Yash In Salaar: ಸಾಲಾರ್ ಚಿತ್ರದಲ್ಲಿ ನಟ ಯಶ್, ಟ್ರೈಲರ್ ನಲ್ಲಿ ನಟ ಯಶ್ ಅವರನ್ನ ಗುರುತಿಸಿದ ಅಭಿಮಾನಿಗಳು

ಸಾಲಾರ್ ಸಿನಿಮಾದ ಟ್ರೈಲರ್ ನಲ್ಲಿ ನಟ ಯಶ್ ಅವರನ್ನು ನೋಡಿದ ಪ್ರೇಕ್ಷಕರು, ಸಾಲಾರ್ ಚಿತ್ರದ ಮೇಲೆ ಇನ್ನಷ್ಟು ನಿರೀಕ್ಷೆ

Yash In Prabhas Salaar Movie: ಸಾಲಾರ್ (Salaar) ಸಿನಿಮಾ ಪ್ರೇಕ್ಷಕರಲ್ಲಿ ಹಲವು ಗೊಂದಲ ಹಾಗು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಈಗಾಗಲೇ ಸಾಲಾರ್ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಈ ಟ್ರೈಲರ್ ನೋಡಿದ ಪ್ರೇಕ್ಷಕರು ಹಲವು ರೀತಿಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಈಗಾಗಲೇ ಈ ಸಿನಿಮಾಕ್ಕೂ KGF ಸಿನಿಮಾಕ್ಕೂ ಸಂಬಂಧ ಇದೆ ಎಂದು ಚರ್ಚೆ ಮೂಡಿತು ಆದರೆ ಈಗ ಸಾಲಾರ್ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಪ್ರಶಾಂತ್ ನೀಲ್ (Prashant Neel) ನಿರ್ದೇಶನದ ಮತ್ತು ಪ್ರಭಾಸ್ ನಾಯಕನಾಗಿ ನಟಿಸಿರುವ ಸಲಾರ್ ಭಾಗ 1 ನಿರೀಕ್ಷೆ ಹೆಚ್ಚಿಸಿದೆ.ಈ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಜಗಪತಿ ಬಾಬು ಮುಖ್ಯ ಪಾತ್ರಧಾರಿಯಾಗಿರುವ ಈ ಚಿತ್ರ ಡಿಸೆಂಬರ್ 22 ರಂದು ಬಿಡುಗಡೆಯಾಗಲಿದೆ.

Yash In Prabhas Salaar Movie
Image Credit: News 18

ಸಾಲಾರ್ ಸಿನಿಮಾದ ಟ್ರೈಲರ್ ನಲ್ಲಿ ನಟ ಯಶ್

ಸಾಲಾರ್ ಸಿನಿಮಾದ ಟ್ರೈಲರ್‌ನಲ್ಲಿನ ಒಂದು ದೃಶ್ಯದಲ್ಲಿ, ಒಬ್ಬ ವ್ಯಕ್ತಿಯನ್ನು ಬ್ಯಾಕ್ ಶಾಟ್‌ನಿಂದ ತೋರಿಸಲಾಗಿದೆ. ಆ ಕಟೌಟ್ ನೋಡಿದರೆ ಯಶ್ ಅವರಂತೆ ಕಾಣುತ್ತಿದೆ. ಈ ಬ್ಯಾಕ್ ಶಾಟ್ ಅನ್ನು ಕೆಜಿಎಫ್ ನಲ್ಲಿ ಯಶ್ ಅವರ ಬ್ಯಾಕ್ ಶಾಟ್ ಗೆ ಹೋಲಿಸಿ ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ.

ಈ ಪೋಸ್ಟ್ ಗಳನ್ನು ನೋಡಿದ ಚಿತ್ರಪ್ರೇಮಿಗಳು ಯಶ್ ನಿಜವಾಗಿಯೂ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರಾ? ಎಂದು ಪ್ರಶ್ನಿಸುತ್ತಿದ್ದಾರೆ.ಯಶ್ ಸಲಾರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕಾದರೆ ರಾಕಿ ಭಾಯ್ ಆಗಿ ಕಾಣಿಸಿಕೊಳ್ಳುತ್ತಾರಾ? ಅಥವಾ ಯಶ್ ಸಲಾರ್ ವರ್ಲ್ಡ್ ಗೆ ಸಂಬಂಧಿಸಿದ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

Join Nadunudi News WhatsApp Group

Rocking Star Yash And Actor Prabhas
Image Credit: News 18

ಕೆಜಿಎಫ್ ಮತ್ತು ಸಲಾರ್ ನಡುವೆ ಯಾವುದೇ ಸಂಬಂಧವಿಲ್ಲ

ಈ ಹಿಂದೆ ಅಭಿಮಾನಿಗಳು ಕೆಜಿಎಫ್ ಮತ್ತು ಸಲಾರ್ ಸಿನಿಮಾ ನಡುವೆ ಸಂಬಂಧ ಇದೆ ಎಂದು ಹೇಳಿದ್ದಾಗ ಸಾಲಾರ್ ಸಿನಿಮಾದ ನಿರ್ದೇಶಕ ಪ್ರಶಾಂತ್ ನೀಲ್ ಅವರು ಕೆಜಿಎಫ್ ಮತ್ತು ಸಲಾರ್ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು. ಆದರೆ ಸಲಾರ್ ಚಿತ್ರದಲ್ಲಿ ಯಶ್ ಇಲ್ಲ ಎಂದು ಹೇಳಲಿಲ್ಲ. ಪ್ರಸ್ತುತ ಈ ಅನುಮಾನಗಳೇ ಪ್ರಶ್ನೆಗಳಾಗಿವೆ. ಡಿಸೆಂಬರ್ 22 ಕ್ಕೆ ಸಾಲಾರ್ ಸಿನಿಮಾ ನೋಡಿದ ಮೇಲೆ ಪ್ರೇಕ್ಷಕರ ಎಲ್ಲಾ ಪ್ರಶ್ನೆಗಳಿಗೂ ಉತ್ತರ ದೊರೆಯುತ್ತದೆ.

Join Nadunudi News WhatsApp Group