Vivaha Yojana: ಮದುವೆಯಾಗುವವರಿಗೆ ಸಿಗಲಿದೆ 2.50 ಲಕ್ಷ, ಕೇಂದ್ರದ ಹೊಸ ಯೋಜನೆ ಆರಂಭ

ಮದುವೆಯಾಗುವವರಿಗೆ ಸಿಗಲಿದೆ 2.50 ಲಕ್ಷ

Vivaha Yojana 2024: ಮದುವೆಯ ಬಗ್ಗೆ ಎಲ್ಲರು ಕೂಡ ಕನಸು ಕಂಡಿರುತ್ತಾರೆ. ತಾವು ಯಾವ ರೀತಿ ಮದುವೆ ಆಗಬೇಕು ಎನ್ನುವ ಬಗ್ಗೆ ಮೊದಲೇ ಯೋಜನೆಯನ್ನು ಹಾಕಿಕೊಳ್ಳುತ್ತಾರೆ. ಮದುವೆಯಾಗುವುದು ಕನಸು ಕಂಡಷ್ಟು ಸುಲಭವಲ್ಲ. ಮದುವೆಗಾಗಿ ಸಾಕಷ್ಟು ಖರ್ಚು ಮಾಡಬೇಕಾಗುತ್ತದೆ. ಆದರೆ ನಿಮಗೆ ಗೊತ್ತೇ, ಕೇಂದ್ರ ಸರ್ಕಾರ ಮದುವೆಯಾಗಯುವವರಿಗೆ ಹಣ ನೀಡಲು ಹೊಸ ಯೋಜನೆಯನ್ನು ಜಾರಿಗೆ ತಂದಿದೆ.

ಹೌದು, ಕೇಂದ್ರದ ಈ ಯೋಜನೆಯಡಿ ಮದುವೆಯಾಗುವವರು ಸಹಾಯಧನವನ್ನು ಪಡೆಯಬಹುದು. ಅಷ್ಟಕ್ಕೂ ಕೇಂದ್ರ ಸರ್ಕಾರ ಮದುವೆಯಾಗುವವರಿಗೆ ಸಹಾಯಧನವನ್ನು ನೀಡಲು ಯಾವ ಯೋಜನೆಯನ್ನು ಜಾರಿಗೊಳಿಸಿದೆ..? ಯೋಜನೆಯಡಿ ಎಷ್ಟು ಸಹಾಯಧನ ಸಿಗಲಿದೆ..? ಯೋಜನೆಯ ಲಾಭ ಪಡೆಯಲು ಯಾರು ಅರ್ಹರು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Vivah Yojana 2024
Image Credit: Smartprix

ಮದುವೆಯಾಗುವವರಿಗೆ ಸಿಗಲಿದೆ 2.50 ಲಕ್ಷ
ಇದೀಗ ಕೇಂದ್ರ ಸರಕಾರ ಡಾ.ಅಂಬೇಡ್ಕರ್ ಪ್ರತಿಷ್ಠಾನದ ವಿವಾಹ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ಮದುವೆಯಾಗುವವರಿಗೆ ಸಹಾಯಧನ ನೀಡಲು ಸರ್ಕಾರ ಮುಂದಾಗಿದೆ. ಡಾ.ಅಂಬೇಡ್ಕರ್ ಪ್ರತಿಷ್ಠಾನದ ವಿವಾಹ ಯೋಜನೆಯ ಮೂಲಕ ನವ ದಂಪತಿಗಳು 2,50,000 ರೂ. ಹಣವನ್ನು ಪಡೆಯಬಹುದು. ಕೇಂದ್ರ ಸರ್ಕಾರ ಈ ಯೋಜನೆಯಡಿ ಸಹಾಯಧನವನ್ನು ಪಡೆಯಲು ಕೆಲವು ಷರತ್ತುಗಳನ್ನು ಹಾಕಿದೆ. ಇಂತವರು ಮಾತ್ರ ಡಾ.ಅಂಬೇಡ್ಕರ್ ಪ್ರತಿಷ್ಠಾನದ ವಿವಾಹ ಯೋಜನೆಯ ಅಡಿಯಲ್ಲಿ 2.50 ಲಕ್ಷ ಸಹಾಯದನವನ್ನು ಪಡೆಯಲು ಸಾಧ್ಯವಾಗುತ್ತದೆ.

ಕೇಂದ್ರದಿಂದ 2.50 ಲಕ್ಷ ಹಣ ಪಡೆಯಲು ಯಾರು ಅರ್ಹರು…?
•ಡಾ.ಅಂಬೇಡ್ಕರ್ ಪ್ರತಿಷ್ಠಾನದ ವಿವಾಹ ಯೋಜನೆಯಡಿ ಹಣವನ್ನು ಪಡೆಯಲು ದಂಪತಿಗಳಲ್ಲಿ ಒಬ್ಬರು ದಲಿತ ಸಮುದಾಯಕ್ಕೆ ಸೇರಿದವರಾಗಿರಬೇಕು.

•ದಂಪತಿಗಳ ವಾರ್ಷಿಕ ಆದಾಯ 5 ಲಕ್ಷಕ್ಕಿಂತ ಕಡಿಮೆ ಇರಬೇಕು.

Join Nadunudi News WhatsApp Group

•ಅರ್ಹ ದಂಪತಿಗಳು ತಮ್ಮ ಇಬ್ಬರ ಹೆಸರಿನ ಮುಂದೆ 1,25,000 ರೂ.ಗಳನ್ನು ಟಿಟಿಯಾಗಿ ಪಡೆಯುತ್ತಾರೆ.

•ಉಳಿದ ಮೊತ್ತ 1,25,000 ರೂ. 5 ವರ್ಷಗಳ ನಂತರ ಸಿಗಲಿದೆ.

Vivah Yojana In India
Image Credit: Thequint

Join Nadunudi News WhatsApp Group