Yuva Nidhi: ಯುವ ನಿಧಿ ಬೆನ್ನಲ್ಲೇ ನಿರುದ್ಯೋಗಿಗಳಿಗೆ ಇನ್ನೊಂದು ಯೋಜನೆ ಜಾರಿಗೆ ತಂದ ಸರ್ಕಾರ, ಭತ್ಯೆ ಜೊತೆ ಇದು ಉಚಿತ

ಯುವ ನಿಧಿ ಯೋಜನೆಯ ಬೆನ್ನಲ್ಲೇ ನಿರುದ್ಯೋಗಿಗಳಿಗೆ ಇನ್ನೊಂದು ಯೋಜನೆ ಪರಿಚಯಿಸಿದ ಸರ್ಕಾರ

Yuva Nidhi Entrepreneurship Training: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಕೊನೆಯ ಗ್ಯಾರಂಟಿ ಯೋಜನೆಯಾದ ಈಗಾಗಲೇ ಜಾರಿಗೆ ಬಂದಿದ್ದು ಸಾವಿರಾರು ಜನರು ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಬಹುದು. ಈಗಾಗಲೇ ಹಣ ಜಮಾ ಮಾಡುವ ದಿನಾಂಕವನ್ನ ಸರ್ಕಾರ ಘೋಷಣೆ ಮಾಡಿದ್ದು ಇನ್ನೇನು ಕೆಲವೇ ದಿನಗಳಲ್ಲಿ ನಿರೂದ್ಯೋಗೋಗಳ ಖಾತೆಗೆ ಹಣ ಜಮಾ ಆಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ.

ರಾಜ್ಯ ಸರ್ಕಾರ ಜನವರಿಯಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ರಾಜ್ಯ ಸರ್ಕಾರ ಅರ್ಹ ಫಲಾನುಭವಿಗಳಿಗೆ ಡಿಸೇಂಬರ್ 26 ರಿಂದ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಿದೆ. ಈಗಾಗಲೇ ನಿರುದ್ಯೋಗ ಯುವಕ ಯುವತಿಯರು ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ.

Yuva Nidhi Latest Update
Image Credit: Original Source

ಯುವ ನಿಧಿ ಫಲಾನುಭವಿಗಳಿಗೆ ಗುಡ್ ನ್ಯೂಸ್
2022 -23 ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಇಲ್ಲದವರಿಗೆ ರಾಜ್ಯ ಸರ್ಕಾರದ ಯುವ ನಿಧಿ ಯೋಜನೆಯ ಲಾಭ ದೊರೆಯಲಿದೆ. ಎರಡು ವರ್ಷಗಳು ಮಾತ್ರ ಯುವ ನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ಸಿಗಲಿದೆ. ಇನ್ನು ಎರಡು ವರ್ಷದೊಳಗೆ ಅಭ್ಯರ್ಥಿಗೆ ಉದ್ಯೋಗ ದೊರೆತರೆ ಮಾಸಿಕ ಹಣ ಸ್ಥಗಿತವಾಗಲಿದೆ.

ನಿರುದ್ಯೋಗ ಭತ್ಯೆ ಪಡೆಯುತ್ತಿರುವ ಅಭ್ಯರ್ಥಿಯು ಮಧ್ಯದಲ್ಲಿ ಕೆಲಸವನ್ನು ಪಡೆದರೆ ಸರ್ಕಾರಕ್ಕೆ ಮಾಹಿತಿ ತಿಳಿಸಬೇಕು. ನಕಲಿ ಮಾಹಿತಿ ನೀಡಿ ಸರ್ಕಾರದಿಂದ ನಿರುದ್ಯೋಗ ಭತ್ಯೆ ಪಡೆದರೆ ಅಂತವರಿಗೆ ಸರ್ಕಾರ ಬಾರಿ ದಂಡ ವಿಧಿಸಲಿದೆ ಎಂದು ಅರ್ಜಿದಾರರಿಗೆ ಸರ್ಕಾರ ಎಚ್ಚರಿಸಿದೆ. ಸದ್ಯ ರಾಜ್ಯ ಸರ್ಕಾರ ಯುವ ನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆಯನ್ನು ನೀಡುವುದರ ಜೊತೆಗೆ ಅರ್ಹರಿಗೆ ಈ ಸೌಲಭ್ಯವನ್ನು ಕೂಡ ನೀಡಲು ಮುಂದಾಗಿದೆ. ಈ ಮೂಲಕ ಯುವ ನಿಧಿ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ.

Yuva Nidhi Entrepreneurship Training
Image Credit: Govinfo

ನಿರುದ್ಯೋಗ ಭತ್ಯೆಯ ಜೊತೆಗೆ ಉದ್ಯಮಶೀಲತೆ ತರಬೇತಿ
ರಾಜ್ಯದ ನಿರುದ್ಯೋಗ ಯುವಕ ಯುವತಿಯರಿಗೆ ಸಹಾಯವಾಗಲಿ ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ ನಿರುದ್ಯೋಗ ಭತ್ಯೆಯನ್ನು ನೀಡಲು ನಿರ್ಧರಿಸಿತ್ತು. ಸದ್ಯ ಯುವ ಜನತೆಯ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರ “ಉದ್ಯಮಶೀಲತೆ ತರಬೇತಿ” ನೀಡಲು ಮುಂದಾಗಿದೆ. ‘ಕೇವಲ ನಿರುದ್ಯೋಗಿಗಳಿಗೆ ಹಣ ನೀಡುವುದಷ್ಟೇ ಅಲ್ಲ, ಬದಲಾಗಿ ಉದ್ಯಮಶೀ೯ಲತೆ ಕಲ್ಪಿಸಿ ಉದ್ಯಮ ನೀಡುವುದು ನಮ್ಮ ಗುರಿಯಾಗಿದೆ’ ಎಂದು ಸಚಿವರಾದ ಪ್ರಿಯಾಂಕಾ ಖರ್ಗೆ ಅವರು ಹೇಳಿಕೆ ನೀಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group