Yuva Nidhi Rule: ಫೆ. 29 ರೊಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ ಖಾತೆಗೆ ಬರಲ್ಲ ಯುವ ನಿಧಿ ಹಣ, ನಿಯಮ ಬದಲಾವಣೆ

ಯುವ ನಿಧಿ ಯೋಜನೆಯ ಹಣ ಪಡೆಯಲು ಫೆ. 29 ರೊಳಗೆ ಈ ಕೆಲಸ ಮಾಡುವುದು ಕಡ್ಡಾಯ

Yuva Nidhi Deadline: ಜನವರಿ 2024 ರಲ್ಲಿ ರಾಜ್ಯದ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವ ನಿಧಿ ಯೋಜನೆ ಜಾರಿಯಾಗಿದೆ. ಈ ಯೋಜನೆಯಡಿ ನಿರುದ್ಯೋಗಿಗಳು ನಿರುದ್ಯೋಗ ಭತ್ಯೆಯನ್ನು ಪಡೆದಿದ್ದಾರೆ.

ಅರ್ಹ ಫಲಾನುಭವಿಗಳ ಖಾತೆಗೆ ಅವರ ವಿದ್ಯಾರ್ಹತೆಯ ಆಧಾರದ ಮೇಲೆ ಮಾಸಿಕ ಭತ್ಯೆ ಲಭ್ಯವಾಗಿದೆ. ಇನ್ನು ಯುವ ನಿಧಿ ಯೋಜನೆಯಡಿ ಫೆಬ್ರವರಿ ತಿಂಗಳ ಎರಡನೇ ಕಂತಿನ ಹಣ ಪಡೆಯುವುದು ಬಾಕಿ ಇದೆ. ಇನ್ನು ಫೆಬ್ರವರಿ ತಿಂಗಳ ಭತ್ಯೆಯನ್ನು ಪಡೆಯಲು ಫಲಾನುಭವಿಗಳು ಈ ಕೆಲಸ ಮಾಡುವುದು ಕಡ್ಡಾಯವಾಗಿದೆ.

Yuva Nidhi Deadline
Image Credit: Studybizz

ಯುವನಿಧಿ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್
ಪದವಿ ವಿದ್ಯಾರ್ಥಿಗಳಿಗೆ 3,000 ಹಾಗೂ ಡಿಪ್ಲೊಮೊ ವಿದ್ಯಾರ್ಥಿಗಳಿಗೆ 1,500 ಮಾಸಿಕ ನಿರುದ್ಯೋಗ ಭತ್ಯೆಯನ್ನು ಯುವ ನಿಧಿ ಯೋಜನೆಯಡಿ ಸರ್ಕಾರ ನೀಡುತ್ತಿದೆ. ಈಗಾಗಲೇ ಯುವ ನಿಧಿ ಯೋಜನೆಯಡಿ ನಿರುದ್ಯೋಗಿಗಳಿಗೆ ಒಂದು ತಿಂಗಳ ಭತ್ಯೆ ಹಣ ಜಮಾ ಆಗಿದೆ. ಫಲಾನುಭವಿಗಳು ಮಾಸಿಕ ಹಣವನ್ನು ಪಡೆದುಕೊಂಡಿದ್ದಾರೆ. ಸದ್ಯ ಎರಡನೇ ಕಂತಿನ ಭತ್ಯೆ ಪಡೆಯುವ ಸಮಯ ಬಂದಿದೆ. ಎರಡನೇ ತಿಂಗಳ ನಿರುದ್ಯೋಗ ಭತ್ಯೆ ಪಡೆಯಬೇಕಿದ್ದರೆ ಈ ನಿಯಮ ಪಾಲನೆ ಕಡ್ಡಾಯವಾಗಿದೆ.

ಫೆ. 29 ರೊಳಗೆ ಈ ಕೆಲಸ ಆಗದಿದ್ದರೆ ನಿಮಗೆ ಸಿಗಲ್ಲ ನಿರುದ್ಯೋಗ ಭತ್ಯೆಯ ಹಣ
ನೀವು ಯುವ ನಿಧಿ ಯೋಜನೆಯ ಹಣವನ್ನು ಫೆಬ್ರವರಿ ತಿಂಗಳಿನಲ್ಲಿ ಪಡೆಯಬೇಕಿದ್ದರೆ ಈ ದಾಖಲೆ ನೀಡುವುದು ಕಡ್ಡಾಯವಾಗಿದೆ. ಈ ದಾಖಲೇ ನೀಡುವಲ್ಲಿ ವಿಫಲವಾದರೆ ನಿಮಗೆ ಈ ತಿಂಗಳ ಭತ್ಯೆಯ ಹಣ ಜಮಾ ಆಗುವುದಿಲ್ಲ ಎನ್ನುವುದು ನಿಮಗೆ ತಿಳಿದಿರಲಿ. ನಿರುದ್ಯೋಗ ಭತ್ಯೆ ಪಡೆಯುವ ಫಲಾನುಭವಿಗಳು ಪ್ರತಿ ತಿಂಗಳು “ಸ್ವಯಂ ಘೋಷಿತ ಪ್ರಮಾಣಪತ್ರ”ವನ್ನು Upload ಮಾಡಬೇಕು ಎಂದು ರಾಜ್ಯ ಸರ್ಕಾರ ಘೋಷಿಸಿದೆ.

Yuva Nidhi Latest News Update
Image Credit: Prajavani

ಪ್ರತಿ ತಿಂಗಳು ಅಭ್ಯರ್ಥಿಗಳು ತಾವು ಉದ್ಯೋಗ ಪಡೆದಿಲ್ಲ ಮತ್ತು ಉನ್ನತ ಶಿಕ್ಷಣಕ್ಕೆ ಹೋಗಿಲ್ಲ, ಉದ್ಯೋಗಿಯಲ್ಲ ಎಂದು ಸ್ವಯಂ ಘೋಷಿತ ಪ್ರಮಾಣ ಪತ್ರವನ್ನು Upload ಮಾಡಬೇಕು. ಫೆ. 29 ರವರೆಗೆ ಸ್ವಯಂ ಘೋಷಿತ ಪ್ರಮಾಣ ಪತ್ರವನ್ನು ಅಪ್‌ ಲೋಡ್ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಇನ್ನು http://sevasindhugs.karnataka.gov.in ಅಧಿಕೃತ ವೆಬ್ ಸೈಟ್ ನಲ್ಲಿ ಸ್ವಯಂ ಘೋಷಿತ ಪ್ರಮಾಣ ಪತ್ರವನ್ನು Upload ಮಾಡಬಹುದಾಗಿದೆ. ನೀವು ಫೆಬ್ರವರಿ ತಿಂಗಳಿನ ಮಾಸಿಕ ಭತ್ಯೆ ಪಡೆಯಬೇಕಿದ್ದರೆ ಆದಷ್ಟು ಬೇಗ ಸ್ವಯಂ ಘೋಷಿತ ಪ್ರಮಾಣ ಪತ್ರವನ್ನು ಸಲ್ಲಿಸುವುದು ಅಗತ್ಯವಾಗಿದೆ.

Join Nadunudi News WhatsApp Group

Join Nadunudi News WhatsApp Group