Yellow Board: ಯಲ್ಲೋ ಬೋರ್ಡ್ ವಾಹನ ಹೊಂದಿರುವವರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್, ನಿಟ್ಟುಸಿರು ಬಿಟ್ಟ ಜನರು.

ಯಲ್ಲೋ ಬೋರ್ಡ್ ವಾಹನ ಇದ್ದವರ BPL ರೇಷನ್ ಕಾರ್ಡ್ ರದ್ದಾಗುವ ಸರ್ಕಾರದ ಸ್ಪಷ್ಟನೆ.

Yellow Board Vehicle Holders: ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ಸದ್ಯ ಹಲವು ಯೋಜನೆಯನ್ನ ಜಾರಿಗೆ ತರುವ ಕೆಲಸವನ್ನ ಮಾಡುತ್ತಿದೆ. ಚುನಾವಣೆಯ ಸಮಯದಲ್ಲಿ ಜನರಿಗೆ ಇದ್ದು ಭರವಸೆಯನ್ನ ನೀಡಿದ ಕಾಂಗ್ರೆಸ್ ಸರ್ಕಾರ ಕೊಟ್ಟ ಭರವಸೆಯನ್ನ ಉಳಿಸಿಕೊಳ್ಳುವ ಕೆಲಸವನ್ನ ಮಾಡುತ್ತಿದ್ದು ಸದ್ಯ ಅದಕ್ಕಾಗಿ ಸಾಕಷ್ಟು ಹಣವನ್ನ ಖರ್ಚು ಮಾಡುತ್ತಿದೆ ಎಂದು ಹೇಳಬಹುದು.

ಇದೆ ಸಮಯದಲ್ಲಿ BPL ಕಾರ್ಡ್ ಹೊಂದಿರುವ ಜನರಿಗೆ ಸಾಕಷ್ಟು ಹೊಸ ಹೊಸ ನಿಯಮವನ್ನ ಜಾರಿಗೆ ತಂದಿರುವ ಸರ್ಕಾರ ಈಗ ಇನ್ನೊಂದು ಹೊಸ ನಿಯಮವನ್ನ ಜಾರಿಗೆ ತರುವುದರ ಮೂಲಕ ಜನರ ಸಂತಕ್ಕೆ ಕಾರಣವಾಗಿದೆ.

The government clarified about the banning of ration card of those who have yellow board vehicles
Image Credit: ndtv

ಯಲ್ಲೋ ಬೋರ್ಡ್ ವಾಹನ ಇರುವವರ BPL ಕಾರ್ಡ್ ಬಂದ್
ಸದ್ಯ ಕೆಲವು ದಮಯಗಳಿಂದ ಸಾಮಾಜಿಕ ಜಾಲತಾಣದಲ್ಲಿ ಮತ್ತು ಮಾಧ್ಯಮಗಳಲ್ಲಿ ಯಲ್ಲೋ ಬೋರ್ಡ್ ಹೊಂದಿರುವವರ BPL ರೇಷನ್ ಕಾರ್ಡುಗಳನ್ನ ರದ್ದು ಮಾಡಲಾಗುತ್ತದೆ ಅನ್ನುವ ಸುದ್ದಿ ಹರಿದಾಡಿತ್ತು. ಹೌದು ಯಲ್ಲೋ ಬೋರ್ಡ್ ವಾಹನಗಳನ್ನ ವ್ಯವಹಾರದ ಉದ್ದೇಶದಿಂದ ಬಳಸಲಾಗುತ್ತದೆ ಮತ್ತು ಅದರಿಂದ ಆದಾಯ ಬಹಳಷ್ಟು ಬರುವ ಕಾರಣ ಅಂತಹ ಜನರ BPL ರೇಷನ್ ಕಾರ್ಡುಗಳನ್ನ ಸರ್ಕಾರ ರದ್ದು ಮಾಡಲಿದೆ ಅನ್ನುವ ಸುದ್ದಿ ಹರಿದಾಡಿತ್ತು.

ಯಲ್ಲೋ ಬೋರ್ಡ್ ವಾಹನ ಇರುವವರಿಗೆ ಗುಡ್ ನ್ಯೂಸ್
ಸದ್ಯ ಯಲ್ಲೋ ಬೋರ್ಡ್ ವಾಹನಗಳನ್ನ ಹೊಂದಿರುವ ಜನರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ ಎಂದು ಹೇಳಬಹುದು. ಹೌದು ಯಲ್ಲೋ ಬೋರ್ಡ್ ಹೊಂದಿರುವ ಜನರ BPL ಕಾರ್ಡುಗಳನ್ನ ಯಾವುದೇ ಕಾರಣಕ್ಕೂ ರದ್ದು ಮಾಡುವುದಿಲ್ಲ ಎಂದು ಸರ್ಕಾರ ತನ್ನ ಸ್ಪಷ್ಟನೆಯಲ್ಲಿ ತಿಳಿಸಿದೆ.

The government said that the BPL ration card of those who had a yellow board vehicle will not be cancelled
Image Credit: businessleague

ಸದ್ಯ ಇದರ ಬಗ್ಗೆ ಮಾತನಾಡಿರುವ ಸಚಿವರಾದ ಕೆ ಎಚ್ ಮುನಿಯಪ್ಪ ಅವರು ಯಲ್ಲೋ ಬೋರ್ಡ್ ವಾಹನ ಹೊಂದಿರುವ ಜನರ BPL ರೇಷನ್ ಕಾರ್ಡ್ ರದ್ದಾಗುವುದಿಲ್ಲ ಮತ್ತು ಅವರು ಕೂಡ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಹತ್ತು ಕೆಜಿ ಅಕ್ಕಿ ಪಡೆಯಲಿದ್ದಾರೆ ಎಂದು ಅವರು ಹೇಳಿದ್ದಾರೆ. ಸದ್ಯ ಸಚಿವರ ಈ ಮಾತು ಯಲ್ಲೋ ಬೋರ್ಡ್ ವಾಹನ ಹೊಂದಿರುವವರ ಸಂತಸಕ್ಕೆ ಕಾರಣವಾಗಿದೆ.

Join Nadunudi News WhatsApp Group

Join Nadunudi News WhatsApp Group