Vivo Smart Watch: ಅಗ್ಗದ ಬೆಲೆ ಸ್ಮಾರ್ಟ್ ವಾಚ್ ಲಾಂಚ್ ಮಾಡಿದ Vivo, eSim ಕೂಡ ಹಾಕಬಹುದು.

ಅಗ್ಗದ ಬೆಲೆ ಸ್ಮಾರ್ಟ್ ವಾಚ್ ಲಾಂಚ್ ಮಾಡಿದ Vivo

Vivo Watch GT Smart Watch: ಇತ್ತೀಚಿನ ದಿನಗಳಲ್ಲಿ ಯುವಕರು ಮತ್ತು ಯುವತಿಯರು ಹೆಚ್ಚಾಗಿ Smart Watch ಇಷ್ಟಪಡುತ್ತಿರುವ ಕಾರಣ ಕೆಲವು ಕಂಪನಿಗಳು ಕಡಿಮೆ ಬೆಲೆಗೆ ಹೆಚ್ಚು ವೈಶಿಷ್ಟ್ಯತೆಯನ್ನು ಹೊಂದಿರುವ Smart Watch ಗಳನ್ನ ಮಾರುಕಟ್ಟೆಗೆ ಪರಿಚಯ ಮಾಡುತ್ತಿದೆ. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ Vivo ಕಂಪನಿಯು ವಿವಿಧ ಮಾದರಿಯ ಸ್ಮಾರ್ಟ್ ವಾಚ್ ಗಳನ್ನೂ ಪರಿಚಯಿಸುತ್ತ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಕಂಪನಿಯು ಸ್ಮಾರ್ಟ್ ಫೋನ್ ಗಳ ಜೊತೆಗೆ ಸ್ಮಾರ್ಟ್ ವಾಚ್ ಗಳನ್ನು ಪರಿಚಯಿಸುತ್ತ ಸಂಚಲನ ಮೂಡಿಸುತ್ತಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ Vivo ಕಂಪನಿಯ ಅತ್ಯಾಧುನಿಕ ಫೀಚರ್ ನ ಸ್ಮಾರ್ಟ್ ವಾಚ್ ಗಳನ್ನೂ ಬಿಡುಗಡೆ ಮಾಡಿದೆ. ಇದೀಗ ಕಂಪನಿಯು ಹೊಚ್ಚ ಹೊಸ ಮಾದರಿಯ ಸ್ಮಾರ್ಟ್ ವಾಚ್ ಅನ್ನು ವಿಶೇಷವಾಗಿ ವೈಶಿಷ್ಟ್ಯದೊಂದಿಗೆ ಪರಿಚಯಿಸಿದೆ. ಆಕರ್ಷಕ ಫೀಚರ್ ಹೊಂದಿರುವ ಈ ಸ್ಮಾರ್ಟ್ ವಾಚ್ ನ ಬೆಲೆ ಅತಿ ಕಡಿಮೆ ಎನ್ನಬಹುದು. ಇದೀಗ ವಿವೊ ಕಂಪನಿಯ ಹೊಸ ಸ್ಮಾರ್ಟ್ ವಾಚ್ ನ ಬಗ್ಗೆ ಮಾಹಿತಿ ತಿಳಿಯೋಣ.

Vivo Watch GT Smart Watch
Image Credit: Fonearena

ಅಗ್ಗದ ಬೆಲೆ ಸ್ಮಾರ್ಟ್ ವಾಚ್ ಲಾಂಚ್ ಮಾಡಿದ Vivo
ಭಾರತದಲ್ಲಿ ಭಾರೀ ಜನಪ್ರಿಯತೆ ಗಳಿಸಿರುವ ವಿವೋ, ಇದೀಗ Watch GT Smart Watch ಅನ್ನು ಕಂಪನಿಯು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ವಾಚ್ eSIM ಬೆಂಬಲದೊಂದಿಗೆ ಬರುತ್ತದೆ ಮತ್ತು AMOLED ಡಿಸ್ಪ್ಲೇ ಆಯ್ಕೆಯನ್ನು ಹೊಂದಿದೆ. ಈ ಮೂಲಕ ಸ್ಮಾರ್ಟ್ ವಾಚ್ ಬಳಕೆದಾರರು ಇದನ್ನು ಸ್ಮಾರ್ಟ್ ವಾಚ್ ನಂತೆ ಬಳಸಬಹುದು. ಇದಲ್ಲದೆ, ಈ ಗಡಿಯಾರವು ಆಕರ್ಷಕ ಮತ್ತು ವಿಭಿನ್ನ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಹೌದು, Vivo S19 ಸರಣಿಯ ಸ್ಮಾರ್ಟ್‌ ಫೋನ್ ಜೊತೆಗೆ, Vivo Watch GT ಅನ್ನು ಸಹ ಘೋಷಿಸಲಾಗಿದೆ. ಇದು ಅಲ್ಯೂಮಿನಿಯಂ ಮಿಶ್ರಲೋಹದ ಕವಚದೊಂದಿಗೆ ಕಂಪನಿಯ ಇತ್ತೀಚಿನ ಸ್ಮಾರ್ಟ್ ವಾಚ್ ಆಗಿದೆ. ಅಲ್ಲದೆ, ಈ ಸ್ಮಾರ್ಟ್ ವಾಚ್ ಚದರ ಡಯಲ್ ವಿನ್ಯಾಸವನ್ನು ಹೊಂದಿದೆ ಮತ್ತು ಸಿಲಿಕೋನ್ ಮತ್ತು ಲೆದರ್ ಸ್ಟ್ರಾಪ್ ಆಯ್ಕೆಗಳನ್ನು ನೀಡುತ್ತದೆ. ಸ್ಮಾರ್ಟ್ ವಾಚ್ ಬ್ಲೂ ಓಎಸ್‌ ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ವೃತ್ತಿಪರ ತರಬೇತುದಾರರು ಮತ್ತು ಕೋರ್ಸ್‌ ಗಳ ಜೊತೆಗೆ 100 ಕ್ರೀಡಾ ವಿಧಾನಗಳನ್ನು ಬೆಂಬಲಿಸುತ್ತದೆ.

Vivo Watch GT Smart Watch Price
Image Credit: 91mobiles

eSim ಕೂಡ ಹಾಕಬಹುದು
ಈ ಸ್ಮಾರ್ಟ್ ವಾಚ್ 1.85-ಇಂಚಿನ AMOLED ಡಿಸ್ಪ್ಲೇಯನ್ನು 390×450 ಪಿಕ್ಸೆಲ್ಗಳ ಸ್ಕ್ರೀನ್ ರೆಸಲ್ಯೂಶನ್ ಹೊಂದಿದೆ. ಅಲ್ಲದೆ, ಇದು 2.5D ಕರ್ವ್ಡ್ ಡಿಸ್ಪ್ಲೇ ಹೊಂದಿದ್ದು ನಿಮಗೆ ಸ್ಮಾರ್ಟ್ ಫೋನ್ ತರಹದ ಅನುಭವವನ್ನು ನೀಡುತ್ತದೆ. ಇದು ನಿಮ್ಮ ಚಿಕ್ಕ ಫೋನ್ ಎಂದು ಹೇಳಬಹುದು. ಈ ಸ್ಮಾರ್ಟ್ ವಾಚ್ ಸರಾಸರಿ ಹೃದಯ ಬಡಿತದ ನಿಖರತೆಯನ್ನು 94.58% ಹೊಂದಿದೆ ಎಂದು ಹೇಳಲಾಗಿದೆ.

Join Nadunudi News WhatsApp Group

ಅಕ್ಸೆಲೆರೊಮೀಟರ್ ಸೆನ್ಸರ್, ಗೈರೊಸ್ಕೋಪ್, ಜಿಯೋಮ್ಯಾಗ್ನೆಟಿಕ್ ಸೆನ್ಸಾರ್, ಆಂಬಿಯೆಂಟ್ ಲೈಟ್ ಸೆನ್ಸರ್ ಸೇರಿದಂತೆ ವಿವಿಧ ಸೆನ್ಸರ್‌ ಗಳನ್ನು ಈ ವಾಚ್‌ ನಲ್ಲಿ ಕಾಣಬಹುದು. ನೀವು eSIM ಸಕ್ರಿಯಗೊಳಿಸಿದ ಈ ಸ್ಮಾರ್ಟ್‌ವಾಚ್ ಅನ್ನು ಬಳಸಿದರೆ, ನೀವು 9 ದಿನಗಳ ಬ್ಯಾಟರಿ ಬ್ಯಾಕಪ್ ಅನ್ನು ಪಡೆಯಬಹುದು ಮತ್ತು ನೀವು ಬ್ಲೂಟೂತ್ ಅನ್ನು ಮಾತ್ರ ಬಳಸಿದರೆ, ನೀವು 21 ದಿನಗಳ ಬ್ಯಾಟರಿ ಬ್ಯಾಕಪ್ ಅನ್ನು ಪಡೆಯಬಹುದು. ಇನ್ನು ಈ ನೂತನ ಸ್ಮಾರ್ಟ್ ವಾಚ್ ಮಾರುಕಟ್ಟೆಯಲ್ಲಿ 10 ಸಾವಿರ ಬೆಲೆಯಲ್ಲಿ ಲಾಂಚ್ ಆಗಲಿದೆ.

Vivo Watch GT Smart Watch Features
Image Credit: Gsmarena

Join Nadunudi News WhatsApp Group