Actor Yash Birthday: ಜನವರಿ 8 ಕ್ಕೆ ಯಶ್ ಅಭಿಮಾನಿಗಳಿಗೆ ಬರಲಿದೆ ಬಂಪರ್ ಗುಡ್ ನ್ಯೂಸ್, ಹುಟ್ಟು ಹಬ್ಬದ ಗಿಫ್ಟ್.

Actor Yash Birthday: ಕನ್ನಡದ ಸ್ಟಾರ್ ನಟ ಯಶ್ ( Actor Yash) ಕೋಟ್ಯಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ನಟ ಯಶ್ ಕನ್ನಡ ಚಿತ್ರರಂಗದ ಹೆಮ್ಮೆಯ ನಟ. ಯಶ್ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಚಿತ್ರರಂಗದಲ್ಲಿ ಹೊಸ ಹೊಸ ಛಾಪು ಮೂಡಿಸಿದ್ದಾರೆ. ಇದೀಗ ನಟ ಯಶ್ ತಮ್ಮ ಹುಟ್ಟು ಹಬ್ಬಕ್ಕೆ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡುತ್ತಿದ್ದಾರೆ ಎಂಬ ವಿಚಾರ ಹೊರ ಬಿದ್ದಿದೆ.

Good news for Yash fans on January 8
Image Credit: mensxp

ನಟ ಯಶ್ ಅವರ ಹೊಸ ಸಿನಿಮಾ
ನಟ ಯಶ್ ಕೆಜಿಎಫ್ ನಂತರ ಯಾವುದೇ ಸಿನಿಮಾ ಮಾಡಿಲ್ಲ. ಕೆಜಿಎಫ್ 2 (Kgf 2) ಸಿನಿಮಾ ತೆರೆ ಕಂಡು ಒಂದು ವರ್ಷಾವಾದರೂ ನಟ ಯಶ್ ಮುಂದಿನ ಸಿನಿಮಾ ಬಗ್ಗೆ ಯಾವ ರೀತಿಯ ಸುಳಿವು ಕೂಡ ನೀಡಿಲ್ಲ.

ಅಭಿಮಾನಿಗಳು ನಟ ಯಶ್ ಅವರ ಮುಂದಿನ ಸಿನಿಮಾದ ಘೋಷಣೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ. ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವೇ ನ್ಯಾಷನಲ್ ಸ್ಟಾರ್ ಯಶ್ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲದಲ್ಲಿದೆ.

Yash will announce a new film on his birthday
Image Credit: hindustantimes

ಕೆಜಿಎಫ್ 2 ಸೂಪರ್ ಸಕ್ಸಸ್ ನಂತರ ಯಶ್ 19 ನೇ ಸಿನಿಮಾದ ಬಗ್ಗೆ ಸುದ್ದಿಗಳು ಹರಿದಾಡುತ್ತಿದೆ. ಕೆವಿಎನ್ ಪ್ರೊಡಕ್ಷನ್ ಹೌಸ್ ಯಶ್ ಮುಂಡನ ಸಿನಿಮಾವನ್ನು ನಿರ್ಮಾಣ ಮಾಡಲಿದೆ ಎಂಬ ಸುದ್ದಿ ಬಹುದಿನಗಳಿಂದ ಹರಿದಾಡುತ್ತಿದೆ. ಇದರ ಜೊತೆಗೆ ನರ್ತನ್ ನಿರ್ದೇಶನ ಮಾಡಲಿದ್ದಾರೆ ಎಂಬ ಮಾತು ಕೂಡ ಇದೆ. ಈ ವಿಚಾರಕ್ಕೆಲ್ಲ ನಟ ಯಶ್ ಅವರೇ ಸ್ಪಷ್ಟನೆ ನೀಡಬೇಕಿದೆ.

ಯಶ್ ಹುಟ್ಟು ಹಬ್ಬದ ದಿನ ಅಭಿಮಾನಿಗಳಿಗೆ ಕಾದಿದೆ ಸರ್ಪ್ರೈಸ್
ನಟ ಯಶ್ ಕನ್ನಡ ಸ್ಟಾರ್ ನಟರಲ್ಲಿ ಒಬ್ಬರು. ಚಿತ್ರರಂಗದಲ್ಲಿ ಒಂದೊಂದೇ ಸಿನಿಮಾಗಳನ್ನು ಮಾಡುತ್ತಾ ಸಕ್ಸಸ್ ಕಂಡಿದ್ದರು. ಚಿತ್ರರಂಗದಲ್ಲಿ ಯಾವುದೇ ರೀತಿಯ ವಿವಾದಕ್ಕೊಳಗಾಗದೆ ತಮ್ಮ ವಯಕ್ತಿಕ ಜೀವನದಲ್ಲಿಯೂ ಹಾಗೆ ಇದ್ದಾರೆ.

Join Nadunudi News WhatsApp Group

Actor Yash came forward to talk about the new film on his birthday
Image Credit: odishatv

ನಟ ಯಶ್ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಕೆಜಿಎಫ್ ಯಶಸ್ಸಿನ ನಂತರ ಯಶ್ ಮುಂದಿನ ಸಿನಿಮಾದ ಬಗ್ಗೆ ಎಲ್ಲೂ ಕೂಡ ಹೇಳಿಕೊಳ್ಳಲಿಲ್ಲ. ಆದರೆ ಜನವರಿ 8 ರಂದು ಯಶ್ ಅವರ ಹುಟ್ಟು ಹಬ್ಬ ಇರುವುದರಿಂದ ತಮ್ಮ ಮುಂದಿನ ಸಿನಿಮಾ ಬಗ್ಗೆ ಘೋಷಣೆ ಮಾಡುತ್ತಾರೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

 

Join Nadunudi News WhatsApp Group