Waiting List Ticket: ವೈಟಿಂಗ್ ಲಿಸ್ಟ್ ಟಿಕೆಟ್ ನಿಯಮದಲ್ಲಿ ಬದಲಾವಣೆ, ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್.

ವೈಟಿಂಗ್ ಲಿಸ್ಟ್ ಟಿಕೆಟ್ ನಿಯಮದಲ್ಲಿ ಬದಲಾವಣೆ

Waiting List Ticket New Rule: ಈಗಾಗಲೇ ದೇಶದಲ್ಲಿ ರೈಲ್ವೆ ವ್ಯವಸ್ಥೆಯನ್ನು ಸಾಕಷ್ಟು ಆಧುನಿಕರಣಗೊಳಿಸಲಾಗಿದೆ. ರೈಲು ನಿಲ್ದಾಣಗಳನ್ನು ಹೆಚ್ಚು ನವೀಕರಣಗೊಳಿಸಲಾಗಿದ್ದು, ರೈಲು ಪ್ರಯಾಣಿಕರಿಗೆ ಸಾಕಷ್ಟು ಸೌಲಭ್ಯವನ್ನು ಕೂಡ ನೀಡಲಾಗಿದೆ. ದೂರದ ಪ್ರಯಾಣಕ್ಕೆ ಜನರು ಹೆಚ್ಚಾಗಿ ರೈಲು ಪ್ರಯಾಣವನ್ನು ಆರಿಸುತ್ತಾರೆ. ಹೀಗಿರುವಾಗ ಪ್ರಯಾಣಿಕರಿಗೆ ಹೆಚ್ಚು ಸೌಲಭ್ಯವನ್ನು ನೀಡುವುದು ರೈಲ್ವೆ ಇಲಾಖೆಯ ಜವಾಬ್ದಾರಿಯಾಗಿರುತ್ತದೆ.

ಪ್ರಯಾಣಿಕರ ಸುರಕ್ಷತೆಗಾಗಿ ರೈಲ್ವೆ ಇಲಾಖೆಯು ಆಗಾಗ ಹೊಸ ಹೊಸ ಸೌಲಭ್ಯವನ್ನು ಪರಿಚಯಿಸುತ್ತ ಇರುತ್ತದೆ. ಇನ್ನು ರೈಲು ಪ್ರಯಾಣಿಕರಿಗೆ Ticket ವಿಚಾರದಲ್ಲಿ ಹೆಚ್ಚು ಸಮಸ್ಯೆ ಆಗುತ್ತದೆ. ರೈಲಿನಲ್ಲಿ ಪ್ರಯಾಣ ಮಾಡಲು ಕನ್ಫರ್ಮ್ ಟಿಕೆಟ್ ಪಡೆಯುವುದು ಸ್ವಲ್ಪ ಕಷ್ಟ ಎನ್ನಬಹುದು. ಸದ್ಯ ಪ್ರಯಾಣಿಕರ ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಇಲಾಖೆಯು ಮಹತ್ವದ ನಿರ್ಧಾರ ಕೈಗೊಂಡಿದೆ.

Waiting List Ticket New Rule
Image Credit: Informal News

ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್
ರೈಲು ಸಂಚಾರ ದಿನದಿಂದ ದಿನಕ್ಕೆ ಕಠಿಣವಾಗುತ್ತಿದೆ. ಕಾರಣ ಟ್ರಾಫಿಕ್ ದಟ್ಟಣೆ, ನಿಲ್ಲಲು ಸ್ಥಳವಿಲ್ಲ ಎನ್ನುವಷ್ಟು ಪ್ರಯಾಣಿಕರು, ಬುಕ್ಕಿಂಗ್ ಮಾಡಿದರೆ ವೇಟಿಂಗ್ ಲಿಸ್ಟ್ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡಲು ರೈಲ್ವೆ ಮುಂದಾಗಿದೆ.

ಸದ್ಯ ಭಾರತೀಯ ರೈಲ್ವೇ ಪ್ರಮುಖ ಬದಲಾವಣೆಗಳಿಗೆ ಒಳಗಾಗುತ್ತಿದೆ. ಬುಕ್ ಮಾಡಿದವರಿಗೆ ತಕ್ಷಣ ಟಿಕೆಟ್ ಕನ್ಫರ್ಮೇಷನ್ ನೀಡಲು ಇಲಾಖೆ ನಿರ್ಧರಿಸಿದೆ. ವೇಟಿಂಗ್ ಲಿಸ್ಟ್‌ ಗಾಗಿ ಕಾಯುವ ಅಗತ್ಯವಿಲ್ಲ. ಇದರಿಂದ ಪ್ರಯಾಣಿಕರ ಪ್ರಯಾಣವೂ ಸರಳ ಮತ್ತು ಆರಾಮದಾಯಕವಾಗಲಿದೆ. ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಈ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ.

Waiting List Ticket New Update
Image Credit: Live Mint

ವೈಟಿಂಗ್ ಲಿಸ್ಟ್ ಟಿಕೆಟ್ ನಿಯಮದಲ್ಲಿ ಬದಲಾವಣೆ
ಪ್ರಯಾಣಿಕರ ಸಂಖ್ಯೆ ಹೆಚ್ಚಾದಂತೆ ರೈಲುಗಳ ಸಂಖ್ಯೆಯೂ ಹೆಚ್ಚುತ್ತಿದೆ. ಭಾರತದ ಮೂಲೆ ಮೂಲೆಗೂ ರೈಲು ಸೇವೆಗಳನ್ನು ಒದಗಿಸಲಾಗಿದೆ. ಯಾವುದೇ ವೇಟಿಂಗ್ ಲಿಸ್ಟ್ ಗಾಗಿ ಕಾಯದೆ ಸೀಟುಗಳನ್ನು ಕಾಯ್ದಿರಿಸಲು ಸಾಧ್ಯವಿದೆ. 2032 ರ ವೇಳೆಗೆ ಭಾರತೀಯ ರೈಲ್ವೆಯಲ್ಲಿ ಸಂಪೂರ್ಣ ಬದಲಾವಣೆ ಆಗಲಿದೆ ಎಂದು ಅಶ್ವಿನ್ ವೈಷ್ಣವ್ ಹೇಳಿದ್ದಾರೆ.

Join Nadunudi News WhatsApp Group

ರೈಲ್ವೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸಚಿವರು ರೈಲ್ವೇ ಇಲಾಖೆಯ ಅಧಿಕಾರಿಗಳು, ಶಿಸ್ತು ಮತ್ತು ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗುವಂತೆ ಉನ್ನತ ಮಟ್ಟದ ಸಭೆ ನಡೆಸಿದರು. ಕೆಲಸ, ಕರ್ತವ್ಯ ನಿರ್ಲಕ್ಷ್ಯ ಮಾಡಬಾರದು ಎಂದು ಖಡಕ್ ಸೂಚನೆ ನೀಡಿದ್ದಾರೆ. ರೈಲಿನಲ್ಲಿ ನೀಡುವ ಆಹಾರ, ರೈಲಿನ ಸ್ವಚ್ಛತೆ, ಶೌಚಾಲಯ, ನೀರು, ಎಸಿ, ಫ್ಯಾನ್ ಪರಿಶೀಲಿಸಬೇಕು. ರೈಲು ಸಮಯ ವಿಳಂಬವಾಗಬಾರದು. ರೈಲು ಸಮಯಕ್ಕೆ ಸರಿಯಾಗಿ ಹೊರಡಬೇಕು. ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

Waiting List Ticket Latest News
Image Credit: Businessleague

Join Nadunudi News WhatsApp Group