Yuva Nidhi 2024: ಅರ್ಜಿ ಸಲ್ಲಿಸಿದ ಯಾರು ಯಾರಿಗೆ ಯುವ ನಿಧಿ ಹಣ ಜಮಾ ಆಗಲಿದೆ….? ಯುವ ನಿಧಿ ಯೋಜನೆಯ ಅಪ್ಡೇಟ್

ಯುವ ನಿಧಿ ಯೋಜನೆಯ ಲಾಭ ಇಂತವರಿಗೆ ಲಭ್ಯವಾಗಲ್ಲ, ಸರ್ಕಾರದಿಂದ ಸ್ಪಷ್ಟನೆ

Yuva Nidhi Eligibility Update 2024: ಸದ್ಯ ರಾಜ್ಯದಲ್ಲಿ Yuva Nidhi ಯೋಜನೆಯ ಬಗ್ಗೆ ಚರ್ಚೆ ಆರಂಭವಾಗಿದೆ. ಕಾಂಗ್ರೆಸ್ ಸರ್ಕಾರ ಉಚಿತ ಗ್ಯಾರಂಟಿಗಳಲ್ಲಿನ ಕೊನೆಯ ಯೋಜನೆಯಾದ ಯುವ ನಿಧಿ ಅನುಷ್ಠಾನಕ್ಕೆ ಸರ್ಕಾರ ಸಂಪೂರ್ಣ ಸಿದ್ದತೆ ನಡೆಸುತ್ತಿದೆ.

ಈಗಾಗಲೇ ರಾಜ್ಯ ಸರ್ಕಾರ ಯುವ ನಿಧಿ ಯೋಜನೆಗೆ ಸಂಬಂಧಿಸಿದಂತೆ ಅನೇಕ ಅಪ್ಡೇಟ್ ನೀಡಿದೆ. ಡಿಸೆಂಬರ್ 26 ರಿಂದ ಯುವ ನಿಧಿ ನೋಂದಣಿ ಪ್ರಾರಂಭವಾಗಿದೆ. ಇದೀಗ ರಾಜ್ಯ ಸರ್ಕಾರದಿಂದ ಯುವ ನಿಧಿ ಯೋಜನೆಯ ಕುರಿತು ಮಹತ್ವದ ಮಾಹಿತಿ ಹೊರಬಿದ್ದಿದೆ. ಸದ್ಯ ಸರ್ಕಾರ ಯುವ ನಿಧಿ ಯೋಜನೆಯ ಕೆಲವು ಷರತ್ತುಗಳನ್ನ ತಿಳಿಸಿದ್ದು ಇದನ್ನ ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅತೀ ಅಗತ್ಯ ಆಗಿದೆ.

Yuva Nidhi Eligibility
Image Credit: Studybizz

ಯುವ ನಿಧಿ ಯೋಜನೆಯ ಅಪ್ಡೇಟ್
ಈಗಾಗಲೇ ಸಾಕಷ್ಟು ಜನರು ಯುವ ನಿಧಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ನಿರುದ್ಯೋಗ ಭತ್ಯೆಯಡಿ ಮಾಸಿಕ ಸಹಾಯಧನ ಪಡೆಯಲು ರಾಜ್ಯದ ಅರ್ಹ ನಿರುದ್ಯೋಗಿಗಳು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದರೆ ಅರ್ಜಿ ಸಲ್ಲಿಸಿರುವ ಎಲ್ಲರಿಗು ಕೂಡ ಯುವ ನಿಧಿ ಲಾಭ ದೊರೆಯಲಿದೆಯೇ..? ಅರ್ಜಿ ಸಲ್ಲಿಸಿದ ಯಾರು ಯಾರಿಗೆ ಯುವ ನಿಧಿ ಹಣ ಜಮಾ ಆಗಲಿದೆ….? ಯುವ ನಿಧಿ ಯೋಜನೆಗೆ ಅರ್ಹರು ಯಾರು, ಯಾರು ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವಂತಿಲ್ಲ..? ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

ಅರ್ಜಿ ಸಲ್ಲಿಸಿದ ಯಾರು ಯಾರಿಗೆ ಯುವ ನಿಧಿ ಹಣ ಜಮಾ ಆಗಲಿದೆ….?
•2022 -23 ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಇಲ್ಲದವರಿಗೆ ರಾಜ್ಯ ಸರ್ಕಾರದ ಯುವ ನಿಧಿ ಯೋಜನೆಯ ಲಾಭ ದೊರೆಯಲಿದೆ.

Join Nadunudi News WhatsApp Group

•ಎರಡು ವರ್ಷಗಳು ಮಾತ್ರ ಯುವ ನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ಸಿಗಲಿದೆ.

•ಎರಡು ವರ್ಷದೊಳಗೆ ಅಭ್ಯರ್ಥಿಗೆ ಉದ್ಯೋಗ ದೊರೆತರೆ ಮಾಸಿಕ ಹಣ ಸ್ಥಸ್ಥಗಿತವಾಗಲಿದೆ.

•ನಿರುದ್ಯೋಗ ಭತ್ಯೆ ಪಡೆಯುತ್ತಿರುವ ಅಭ್ಯರ್ಥಿಯು ಮಧ್ಯದಲ್ಲಿ ಕೆಲಸವನ್ನು ಪಡೆದರೆ ಸರ್ಕಾರಕ್ಕೆ ಮಾಹಿತಿ ತಿಳಿಸಬೇಕು.

•ನಕಲಿ ಮಾಹಿತಿ ನೀಡಿ ಸರ್ಕಾರದಿಂದ ನಿರುದ್ಯೋಗ ಭತ್ಯೆ ಪಡೆದರೆ ಅಂತವರಿಗೆ ಸರ್ಕಾರ ಬಾರಿ ದಂಡ ವಿಧಿಸಲಿದೆ.

ಯುವ ನಿಧಿ ಯೋಜನೆಯ ಲಾಭ ಇಂತವರಿಗೆ ಲಭ್ಯವಾಗಲ್ಲ
~ಪದವಿ ಅಥವಾ ಡಿಪ್ಲೊಮಾ ಉತ್ತೀರ್ಣರಾದ ನಂತರ ಉನ್ನತ ಶಿಕ್ಷಣ ಪಡೆಯುತ್ತಿರುವ ಯುವಕರು.

~ಅಪ್ರೆಂಟಿಸ್ ವೇತನದ ಫಲಾನುಭವಿ.

~ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿರುವ ಯುವಕರು.

~ಸ್ವಯಂ ಉದ್ಯೋಗದಲ್ಲಿರುವ ಯುವಕರು.

~ಸರ್ಕಾರದ ಇತರ ಆರ್ಥಿಕ ನೆರವು ಯೋಜನೆಯ ಫಲಾನುಭವಿ.

Join Nadunudi News WhatsApp Group