Airplane Mileage: ವಿಮಾನಗಳಿಗೆ ಬಳಸುವ ಪೆಟ್ರೋಲ್ ಯಾವುದು ಮತ್ತು ವಿಮಾನಗಳ ಮೈಲೇಜ್ ಎಷ್ಟು.

ವಿಮಾನಗಳ ಹಾರಾಟ ಮಾಡಲು ಬಹಳ ಖರ್ಚಾಗುತ್ತದೆ ಮತ್ತು ವಿಮಾಗಳ ಮೈಲೇಜ್ ಬಹಳ ಕಡಿಮೆ ಆಗಿದೆ.

Airplane Petrol And Mileage: ಜೀವನದಲ್ಲಿ ಒಮ್ಮೆಯಾದರೂ ವಿಮಾನದಲ್ಲಿ (Flight) ಪ್ರಯಾಣ ಮಾಡುವ ಆಸೆ ಎಲ್ಲರಿಗೂ ಇದ್ದೆ ಇರುತ್ತದೆ. ಹೌದು ಈ ಭೂಮಿ ಮೇಲೆ ಇರುವ ಐಷಾರಾಮಿ ವಾಹನಗಳಲ್ಲಿ ವಿಮಾನ ಕೂಡ ಒಂದು.

ಒಂದು ದೇಶದಿಂದ ಇನ್ನೊಂದು ಅತೀ ವೇಗದಲ್ಲಿ ಪ್ರಯಾಣ ಮಾಡಲು ವಿಮಾನವನ್ನ ಬಳಕೆ ಮಾಡಲಾಗುತ್ತದೆ. ಸದ್ಯ ವಿಮಾನದಲ್ಲಿ ಪ್ರಯಾಣ ಮಾಡುವುದು ಬಹಳ ದುಬಾರಿ ಆಗಿದೆ.  ಹೌದು ವಿಮಾನ ಅನ್ನುವುದು ಐಷಾರಾಮಿ ವಾಹನ ಆಗಿದ್ದು ಅದರ ಖರ್ಚು ಕೂಡ ಬಹಳ ಹೆಚ್ಚಾಗಿದೆ.

ಇತರೆ ವಾಹನಗಳಿಗೆ ಬಳಸುವ ಇಂಧನಗಳಿಗೆ ಹೋಲಿಕೆ ಮಾಡಿದರೆ ವಿಮಾನಕ್ಕೆ ಬಳಕೆ ಮಾಡುವ ಪೆಟ್ರೋಲ್ ಬಹಳ ಭಿನ್ನವಾಗಿದೆ.ಅದೇ ರೀತಿಯಲ್ಲಿ ವಿಮಾನದಲ್ಲಿ ಮೈಲೇಜ್ ಕೂಡ ಬಹಳ ಕಡಿಮೆ ಎಂದು ಹೇಳಬಹುದು.

Compared to other vehicles, the mileage of airplanes is very low.
Image Credit: cnn

ವಿಮಾನಕ್ಕೆ ಬಳಸುವ ಪೆಟ್ರೋಲ್ ಬೆಲೆ ಬಹಳ ಅಧಿಕ
ಹೌದು ವಿಮಾನ, ಜೆಟ್ ಮತ್ತು ಹೆಲಿಕಾಪ್ಟರ್ ಗಳಿಗೆ ಬೇರೆ ವಿಧದ ಇಂಧನವನ್ನ ಬಳಕೆ ಮಾಡಲಾಗುತ್ತದೆ. ಇನ್ನು ವಿಮಾನಗಳಿಗೆ ಬಳಸುವ ಇಂಧನವನ್ನ ಏವಿಯೇಷನ್ ಸೀಮೆಎಣ್ಣೆ (aviation kerosene) ಅಥವಾ QAV ಇಂಧನ ಎಂದು ಕರೆಯಲಾಗುತ್ತದೆ. ಇನ್ನು QAV ಇಂಧನವು ಪೆಟ್ರೋಲಿಯಂ ನಿಂದ ಪಡೆದ ಬಟ್ಟಿ ದ್ರವವಾಗಿದೆ ಮತ್ತು ಇದೊಂದು ಸೀಮೆಎಣ್ಣೆ ಆಧಾರಿತ ಇಂಧನ ಆಗಿದೆ.

The fuel used for aircraft is called aviation kerosene or QAV fuel. Now QAV fuel is a petroleum derived liquid and is a kerosene based fuel.
Image Credit: godigit

ವಿಮಾನಕ್ಕೆ ಬಳಸುವ ಇಂಧನದ ಬೆಲೆ ಬಹಳ ದುಬಾರಿ
ಹೌದು ಮಾಹಿತಿಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ದೇಶಿಯ ವಿಮಾನ ಮತ್ತು ಅಂತಾರಾಷ್ಟ್ರೀಯ ವಿಮಾನಗಳಿಗೆ ಬಳಸುವ ಇಂಧನದ ಬೆಲೆ ಬಹಳ ಭಿನ್ನವಾಗಿದೆ.

Join Nadunudi News WhatsApp Group

ದೆಹಲಿಯಲ್ಲಿ ವಿಮಾನಕ್ಕೆ ಬಳಸುವ ಇಂಧನದ ಬೆಲೆ ಪ್ರತಿ ಕಿಲೋ ಲೀಟರ್ ಗೆ 1,07,750 ರೂಪಾಯಿ ಆಗಿದೆ ಅಂದರೆ ಒಂದು ಲೀಟರ್ ಗೆ 107 ರೂಪಾಯಿ ಆಗಿದೆ. ಒಂದು ಕಿಲೋ ಲೀಟರ್ ನಲ್ಲಿ ಸುಮಾರು 1,000 ಲೀಟರ್ ಎಣ್ಣೆ ಇರುತ್ತದೆ. ಸಾಮಾನ್ಯ ಎಣ್ಣೆಗೆ ಹೋಲಿಕೆ ಮಾಡಿದರೆ ವಿಮಾನಕ್ಕೆ ಬಳಸುವ ಇಂಧನದ ಬೆಳೆಗೆ ವ್ಯತ್ಯಾಸ ಬಹಳ ಕಡಿಮೆ ಎಂದು ಹೇಳಬಹುದು.

Compared to other vehicles on earth, the mileage of airplanes is very low. The speed of an airplane is about 900 kilometers per hour, which means it travels about 250 meters per second.
Image Credit: aerocorner

ವಿಮಾನಗಳ ಮೈಲೇಜ್ ಎಷ್ಟು
ಭೂಮಿಯ ಮೇಲೆ ಇರುವ ಇತರೆ ವಾಹನಗಳಿಗೆ ಹೋಲಿಕೆ ಮಾಡಿದರೆ ವಿಮಾನಗಳ ಮೈಲೇಜ್ ಬಹಳ ಕಡಿಮೆ ಆಗಿದೆ. ಒಂದು ವಿಮಾನದ ವೇಗ ಘಂಟೆಗೆ ಸುಮಾರು 900 ಕಿಲೋ ಮೀಟರ್ ಆಗಿರುತ್ತದೆ, ಅಂದರೆ ಪ್ರತಿ ಸೆಕೆಂಡ್ ಗೆ ಸುಮಾರು 250 ಮೀಟರ್ ಚಲಿಸುತ್ತದೆ.

ಒಂದು ವಿಮಾನ ಒಂದು ಘಂಟೆ ವಿಮಾನದಲ್ಲಿ ಹಾರಾಟವನ್ನ ಮಾಡಿತು ಅಂದರೆ ಸುಮಾರು 24,000 ಸಾವಿರ ಲೀಟರ್ ಪೆಟ್ರೋಲ್ ಖರ್ಚಾಗುತ್ತದೆ. ಅಂದಾಜು ಮಾಹಿತಿಯ ಪ್ರಕಾರ ಒಂದು ವಿಮಾನ ಒಂದು ಘಂಟೆ ಹಾರಾಟವನ್ನ ಮಾಡಲು ಪ್ರತಿ ಕಿಲೋ ಮೀಟರ್ ಗೆ ಸುಮಾರು 2.6 ಲೀಟರ್ ಪೆಟ್ರೋಲ್ ಕುಡಿಯುತ್ತದೆ, ಅಂದರೆ ಪ್ರತಿ 384 ಮೀಟರ್ ಗೆ ಒಂದು ಲೀಟರ್ ಪೆಟ್ರೋಲ್ ಖರ್ಚು ಮಾಡುತ್ತದೆ ಒಂದು ವಿಮಾನ.

Join Nadunudi News WhatsApp Group