WhatsApp New: ಇನ್ಮುಂದೆ ವಾಟ್ಸಾಪ್ ಬಳಸಲು ಇಂಟರ್ನೆಟ್ ಅಗತ್ಯ ಇಲ್ಲ, ಬಂದಿದೆ ಹೊಸ ಫೀಚರ್

ಇನ್ನುಮುಂದೆ ಇಂಟರ್ನೆಟ್ ಇಲ್ಲದಿದ್ರೂ ವರ್ಕ್ ಆಗುತ್ತೆ ವಾಟ್ಸಾಪ್

WhatsApp Using Without Internet: ಸದ್ಯ WhatsApp ಎಷ್ಟು ಜನಪ್ರಿಯತೆ ಪಡೆದಿದೆ ಎನ್ನುವ ಬಗ್ಗೆ ಹೆಚ್ಚು ಹೇಳುವ ಅಗತ್ಯ ಇಲ್ಲ ಎನ್ನಬಹುದು.  ಯಾವುದೇ ಫೋಟೋ ಸೆಂಡ್ ಮಾಡಲು, ಸಂದೇಶ ಕಳುಹಿಸಲು ಈಗ ಎಲ್ಲರೂ ವಾಟ್ಸಾಪ್ ಬಳಸುವುದು ಸಹಜವಾಗಿದೆ. ವಾಟ್ಸಾಪ್ ನೋಡದೆ ಎಲ್ಲರ ದೈನಂದಿನ ಜೀವನ ಶುರು ಆಗುವುದೇ ಇಲ್ಲ ಎಂದರೆ ತಪ್ಪಾಗಲಾರದು.

ವಾಟ್ಸಾಪ್ ನಲ್ಲಿ ಈಗ ಹಲವಾರು ಅಪ್ಡೇಟ್ ಗಳು ಬಂದಿರುದರಿಂದ ವಾಟ್ಸಾಪ್ ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.  ಇನ್ನು ಇಂಟರ್ನೆಟ್ ಇಲ್ಲದೆ ಮೊಬೈಲ್ ಅಥವಾ ಕಂಪ್ಯೂಟರ್ ಅನ್ನು ಬಳಕೆ ಮಾಡುವುದು ಅಸಾಧ್ಯ. ಇದೀಗ ನಾವು ಈ ಲೇಖನದಲ್ಲಿ ಇಂಟರ್ ನೆಟ್ ಇಲ್ಲದೆ ವಾಟ್ಸಾಪ್ ಬಳಕೆಯ ಬಗೆ ಮಾಹಿತಿ ಹೇಳಲಿದ್ದೇವೆ.

WhatsApp Using Without Internet
Image Credit: Business Today

ಇನ್ನುಮುಂದೆ ಇಂಟರ್ನೆಟ್ ಇಲ್ಲದಿದ್ರೂ ವರ್ಕ್ ಆಗುತ್ತೆ ವಾಟ್ಸಾಪ್
ಯಾವುದೇ ಸಂದೇಶ ಅಥವಾ ಯಾವುದೇ ಫೋಟೋ ಕಳುಹಿಸಬೇಕಾದರು ಕೂಡ ನಮಗೆ ಇಂಟರ್ನೆಟ್ ವ್ಯವಸ್ಥೆ ಇರಲೇ ಬೇಕು. ಕರೆ ಮಾಡುವುದನ್ನು ಬಿಟ್ಟರೆ ಇಂಟರ್ನೆಟ್ ಇಲ್ಲದೆ ಏನನ್ನು ಮಾಡಲು ಸಾಧ್ಯವಿಲ್ಲ.ಆದರೆ ಇಂಟರ್ನೆಟ್ ನ ಸಹಾಯ ಇಲ್ಲದೆ ಇಂದಿನ ದಿನಗಳಲ್ಲಿ ವಾಟ್ಸಾಪ್ ಅಪ್ಲಿಕೇಶನ್ ಅನ್ನು ಬಳಕೆ ಮಾಡಬಹುದು ಎಂದರೆ ನೀವು ನಂಬುತ್ತೀರಾ…? ಹೌದು, ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ನ ಸೌಲಭ್ಯ ಇಲ್ಲದೆಯೂ ಕೂಡ ಎಲ್ಲರೂ ವಾಟ್ಸಾಪ್ ನಲ್ಲಿ ಫೇಲ್ ಗಳನ್ನೂ ಕಳುಹಿಸಬಹುದು.

ಇಂಟರ್ನೆಟ್ ಇಲ್ಲದಿದ್ದರೂ ಹತ್ತಿರದ WhatsApp ಖಾತೆಗೆ ಫೈಲ್ ಹಂಚಿಕೆ ವೈಶಿಷ್ಟ್ಯದ ಸಾಧ್ಯತೆಯನ್ನು WhatsApp ಪರಿಚಯಿಸುತ್ತಿದೆ. ಈ ವೈಶಿಷ್ಟ್ಯವು ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ಲಭ್ಯವಿರುತ್ತದೆ. ಹೊಸ ವೈಶಿಷ್ಟ್ಯವು ಪ್ರಸ್ತುತ ಬೀಟಾ ಆವೃತ್ತಿಯಲ್ಲಿ ಲಭ್ಯವಿದೆ. ಈ ವೈಶಿಷ್ಟ್ಯವು ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ. ವಾಟ್ಸಾಪ್ ಇಂಟರ್ನೆಟ್ ಸಂಪರ್ಕ ಇಲ್ಲದೆಯೂ ಕೂಡ ಕಾರ್ಯನಿರ್ವಹಿಸುವುದು ಹೇಗೆ ಅನ್ನುವುದರ ಬಗ್ಗೆ ತಿಳಿಯೋಣ.

WhatsApp Latest News
Image Credit: linkedin

ಶೇರ್ ಇಟ್ ಹಾಗು ಬ್ಲೂಟೂತ್ ಗೆ ಹೇಳಿ ಗುಡ್ ಬೈ
ಹೊಸ ವೈಶಿಷ್ಟ್ಯವು ಉತ್ತಮ ಗುಣಮಟ್ಟದ ಫೋಟೋಗಳು, ವೀಡಿಯೊಗಳು ಮತ್ತು ಡಾಕ್ಯುಮೆಂಟ್‌ ಗಳನ್ನು ಇಂಟರ್ನೆಟ್ ಇಲ್ಲದೆ ಪಕ್ಕದ WhatsApp ಖಾತೆಗೆ ಹಂಚಿಕೊಳ್ಳಲು ಸುಲಭಗೊಳಿಸುತ್ತದೆ. ಅಷ್ಟೇ ಅಲ್ಲ, ಫೋಟೋಗಳು ಮತ್ತು ವೀಡಿಯೊಗಳನ್ನು ಅದೇ ಗುಣಮಟ್ಟದಲ್ಲಿ ಹಂಚಿಕೊಳ್ಳಲಾಗುತ್ತದೆ. ಅಂತಹ ದೊಡ್ಡ ಗಾತ್ರದ ಫೈಲ್‌ ಗಳನ್ನು ಇಂಟರ್ನೆಟ್ ಇಲ್ಲದೆ ಸುಲಭವಾಗಿ ಹಂಚಿಕೊಳ್ಳಬಹುದು. ಐಫೋನ್‌ ನಲ್ಲಿರುವ ಏರ್‌ ಡ್ರಾಪ್ ವೈಶಿಷ್ಟ್ಯದಂತೆಯೇ ಹೊಸ ವೈಶಿಷ್ಟ್ಯವನ್ನು ವಾಟ್ಸಾಪ್ ನೀಡುತ್ತಿದೆ.

Join Nadunudi News WhatsApp Group

ಈ ವೈಶಿಷ್ಟ್ಯದೊಂದಿಗೆ ಇಂಟರ್ನೆಟ್‌ ಇಲ್ಲದೆಯೇ ಫೈಲ್‌ ಗಳನ್ನು ಹಂಚಿಕೊಳ್ಳಲು ಕೆಲವು ಮಾರ್ಗಗಳಿವೆ. ಬಹು ಮುಖ್ಯವಾಗಿ ಇದು ನಿಮ್ಮ ಹತ್ತಿರದ WhatsApp ಖಾತೆಗಳಿಗೆ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಕ್ಯೂರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ, ಹಂಚಿಕೊಳ್ಳಬೇಕಾದ ಫೈಲ್ ಅನ್ನು ಆಯ್ಕೆ ಮಾಡಿ ಮತ್ತು ಅದನ್ನು ಕಳುಹಿಸಬಹುದು. ಈ ಹಿಂದೆ, ಫೈಲ್‌ ಗಳನ್ನು ಹಂಚಿಕೊಳ್ಳಲು ಶೇರ್ ಇಟ್ ಹಾಗು ಬ್ಲೂಟೂತ್ ಅನ್ನು ಬಳಸಲಾಗುತ್ತಿತ್ತು. ಇದರ ಅಭಿವೃದ್ಧಿ ಹೊಂದಿದ ಆವೃತ್ತಿಯನ್ನು ಈಗ WhatsApp ನೀಡುತ್ತಿದೆ. ಇನ್ನುಮುಂದೆ ವಾಟ್ಸಾಪ್ ಮೂಲಕವೇ ನಿಮ್ಮ ಹತ್ತಿರದ ವಾಟ್ಸಾಪ್ ಗೆ ಫೇಲ್ ಗಳನು ಶೇರ್ ಮಾಡಿಕೊಳ್ಳಬಹುದು.

WhatsApp New Updates
Image Credit: Timesofindia

Join Nadunudi News WhatsApp Group