UPI ID Inactivation: ಫೋನ್ ಕಳೆದುಹೋದರೆ UPI, ಗೂಗಲ್ ಪೆ ಮತ್ತು ಫೋನ್ ಪೆ ನಿಷ್ಕ್ರಿಯ ಮಾಡುವುದು ಹೇಗೆ…?

ಗೂಗಲ್ ಪೆ, ಪೆಟಿಎಂ ಮತ್ತು ಫೋನ್ ಪೆ ನಿಷ್ಕ್ರಿಯ ಮಾಡುವುದು ಹೇಗೆ...?

UPI ID Inactivation Process: ಸದ್ಯ ದೇಶದೆಲ್ಲೆಡೆ UPI Payment ಹೆಚ್ಚು ಬಳಕೆ ಆಗುತ್ತಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ UPI Application ಗಳನ್ನೂ ಬಳಸುತ್ತಿದ್ದಾರೆ. ಇನ್ನು NPCI ಜನರಿಗಾಗಿ ವಿವಿಧ ಪಾವತಿಯ ಅಪ್ಲಿಕೇಶನ್ ಗಳನ್ನೂ ನೀಡುತ್ತಿದೆ. ಜನರು ಹೆಚ್ಚಾಗಿ Google pay , PhonePe ಹಾಗೂ Paytm ಅನ್ನು ಬಳಸುತ್ತಿದ್ದಾರೆ.

ಇನ್ನು ಜನರು ತಮ್ಮ ಸ್ಮಾರ್ಟ್ ಫೋನ್ ನಲ್ಲಿಯೇ ಎಲ್ಲ ನಗದು ವ್ಯವಹಾರಗಳನ್ನು ಮಾಡುತ್ತಿದ್ದಾರೆ. ಆದಾಗ್ಯೂ, ಕೆಲವೊಮ್ಮೆ UPI ಪಾವತಿಗೆ ಬಳಸುತ್ತಿರುವ ಸ್ಮಾರ್ಟ್ ಫೋನ್ ಗಳು ಕಳೆದುಹೋಗುವುತ್ತದೆ. ಇಂತಹ ಸಮಯದಲ್ಲಿ ಏನು ಮಾಡಬೇಕು…?

Google Pay ID Inactive
Image Credit: India

UPI ID ಇರುವ ಫೋನ್ ಕಳೆದುಹೋದರೆ…!
ಸ್ಮಾರ್ಟ್ ಫೋನ್ ಕಳೆದುಹೋದರೆ ಇದರಿಂದ ಹೆಚ್ಚಿನ ಸಮಸ್ಯೆ ಎದುರಾಗುತ್ತದೆ. ಮೊಬೈಲ್ ನಲ್ಲಿ UPI ಅಪ್ಲಿಕೇಶನ್ ಗಳು ಇರುವುದರಿಂದ ಮೊಬೈಲ್ ಯಾರ ಕೈಯಲ್ಲಾದರೂ ಸಿಕ್ಕಿದರೆ ಅದನ್ನು ದುರುಪಯೋಗಪಡಿಸಿಕೊಳ್ಳಬಹುದು. ಇಂಥ ಸಮಯದಲ್ಲಿ ನೀವು ನಿಮ್ಮ UPI ID ಯನ್ನು ನಿಷ್ಕ್ರಿಯಗೊಳಿಸುವುದು ಮುಖ್ಯ. ನಿಮ್ಮ ಫೋನ್ ಕಳೆದುಹೋದಾಗ ಈ ವಿಧಾನವನ್ನು ಅನುಸರಿಸುವ ಮೂಲಕ ನಿಮ್ಮ UPI ID ಯನ್ನು ನಿಷ್ಕ್ರಿಯಗೊಳಿಸಿಕೊಳ್ಳಿ.

ಗೂಗಲ್ ಪೆ, ಪೆಟಿಎಂ ಮತ್ತು ಫೋನ್ ಪೆ ನಿಷ್ಕ್ರಿಯ ಮಾಡುವುದು ಹೇಗೆ…?
•Google Pay ID Inactive
ನೀವು Google Pay ಅನ್ನು ನಿರ್ಬಂಧಿಸಲು ಬಯಸಿದರೆ, ಮೊದಲು ಇನ್ನೊಂದು ಫೋನ್‌ ನಿಂದ 18004190157 ಅನ್ನು ಡಯಲ್ ಮಾಡಿ. ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಜೊತೆ ಮಾತನಾಡುವ ಮೂಲಕ ನೀವು ಐಡಿಯನ್ನು ನಿಷ್ಕ್ರಿಯಗೊಳಿಸಬಹುದು.

PhonePe ID Inactive
Image Credit: entrackr

•PhonePe ID Inactive
ಫೋನ್‌ಪೇ ಪಾವತಿಗೆ ಸಂಬಂಧಿಸಿದಂತೆ ಐಡಿಯನ್ನು ನಿರ್ಬಂಧಿಸಲು ಮೊದಲು ಮತ್ತೊಂದು ಫೋನ್ ಸಂಖ್ಯೆಯಿಂದ 02268727374 ಅಥವಾ 08068727374 ಗೆ ಕರೆ ಮಾಡಿ. ಅದರ ನಂತರ ನೀವು ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಜೊತೆ ಮಾತನಾಡಬೇಕು. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇತರ ಕೆಲವು ವಿವರಗಳನ್ನು ನೀವು ನೀಡಿದರೆ ಅವರು ಫೋನ್ ಪೇ ಐಡಿಯನ್ನು ನಿಷ್ಕ್ರಿಯಗೊಳಿಸುತ್ತಾರೆ.

Join Nadunudi News WhatsApp Group

•Paytm ID Inactive
Paytm ಬ್ಲಾಕ್‌ ಮಾಡಲು ನೀವು ಸಹಾಯವಾಣಿ ಸಂಖ್ಯೆ 01204456456 ಗೆ ಕರೆ ಮಾಡಿ. ಅದರ ನಂತರ ನೀವು ನಿಮ್ಮ ಫೋನ್ ಸಂಖ್ಯೆಯ ಮೂಲಕ Paytm ನಿಂದ ಲಾಗ್ಔಟ್ ಮಾಡಬಹುದು. ಅದರ ನಂತರ Paytm ವೆಬ್‌ ಸೈಟ್‌ ಗೆ ಹೋಗಿ. ನಂತರ 24 X 7 ಸಹಾಯದ ಮೇಲೆ ಕ್ಲಿಕ್ ಮಾಡಿ. ನಂತರ ರಿಪೋರ್ಟ್ ಎ ಫ್ರಾಡ್ ಅಥವಾ ಮೆಸೇಜ್ ಅಸ್ ಆಯ್ಕೆಯನ್ನು ಆಯ್ಕೆಮಾಡಿ. ನಿಮ್ಮ ಫೋನ್ ಕಳೆದುಹೋಗಿದೆ ಎಂದು ವರದಿ ಮಾಡಿದರೆ, Paytm ಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ.

Paytm ID Inactive
Image Credit: Businesstoday

Join Nadunudi News WhatsApp Group