UPI: ಇನ್ನುಮುಂದೆ ಪಂಚಾಯತ್ ನಲ್ಲಿ ಯಾರು ಹಣ ಕೊಡುವಂತಿಲ್ಲ, ರಾಜ್ಯ ಸರ್ಕಾರದ ಹೊಸ ನಿಯಮ.

ದೇಶದಾದ್ಯಂತ ಎಲ್ಲಾ ಪಂಚಾಯತ್ ಗಳಲ್ಲಿ ಇನ್ನು ಮುಂದೆ ಯುಪಿಐ ಪಾವತಿ ಪ್ರಕ್ರಿಯೆ ಲಭ್ಯ.

Panchayat UPI: ಭಾರತ ಸರ್ಕಾರ ಡಿಜಿಟಲೀಕರಣಕ್ಕೆ ಹೆಚ್ಚು ಮಹತ್ವ ನೀಡುತ್ತಿದೆ. ಈಗಾಗಲೇ ಡಿಜಿಟಲ್ ಪಾವತಿ ಪ್ರಕ್ರಿಯೆ ಎಲ್ಲಾ ಕಡೆ ವ್ಯಾಪಕವಾಗಿ ಬಳಕೆ ಆಗುತ್ತಿದೆ. ಈ ನಡುವೆ ಮಹತ್ವದ ನಿರ್ಧಾರ ಒಂದನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಈ ಮೂಲಕ ಇನ್ನುಮುಂದೆ ದೇಶದ ಎಲ್ಲಾ ಪಂಚಾಯತ್ ಗಳಿಗೆ ಯುಪಿ ಐ(UPI) ಸೌಲಭ್ಯ ಲಭ್ಯವಾಗಲಿದೆ.

ದೇಶದಾದ್ಯಂತ ಎಲ್ಲಾ ಪಂಚಾಯತ್ ಗಳಲ್ಲಿ ಇನ್ನು ಮುಂದೆ ಯುಪಿಐ ಪಾವತಿ ಪ್ರಕ್ರಿಯೆ ಲಭ್ಯ ಇರಲಿದೆ. ಇದರಿಂದಾಗಿ ಸರ್ಕಾರ ಯೋಜನೆಗಳನ್ನು ಪಡೆದುಕೊಳ್ಳಲು ಅಥವಾ ಸರ್ಕಾರಕ್ಕೆ ಯಾವುದಾದರೂ ಹಣ ಪಾವತಿ ಮಾಡುವುದು ಸುಲಭವಾಗಲಿದೆ. ಇದರಿಂದ ಭ್ರಷ್ಟಾಚಾರಕ್ಕೂ ಕಡಿವಾಣ ಹಾಕಿದಂತೆ ಆಗುತ್ತದೆ.

Digital transactions are now available in Panchayat
Image Credit: Oneindia

ಪಂಚಾಯತ್ ಗಳಲ್ಲಿ ಇನ್ನುಮುಂದೆ ಡಿಜಿಟಲ್ ವಹಿವಾಟು ಲಭ್ಯ
ಇನ್ನು ಈ ಸ್ವಾತಂತ್ರ್ಯ ದಿನಾಚರಣೆಯಿಂದ ಕಡ್ಡಾಯವಾಗಿ ಡಿಜಿಟಲ್ ಪಾವತಿ ಸೇವೆಯನ್ನು ಅಭಿವೃದ್ಧಿ ಕಾರ್ಯಗಳು ಮತ್ತು ಆದಾಯ ಸಂಗ್ರಹಣೆಗಾಗಿ ಬಳಕೆ ಮಾಡಲಾಗುತ್ತದೆ. ಜೊತೆಗೆ UPI ಬಳಕೆದಾರರೆಂದು ಪಂಚಾಯತ್ ಗಳನ್ನೂ ಘೋಷಣೆ ಮಾಡಲಾಗುತ್ತದೆ ಎಂದು ತಿಳಿಸಿದೆ.

ಸುಮಾರು 98% ಪಂಚಾಯತ್ ಗಳು ಈಗಾಗಲೇ ಯು ಪಿ ಐ ಆಧಾರಿತ ಪಾವತಿಗಳನ್ನು ನಡೆಸುತ್ತಿವೆ. ಈ ಬಗ್ಗೆ ಪಂಚಾಯತ್ ರಾಜ್ ಸಚಿವಾಲಯದ ಕಾರ್ಯದರ್ಶಿ ಸುನಿಲ್ ಕುಮಾರ್ ತಿಳಿಸಿದ್ದಾರೆ.

ಸರ್ಕಾರ ಪಂಚಾಯತ್ ಗಳಲ್ಲಿ ಡಿಜಿಟಲ್ ವಹಿವಾಟು ಅಳವಡಿಕೆ ಮಾಡುತ್ತಿರುವುದರಿಂದಾಗಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದಂತೆ ಆಗುತ್ತದೆ ಎಂದು ಪಂಚಾಯತ್ ರಾಜ್ ಖಾತೆ ಸಚಿವ ಕಪಿಲ್ ಮೋರೇಶ್ವರ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Join Nadunudi News WhatsApp Group

Digital transactions are now available in Panchayat
Image Credit: Thelivenagpur

ಈಗ ಬಹುತೇಕ ಪಂಚಾಯಿತಿಗಳು ಡಿಜಿಟಲ್ ವಹಿವಾಟು ನಡೆಸುತ್ತಿವೆ. ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ ಜನವರಿ 2023 ರಲ್ಲಿ ಭೀಮ್ ಮೂಲಕ 12 .98 ಲಕ್ಷ ಕೋಟಿ ಮೌಲ್ಯದ 806 .3 ಕೋಟಿ ವ್ಯವಹಾರಗಳು ನಡೆದಿದೆ. ಇದರಲ್ಲಿ ಶೇಕಡಾ 50 ರಷ್ಟು ವಹಿವಾಟು ಗ್ರಾಮೀಣ ಭಾಗದ ಹಾಗು ಸುತ್ತಮುತ್ತಲಿನ ಪ್ರದೇಶಗಳಲ್ಲಿಯೇ ನಡೆದಿದೆ ಎಂದು ತಿಳಿದುಬಂದಿದೆ.

Join Nadunudi News WhatsApp Group