Yuva Nidhi New: ಈ ದಿನದಂದು ಪದವಿ ಮತ್ತು ಡಿಪ್ಲೋಮ ಮಾಡಿದವರ ಖಾತೆಗೆ ಬರಲಿದೆ ಯುವ ನಿಧಿ ಹಣ, ಅರ್ಜಿ ಇನ್ನೇನು ಆರಂಭ

ಯುವ ನಿಧಿ ಯೋಜನೆ ಜಾರಿಯ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಿದ ಸಿದ್ದರಾಮಯ್ಯ

Yuva Nidhi Latest Update: ಸದ್ಯ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಜೋರಾಗಿಯೇ ನಡೆಯುತ್ತಿದೆ. ಐದು ಗ್ಯಾರಂಟಿ ಯೋಜನೆಗಳಲ್ಲಿ ಸದ್ಯ ನಾಲ್ಕು ಗ್ಯಾರಂಟಿ ಯೋಜನೆಗಳು ಅನುಷ್ಠಾನಗೊಂಡಿದ್ದು ಅರ್ಹರಿಗೆ ತಲುಪುತ್ತಿದೆ.

ಇನ್ನು ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ Yuva Nidhi ಜಾರಿಯಾಗುವುದು ಮಾತ್ರ ಭಾಕಿ ಇದೆ. ಈಗಾಗಲೇ ರಾಜ್ಯ ಸರ್ಕಾರ ಯುವ ನಿಧಿ ಯೋಜನೆಯ ಅರ್ಹತೆ ಮತ್ತು ದಾಖಲೆಗಳ ಬಗ್ಗೆ ಮಾಹಿತಿ ನೀಡಿದ್ದು, ಇದೀಗ ಯುವ ನಿಧಿ ಯೋಜನೆಯ ಜಾರಿಯ ಬಗ್ಗೆ ಅಧಿಕೃತ ಘೋಷಣೆ ಹೊರಡಿಸಿದೆ.

Yuva Nidhi Latest Update
Image Credit: Kannada News Today

ಪದವಿ, ಡಿಪ್ಲೊಮೊ ಮುಗಿಸಿದವರಿಗೆ ಗುಡ್ ನ್ಯೂಸ್
2022 -23 ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಇಲ್ಲದವರಿಗೆ ರಾಜ್ಯ ಸರ್ಕಾರದ ಯುವ ನಿಧಿ ಯೋಜನೆಯ ಲಾಭ ದೊರೆಯಲಿದೆ. ಪದವಿ ವಿದ್ಯಾರ್ಥಿಗಳಾಗಿದ್ದರೆ ರೂ. 3000 ಮಾಸಿಕ ಭತ್ಯೆ, ಡಿಪ್ಲೊಮೊ ವಿದ್ಯಾರ್ಥಿಗಳಾಗಿದ್ದರೆ ರೂ. 1500 ಮಾಸಿಕ ಭತ್ಯೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಇದೀಗ ಈ ಯುವ ನಿಧಿ ಯೋಜನೆಯ ಕುರಿತು ಸರ್ಕಾರ ಮಹತ್ವದ ಮಾಹಿತಿ ನೀಡಿದೆ. ನೀವು ಯುವ ನಿಧಿ ಯೋಜನೆಯ ಲಾಭವನ್ನು ಈ ತಿಂಗಳಿನಿಂದ ಪಡೆಯಬಹುದು ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

Yuva Nidhi Scheme
Image Credit: Oneindia

ಜನವರಿ 2024 ರಲ್ಲಿ ಯುವ ನಿಧಿ ಜಾರಿ
ರಾಜ್ಯದಲ್ಲಿ ಜನವರಿ ತಿಂಗಳಿನಲ್ಲಿ ನಿರುದ್ಯೋಗ ಭತ್ಯೆಯಾದ ಯುವನಿಧಿ ಯೋಜನೆ ಜಾರಿಯಾಗಲಿದೆ ಎಂದು ಸಿಎಂ Siddaramaiah ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ. “ಈ ಬಾರಿಯ ಬಜೆಟ್ ನಲ್ಲಿ ನಮ್ಮ ಸರಕಾರ ಘೋಷಿಸಿರುವ 143 ಕಾರ್ಯಕ್ರಮಗಳಲ್ಲಿ 83ಕ್ಕೆ ಆದೇಶ ಹೊರಡಿಸಿ ಅನುಷ್ಠಾನಗೊಳಿಸಲಾಗುತ್ತಿದೆ.

Join Nadunudi News WhatsApp Group

ಈಗಾಗಲೇ 4 ಗ್ಯಾರಂಟಿ ಯೋಜನೆ ಜಾರಿಯಾಗಿದ್ದು, ಜನವರಿಯಲ್ಲಿ ಯುವ ನಿಧಿ ಜಾರಿಯಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ನಮ್ಮ ಆಡಳಿತ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸೀಮಿತವಾಗದೆ, ನಾವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ ಮತ್ತು ಕರ್ನಾಟಕ ಅಭಿವೃದ್ಧಿ ಮಾದರಿ ಆಡಳಿತದ ಹೊಸ ಕಲ್ಪನೆಗೆ ನಾಂದಿ ಹಾಡಿದ್ದೇವೆ. ನಮ್ಮ ಸಾಧನೆಗಳು ಹಾಳೆಗಳಿಗೆ ಸೀಮಿತವಾಗಿರವೆ ಜನರ ಬದುಕಲ್ಲಿ ಪ್ರತಿಫಲಿಸುತ್ತದೆ” ಎಂದು X ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಯುವ ನಿಧಿ ಜಾರಿಯ ಬಗ್ಗೆ ಅಪ್ಡೇಟ್ ನೀಡಿದ್ದಾರೆ.

C M Siddaramaiah About Yuva Nidhi
Image Credit: Original Source

ನಿರುದ್ಯೋಗ ಭತ್ಯೆ ಪಡೆಯಲು ಈ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ
*ಆಧಾರ್ ಕಾರ್ಡ್
*ಆದಾಯ ಪ್ರಮಾಣಪತ್ರ
*ಶಿಕ್ಷಣ ಸಂಸ್ಥೆಯಿಂದ ಪಡೆದ ಪ್ರಮಾಣ ಪತ್ರ ಹಾಗೂ ಅಂಕಪಟ್ಟಿ
*ಬ್ಯಾಂಕ್ ಖಾತೆಯ ವಿವರ ಇಮೈಲ್ ಐಡಿ
*ಮೊಬೈಲ್ ಸಂಖ್ಯೆ
*ಭಾವಚಿತ್ರ
*ಪದವಿ ಹಾಗೂ ಡಿಪ್ಲೊಮೊ ಮುಗಿಸಿದ ಕೊನೆಯ ವರ್ಷದ ಅಂಕಪಟ್ಟಿ

Join Nadunudi News WhatsApp Group