Loan Scheme: ರಾಜ್ಯದ ರೈತರಿಗೆ ಸಿಗಲಿದೆ ಬಡ್ಡಿ ಇಲ್ಲದೆ 5 ಲಕ್ಷ ಸಾಲ, ಬಡ್ಡಿ ರಹಿತ ಸಾಲಕ್ಕೆ ಹೀಗೆ ಅರ್ಜಿ ಸಲ್ಲಿಸಿ

ರಾಜ್ಯದಲ್ಲಿ ರೈತರಿಗಾಗಿ ಹೊಸ ಸಾಲ ಸೌಲಭ್ಯ ಯೋಜನೆ ಜಾರಿ, ಬಹಳ ಕಡಿಮೆ ಬಡ್ಡಿ ದರಕ್ಕೆ ಈ ಯೋಜನೆಯಡಿ ಸಾಲ ಪಡೆಯಿರಿ

Farmers Loan In Karnataka: ರಾಜ್ಯ ಸರ್ಕಾರ ರೈತರಿಗಾಗಿ ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ರೈತರು ಆರ್ಥಿಕವಾಗಿ ಸ್ವಾಲಂಬಿಯಾಗಲು ಹಾಗು ಅವರು ತಮ್ಮ ವ್ಯವಸಾಯವನ್ನು ಮಾಡಲು ಅನುಕೂಲವಾಗಲು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ.

ಅದರಲ್ಲೂ ಪಶುಸಂಗೋಪನೆ, ಹೈನುಗಾರಿಕೆ ಹೀಗೆ ಹಲವಾರು ಉಪಕಸುಬು ಮಾಡುವ ರೈತರಿಗಾಗಿ ಸಾಲ ಸೌಲಭ್ಯ ನೀಡುವ ಕುರಿತು ಹೊಸ ಯೋಜನೆಯನ್ನು ಸಿದ್ದಪಡಿಸಲಾಗಿದೆ. ಪಶುಸಂಗೋಪನೆ, ಹೈನುಗಾರಿಕೆ ಮಾಡುವ ಕಸುಬುದಾರರು ಇನ್ನುಮುಂದೆ 5 ಲಕ್ಷದ ವರೆಗೆ ಸಾಲ ಸೌಲಭ್ಯ ಪಡೆಯಬಹುದು.

Farmers Loan In Karnataka
Image Credit: Theprint

ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ವ್ಯವಸ್ಥೆ

ಪಶುಸಂಗೋಪನೆ, ಮೀನುಗಾರಿಕೆ ಮತ್ತು ಹೈನುಗಾರಿಕೆ ಮಾಡುವ ಕಸಬುದಾರರಿಗೆ ಈ ಯೋಜನೆ ಬಹಳ ಸಹಾಯಕ ಆಗಲಿದೆ. ಕಿಸಾನ್ ಕಾರ್ಡ್ ಹೊಂದಿರುವವರು ಕೂಡ ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಬಹಳ ಕಡಿಮೆ ಬಡ್ಡಿದರದಲ್ಲಿ ಮೂರರಿಂದ ಐದು ಲಕ್ಷದವರೆಗೆ ಸಾಲ ಸೌಲಭ್ಯವನ್ನು ಈ ಯೋಜನೆಯಲ್ಲಿ ಪಡೆಯಬಹುದಾಗಿದೆ.

ಕೆಸಿಸಿ ಇದ್ದರೆ ಎಮ್ಮೆ ಸಾಕಾಣಿಕೆ, ಪಶು ಸಾಕಾಣಿಕೆ, ಕುರಿ, ಕೋಳಿ, ಮೇಕೆ ಹಾಗು ಇನ್ನಿತರ ಸಾಕಾಣಿಕೆಗೆ ಮೂರೂ ಲಕ್ಷ ರೂಪಾಯಿಗಳ ಸಾಲ ಸೌಲಭ್ಯ ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ ಶೇಕಡಾ 3 ರಷ್ಟು ಬಡ್ಡಿದರವನ್ನು ರೈತರು ಪಾವತಿಸಿದರೆ, ಶೇಕಡಾ 04 ರಷ್ಟು ಬಡ್ಡಿಯನ್ನು ಸರಕಾರ ಬ್ಯಾಂಕ್ ಗಳಿಗೆ ಪಾವತಿ ಮಾಡುತ್ತದೆ. ಶೇಕಡಾ 07 ರಷ್ಟು ಬಡ್ಡಿದರದಲ್ಲಿ ಕೇವಲ 3 ರಷ್ಟು ಮಾತ್ರ ರೈತರು ಪಾವತಿಸಬೇಕಾಗುತ್ತದೆ.

Join Nadunudi News WhatsApp Group

Pashu Kisan Credit Card
Image Credit: pmfby

ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ನಲ್ಲಿ ಎಷ್ಟು ಸಾಲ ಸಿಗಲಿದೆ?

ಈ ಯೋಜನೆಯಡಿ ಹಸು ಸಾಕಾಣಿಕೆಗೆ 40 ,783 ರೂಪಾಯಿ ಸಿಗಲಿದೆ, ಎಮ್ಮೆ ಸಾಕಾಣಿಕೆಗೆ 60,249 ಸಿಗಲಿದೆ, ಮೊಟ್ಟೆ ಇಡುವ ಕೋಳಿಗೆ, ಪ್ರತಿ ಕೋಳಿಗೆ 720 ರೂಪಾಯಿ ಸಿಗಲಿದೆ, ಕುರಿ ಅಥವಾ ಮೇಕೆ ಸಾಕಾಣಿಕೆಗೆ ಪ್ರತಿ ಮೇಕೆ ಅಥವಾ ಕುರಿಗೆ 4063 ರೂಪಾಯಿ ಹಣವನ್ನು ಸಾಲದ ರೂಪದಲ್ಲಿ ನೀಡಲಾಗುವುದು. ವಿಶೇಷವೇನೆಂದರೆ 1.6 ಲಕ್ಷ ರೂಪಾಯಿಗಳ ವರೆಗೆ ಯಾವುದೇ ಗ್ಯಾರೆಂಟಿ ನೀಡುವ ಅವಶ್ಯಕತೆ ಇರುವುದಿಲ್ಲ.

ಯಾವ ಗ್ಯಾರೆಂಟಿಯು ಇಲ್ಲದೇ ಕಿಸಾನ್ ಕಾರ್ಡ್ ಉಪಯೋಗಿಸಿ ಸಾಲ ಪಡೆಯಬಹುದಾಗಿದೆ. ಈ ಯೋಜನೆಯ ಸಂಪೂರ್ಣ ಮಾಹಿತಿ ಪಡೆಯಲು ಕಿಸಾನ್ ಕಾರ್ಡ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ಹತ್ತಿರದ ಬ್ಯಾಂಕ್ ನಲ್ಲಿ ವಿಚಾರಿಸಿ ಸಂಪೂರ್ಣ ಮಾಹಿತಿ ಪಡೆಯಬಹುದು.

Join Nadunudi News WhatsApp Group