UPI ID Inactivate: ಫೋನ್ ಕಳೆದುಕೊಂಡರೆ ಭಯಪಡುವ ಅಗತ್ಯ ಇಲ್ಲ, ತಕ್ಷಣ ಈ ಕೆಲಸ ಮಾಡಿ UPI ಬ್ಲಾಕ್ ಮಾಡಿ

ಫೋನ್ ಕಳೆದುಹೋದ್ರೆ ತಕ್ಷಣ ಈ ಕೆಲಸ ಮಾಡಿ UPI ಬ್ಲಾಕ್ ಮಾಡಿ

UPI ID Inactivation Process: ಸದ್ಯ ದೇಶದೆಲ್ಲೆಡೆ ಜನರು ಹೆಚ್ಚಿನ ಸಂಖ್ಯೆಯಲ್ಲಿ UPI Application ಗಳನ್ನೂ ಬಳಸುತ್ತಿದ್ದಾರೆ. ಇನ್ನು NPCI ಜನರಿಗಾಗಿ ವಿವಿಧ ಪಾವತಿಯ ಅಪ್ಲಿಕೇಶನ್ ಗಳನ್ನೂ ನೀಡುತ್ತಿದೆ. ಜನರು ಹೆಚ್ಚಾಗಿ Google pay , PhonePe ಹಾಗೂ Paytm ಅನ್ನು UPI ಪಾವತಿಗಾಗಿ ಬಳಸುತ್ತಿದ್ದಾರೆ ಎನ್ನಬಹುದು. ಇನ್ನು ಜನರು ತಮ್ಮ ಸ್ಮಾರ್ಟ್ ಫೋನ್ ನಲ್ಲಿಯೇ ಎಲ್ಲ ನಗದು ವ್ಯವಹಾರಗಳನ್ನು ಮಾಡುತ್ತಿದ್ದಾರೆ.

ಮೊಬೈಲ್ ಫೋನ್ ಕೈಯಲ್ಲಿದ್ದರೆ ಸಾಕು, ನಗದು ಹಣದ ಅಗತ್ಯ ಇರುವುದಿಲ್ಲ. ಇನ್ನು UPI ಪಾವತಿಗೆ ಸ್ಮಾರ್ಟ್ ಫೋನ್ ಗಳು ಅಗತ್ಯವಾಗಿರುತ್ತದೆ. ಆದಾಗ್ಯೂ, ಕೆಲವೊಮ್ಮೆ UPI ಪಾವತಿಗೆ ಬಳಸುತ್ತಿರುವ ಸ್ಮಾರ್ಟ್ ಫೋನ್ ಗಳು ಕಳೆದುಹೋಗುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ಬಳಕೆದಾರರಿಗೆ ಚಿಂತೆ ಎದುರಾಗುವುದು ಸಾಮಾನ್ಯ. ಇಂತಹ ಸಮಸ್ಯೆಯನ್ನು ಹೋಗಲಾಡಿಸಲು ಒಂದು ಮಾರ್ಗವಿದೆ ಅದೇನು ಎನ್ನುವ ಬಗ್ಗೆ ತಿಳಿಯಲು ಈ ಲೇಖನವನ್ನು ಓದಿ.

PhonePe ID Inactive Process
Image Credit: Fortuneindia

ಫೋನ್ ಕಳೆದುಕೊಂಡರೆ ಭಯಪಡುವ ಅಗತ್ಯ ಇಲ್ಲ
ಸಾಮಾನ್ಯವಾಗಿ UPLI ಅಪ್ಲಿಕೇಶನ್ ಅನ್ನು ಬಳಸುವ ಸ್ಮಾರ್ಟ್ ಫೋನ್ ಕಳೆದುಹೋದರೆ ಇದರಿಂದ ಹೆಚ್ಚಿನ ಸಮಸ್ಯೆ ಎದುರಾಗುತ್ತದೆ. ಮೊಬೈಲ್ ನಲ್ಲಿ UPI ಅಪ್ಲಿಕೇಶನ್ ಗಳು ಇರುವುದರಿಂದ ಮೊಬೈಲ್ ಯಾರ ಕೈಯಲ್ಲಾದರೂ ಸಿಕ್ಕಿದರೆ ಅದನ್ನು ದುರುಪಯೋಗಪಡಿಸಿಕೊಳ್ಳಬಹುದು. ಇಂಥ ಸಮಯದಲ್ಲಿ ನೀವು ನಿಮ್ಮ UPI ID ಯನ್ನು ನಿಷ್ಕ್ರಿಯಗೊಳಿಸುವುದು ಮುಖ್ಯ. ನಿಮ್ಮ ಫೋನ್ ಕಳೆದುಹೋದಾಗ ಈ ವಿಧಾನವನ್ನು ಅನುಸರಿಸುವ ಮೂಲಕ ನಿಮ್ಮ UPI ID ಯನ್ನು ನಿಷ್ಕ್ರಿಯಗೊಳಿಸಿಕೊಳ್ಳಿ.

ಫೋನ್ ಕಳೆದುಹೋದ್ರೆ ತಕ್ಷಣ ಈ ಕೆಲಸ ಮಾಡಿ UPI ಬ್ಲಾಕ್ ಮಾಡಿ
•PhonePe ID Inactive
ಫೋನ್‌ಪೇ ಪಾವತಿಗೆ ಸಂಬಂಧಿಸಿದಂತೆ ಐಡಿಯನ್ನು ನಿರ್ಬಂಧಿಸಲು ಮೊದಲು ಮತ್ತೊಂದು ಫೋನ್ ಸಂಖ್ಯೆಯಿಂದ 02268727374 ಅಥವಾ 08068727374 ಗೆ ಕರೆ ಮಾಡಿ. ಅದರ ನಂತರ ನೀವು ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಜೊತೆ ಮಾತನಾಡಬೇಕು. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇತರ ಕೆಲವು ವಿವರಗಳನ್ನು ನೀವು ನೀಡಿದರೆ ಅವರು ಫೋನ್ ಪೇ ಐಡಿಯನ್ನು ನಿಷ್ಕ್ರಿಯಗೊಳಿಸುತ್ತಾರೆ.

Paytm ID Inactive Process
Image Credit: Business Today

•Paytm ID Inactive
Paytm ಬ್ಲಾಕ್‌ ಮಾಡಲು ನೀವು ಸಹಾಯವಾಣಿ ಸಂಖ್ಯೆ 01204456456 ಗೆ ಕರೆ ಮಾಡಿ. ಅದರ ನಂತರ ನೀವು ನಿಮ್ಮ ಫೋನ್ ಸಂಖ್ಯೆಯ ಮೂಲಕ Paytm ನಿಂದ ಲಾಗ್ಔಟ್ ಮಾಡಬಹುದು. ಅದರ ನಂತರ Paytm ವೆಬ್‌ ಸೈಟ್‌ ಗೆ ಹೋಗಿ. ನಂತರ 24 X 7 ಸಹಾಯದ ಮೇಲೆ ಕ್ಲಿಕ್ ಮಾಡಿ. ನಂತರ ರಿಪೋರ್ಟ್ ಎ ಫ್ರಾಡ್ ಅಥವಾ ಮೆಸೇಜ್ ಅಸ್ ಆಯ್ಕೆಯನ್ನು ಆಯ್ಕೆಮಾಡಿ. ನಿಮ್ಮ ಫೋನ್ ಕಳೆದುಹೋಗಿದೆ ಎಂದು ವರದಿ ಮಾಡಿದರೆ, Paytm ಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ.

Join Nadunudi News WhatsApp Group

•Google Pay Inactivation Process
ನೀವು Google Pay ಅನ್ನು ನಿರ್ಬಂಧಿಸಲು ಬಯಸಿದರೆ, ಮೊದಲು ಇನ್ನೊಂದು ಫೋನ್‌ ನಿಂದ 18004190157 ಅನ್ನು ಡಯಲ್ ಮಾಡಿ. ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಜೊತೆ ಮಾತನಾಡುವ ಮೂಲಕ ನೀವು ಐಡಿಯನ್ನು ನಿಷ್ಕ್ರಿಯಗೊಳಿಸಬಹುದು.

Google Pay Activation Process
Image Credit: cnet

Join Nadunudi News WhatsApp Group