WhatsApp Not Working: ಇನ್ಮುಂದೆ ಈ 35 ಮೊಬೈಲ್ ಗಳಲ್ಲಿ ಕೆಲಸ ಮಾಡಲ್ಲ ವಾಟ್ಸಾಪ್, ಈಗಲೇ ಮೊಬೈಲ್ ಬದಲಾಯಿಸಿ.

ಇನ್ಮುಂದೆ ಈ 35 ಮೊಬೈಲ್ ಗಳಲ್ಲಿ ಕೆಲಸ ಮಾಡಲ್ಲ ವಾಟ್ಸಾಪ್

WhatsApp Not Working In These Smartphones: ಮೆಟಾ ಮಾಲೀಕತ್ವದ WhatsApp ಸದ್ಯ ವಿಶ್ವದೆಲ್ಲೆಡೆ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ ಎನ್ನಬಹುದು. ಮೊಬೈಲ್ ಬಳಸುವ ಪ್ರತಿಯೊಬ್ಬರೂ ಕೂಡ ವಾಟ್ಸಾಪ್ ಅನ್ನು ಬಳಸೆ ಬಳಸುತ್ತಾರೆ. ಇನ್ನು ವಾಟ್ಸಾಪ್ ಕೂಡ ತನ್ನ ಬಳಕೆದಾರರಿಗೆ ಹೆಚ್ಚಿನ ಫೀಚರ್ ಅನ್ನು ನೀಡುತ್ತಿದೆ. ಬಳಕೆದಾರರು ವಾಟ್ಸಾಪ್ ನ ಎಲ್ಲ ಫೀಚರ್ ಗಳ ಪ್ರಯೋಜನವನ್ನು ಪಡೆಯುತ್ತಿದ್ದಾರೆ.

ವಿಶ್ವದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಇನ್‌ ಸ್ಟಂಟ್ ಮೆಸೇಜಿಂಗ್ ಆಪ್ ವಾಟ್ಸ್ ಆಪ್ ಇದೀಗ ತನ್ನ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ ನೀಡಿದೆ. ಹೌದು, ಈ ಎಲ್ಲ ಆಯ್ದ ಸ್ಮಾರ್ಟ್ ಫೋನ್ ಗಳಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸುದನ್ನು ನಿಲ್ಲಿಸಲಿದೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.

WhatsApp Not Working In These Smartphones
Image Credit: Beebom

WhatsApp ಬಳಕೆದಾರರಿಗೆ ಬಳಕೆದಾರರಿಗೆ ಶಾಕಿಂಗ್ ನ್ಯೂಸ್
ಜನಪ್ರಿಯ WhatsApp ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯಗಳನ್ನು ನೀಡುತ್ತಲೇ ಇರುತ್ತದೆ. ಆದರೆ, ಸರಿಯಾದ ಹಾರ್ಡ್‌ ವೇರ್ ಬೆಂಬಲವಿಲ್ಲದೆ, ನಿಮ್ಮ ಫೋನ್‌ ನಲ್ಲಿ WhatsApp ಕಾರ್ಯನಿರ್ವಹಿಸುವುದಿಲ್ಲ. ಹೀಗಾಗಿ, ಹಳೆಯ ಓಎಸ್ ಹೊಂದಿರುವ ಆಂಡ್ರಾಯ್ಡ್, ಐಫೋನ್ ಮತ್ತು ವಿಂಡೋಸ್ ಫೋನ್‌ ಗಳಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸುವುದನ್ನು ಶೀಘ್ರದಲ್ಲೇ ನಿಲ್ಲಿಸಲಿದೆ.

ಈ ಮಹತ್ವದ ಬದಲಾವಣೆಯು ಉತ್ತಮ ಕಾರ್ಯಕ್ಷಮತೆ ಮತ್ತು ಸುರಕ್ಷತೆಗಾಗಿ WhatsApp ನ ನಿಯಮಿತ ನವೀಕರಣಗಳ ಭಾಗವಾಗಿದೆ. ಹಳೆಯ ಫೋನ್‌ ಗಳು ಹೊಸ ವೈಶಿಷ್ಟ್ಯಗಳು ಮತ್ತು ಭದ್ರತಾ ನವೀಕರಣಗಳನ್ನು ಬೆಂಬಲಿಸಲು ಅಗತ್ಯವಾದ ಹಾರ್ಡ್‌ ವೇರ್ ಸಾಮರ್ಥ್ಯಗಳನ್ನು ಹೊಂದಿರುವುದಿಲ್ಲ. ಅಪ್ಲಿಕೇಶನ್ Android 5.0 ಅಥವಾ ನಂತರದ ಮತ್ತು iOS 12 ಅಥವಾ ನಂತರದ ಮೊಬೈಲ್‌ ಗಳನ್ನು ಮಾತ್ರ ಬೆಂಬಲಿಸುತ್ತದೆ. ಹೊಸ ಆಂಡ್ರಾಯ್ಡ್ ಆವೃತ್ತಿಯ ನವೀಕರಣ ಲಭ್ಯವಿಲ್ಲದಿದ್ದರೆ ಬಳಕೆದಾರರು ಹೊಸ ಸ್ಮಾರ್ಟ್‌ಫೋನ್ ಖರೀದಿಸಬೇಕಾಗುತ್ತದೆ.

WhatsApp Not Working
Image Credit: Informalnewz

ಇನ್ಮುಂದೆ ಈ 35 ಮೊಬೈಲ್ ಗಳಲ್ಲಿ ಕೆಲಸ ಮಾಡಲ್ಲ ವಾಟ್ಸಾಪ್
ಇನ್ನು Apple, Samsung, Moto, Sony, Huawei ಮತ್ತು LG ಯಂತಹ ಉನ್ನತ ಬ್ರಾಂಡ್‌ ಗಳ 35 ಹಳೆಯ ಸ್ಮಾರ್ಟ್‌ ಫೋನ್‌ ಗಳಲ್ಲಿ WhatsApp ಶೀಘ್ರದಲ್ಲೇ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಿದೆ. CanalTech ವರದಿಯ ಪ್ರಕಾರ, ಈ ಮೊಬೈಲ್‌ ಗಳು ಇನ್ನು ಮುಂದೆ ಅಪ್ಲಿಕೇಶನ್‌ ಗಾಗಿ ನವೀಕರಣಗಳು ಅಥವಾ ಭದ್ರತಾ ಪ್ಯಾಚ್‌ ಗಳನ್ನು ಸ್ವೀಕರಿಸುವುದಿಲ್ಲ. ಇದರರ್ಥ ಕೆಲವು ಬಳಕೆದಾರರು ಸಂದೇಶ ಸೇವೆಯನ್ನು ಬಳಸುವುದನ್ನು ಮುಂದುವರಿಸಲು ತಮ್ಮ ಸಾಧನಗಳನ್ನು ಅಪ್‌ ಗ್ರೇಡ್ ಮಾಡಬೇಕಾಗಬಹುದು.

Join Nadunudi News WhatsApp Group

WhatsApp Latest Update
Image Credit: Original Source

Join Nadunudi News WhatsApp Group