಾರಣ ಆಧಾರ್ ಕಾರ್ಡ್ ಪಡೆದ ವ್ಯಕ್ತಿಯ ಬಗ್ಗೆ ಮಾಹಿತಿ ಯನ್ನು ಅಪ್ಡೇಟ್ ಮಾಡುವುದು ಮತ್ತು ದುರುಪಯೋಗ ತಪ್ಪಿಸುವುದಾಗಿ. ಹೀಗಾಗಿಯೇ ಆಧಾರ್ ನಿಂದ ಹತ್ತು ವರ್ಷಕ್ಕೂ ಮೇಲ್ಪಟ್ಟ ಅನೇಕರಿಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿ ಅಂತ ಮೇಲಿಂದ ಮೇಲೆ ಸಂದೇಶಗಳು ಬರುತ್ತಿವೆ.

Updating Aadhaar Card is mandatory
Image Credit: Inc42

ಹೊಸದಾಗಿ ಆಧಾರ್ ನೋಂದಣಿಗೆ ಮತ್ತು 5 ವರ್ಷ ಮೇಲ್ಪಟ್ಟು 7 ವರ್ಷದ ಒಳಗಿನ ಎಲ್ಲಾ ಮಕ್ಕಳ ಬಯೋಮೆಟ್ರಿಕ್ ನವೀಕರಣವು ಉಚಿತವಾಗಿರುತ್ತದೆ. ಉಳಿದಂತೆ ಹೆಸರು, ಲಿಂಗ, ವಯಸ್ಸು, ವಿಳಾಸ ಹಾಗು ಮೊಬೈಲ್ ನಂಬರ್ ಗಳ ವಿವರ ನವೀಕರಣಕ್ಕೆ 50 ರೂಪಾಯಿ ಮತ್ತು ಕಣ್ಣು, ಮುಖ, ಕೈ ಬೆರಳುಗಳ ವಿವರ ನವೀಕರಣಕ್ಕೆ 100 ರೂಪಾಯಿಗಳ ಸೇವಾ ಶುಲ್ಕ ಇದ್ದು ಸಾರ್ವಜನಿಕರು ಇದಕ್ಕಿಂತ ಹೆಚ್ಚಿನ ಶುಲ್ಕ ಪಾವತಿ ಮಾಡಬೇಕಿಲ್ಲ.

Join Nadunudi News WhatsApp Group

Join Nadunudi News WhatsApp Group