WhatsApp Ban: ಭಾರತದಲ್ಲಿ ಸ್ಥಗಿತವಾಗಲಿದೆ ವಾಟ್ಸಾಪ್, ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ

ಭಾರತದಲ್ಲಿ ಸ್ಥಗಿತಗೊಳ್ಳುತ್ತ ವಾಟ್ಸಾಪ್....! ಸಚಿವರು ಹೇಳುವುದೇನು...?

Ashwin Vaishnav About WhatsApp Ban: ಪ್ರಸ್ತುತ ಚಾಟಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸಾಪ್ ಎಷ್ಟು ಜನಪ್ರಿಯತೆ ಪಡೆದಿದೆ ಎನ್ನುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ದಿನದಿಂದ ದಿನಕ್ಕೆ ವಾಟ್ಸಾಪ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನಬಹುದು. ಇತ್ತೀಚಿಗೆ ವಾಟ್ಸಾಪ್ ಕುರಿತಾಗಿ ಶಾಕಿಂಗ್ ಹೇಳಿಕೆಯೊಂದು ವೈರಲ್ ಆಗಿತ್ತು.

ಹೌದು, ದೇಶದಲ್ಲಿ WhatsApp ಸ್ಥಗಿತಗೊಳ್ಳಲಿದೆ ಎನ್ನುವ ಬಗ್ಗೆ ಸುದ್ದಿಗಳು ಕೇಳಿಬಂದಿದ್ದವು. ಈ ಸುದ್ದಿ ವಾಟ್ಸಾಪ್ ಬಳಕೆದಾರರಿಗೆ ಬೇಸರ ನೀಡಿತ್ತು ಎನ್ನಬಹುದು. ಸದ್ಯ IT ಸಚಿವ Ashwin Vaishnav ದೇಶದಲ್ಲಿ ವಾಟ್ಸಾಪ್ ಸ್ಥಗಿತಗೊಳ್ಳುವುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದಾರೆ. ದೇಶದಲ್ಲಿ ವಾಟ್ಸಾಪ್ ರದ್ದತಿಯ ಬಗ್ಗೆ ಸಚಿವರು ಹೇಳುವುದೇನು…? ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

whatsapp will stop in india
Image Credit: Original Source

ಭಾರತದಲ್ಲಿ ಸ್ಥಗಿತಗೊಳ್ಳುತ್ತ ವಾಟ್ಸಾಪ್….!
ವಾಟ್ಸಾಪ್ ಕುರಿತು ಕಾಂಗ್ರೆಸ್ ಸಂಸದ ವಿವೇಕ್ ಟಂಖಾ ಅವರ ಪ್ರಶ್ನೆಗೆ ದಾಸ್ ಲಿಖಿತ ಉತ್ತರ ನೀಡಿದ್ದಾರೆ ಎಂದು ಪಿಟಿಐ ವರದಿ ತಿಳಿಸಿದೆ. ಮಾಹಿತಿ ತಂತ್ರಜ್ಞಾನ ಕಾಯಿದೆ 2000ರ ಸೆಕ್ಷನ್ 69ಎ ಅಡಿಯಲ್ಲಿ ಬಳಕೆದಾರರ ವಿವರಗಳನ್ನು ಹಂಚಿಕೊಳ್ಳಲು ಕೇಂದ್ರ ಸರ್ಕಾರದ ನಿರ್ದೇಶನದ ಹಿನ್ನೆಲೆಯಲ್ಲಿ ಭಾರತದಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸಲು WhatsApp ಯೋಚಿಸುತ್ತಿದೆಯೇ…:? ಎಂದು ಟಂಖಾ ಪ್ರಶ್ನಿಸಿದ್ದಾರೆ. ದೇಶದ ಸಾರ್ವಭೌಮತೆ ಮತ್ತು ಸಮಗ್ರತೆಯ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ, ವಾಟ್ಸ್ ಆಪ್ ಗೆ ಮಾಹಿತಿ ಹಂಚಿಕೊಳ್ಳುವಂತೆ ಸೂಚಿಸಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಆಶ್ಚಿನ್ ಹೇಳಿದ್ದಾರೆ.

ವಾಟ್ಸಾಪ್ ಸ್ಥಗಿತಗೊಳ್ಳುವ ಬಗ್ಗೆ ಸಚಿವರು ಹೇಳುವುದೇನು…?
ಹೈಕೋರ್ಟ್‌ ನ ವಿಚಾರಣೆಯ ಸಂದರ್ಭದಲ್ಲಿ, ಸಂದೇಶಗಳ ಎನ್‌ಕ್ರಿಪ್ಶನ್ ಅನ್ನು ಬಹಿರಂಗಪಡಿಸಲು ಕೇಂದ್ರ ಸರ್ಕಾರವು ಒತ್ತಾಯಿಸಿದರೆ, ನಾವು ಭಾರತದಲ್ಲಿ ನಮ್ಮ (WhatsApp) ಸೇವೆಯನ್ನು ಸ್ಥಗಿತಗೊಳಿಸುತ್ತೇವೆ ಎಂದು ಹೈಕೋರ್ಟ್ ನ ವಿಚ್ರ್ಣೇಯ ವೇಳೆ ತಿಳಿಸಿತ್ತು. ಸಾಮಾಜಿಕ ಜಾಲತಾಣ ವಾಟ್ಸಾಪ್ ಮತ್ತು ಅದರ ಪೋಷಕ ಸಂಸ್ಥೆ ಮೆಟಾ, ಭಾರತದಲ್ಲಿ ತನ್ನ ಸೇವೆಗಳನ್ನು ಸ್ಥಗಿತಗೊಳಿಸುವ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ ಎಂದು ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

whatsapp close in india
Image Cred: Original Source

Join Nadunudi News WhatsApp Group

Join Nadunudi News WhatsApp Group