Yuva Nidhi Application: ಯುವ ನಿಧಿ ಯೋಜನೆಗೆ ಮೊಬೈಲ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ…? 5 ನಿಮಿಷದ ಕೆಲಸ ಅಷ್ಟೇ

ಮೊಬೈಲ್ ಮೂಲಕ ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವ ಹೇಗೆ...? ಇಲ್ಲಿದೆ ಡೀಟೇಲ್ಸ್

Yuva Nidhi Online Application By Mobile: ರಾಜ್ಯದಲ್ಲಿ ಕಾಂಗ್ರೆಸ್ (Congress)  ಸರಕಾರ ಅಧಿಕಾರಕ್ಕೆ ಬರುವ ಮುನ್ನ ಘೋಷಣೆ ಮಾಡಿದ 5 ಗ್ಯಾರಂಟಿ ಯೋಜನೆಯನ್ನು ಈಗಾಗಲೇ ಜಾರಿಗೆ ತರಲಾಗಿದೆ. ಕಳೆದ 5 ದಿನಗಳ ಹಿಂದೆ ಕೊನೆಯ ಗ್ಯಾರಂಟಿ ಯೋಜನೆಯಾದ ಯುವ ನಿಧಿ ಯೋಜನೆಯನ್ನು ಜಾರಿಗೆ ತಂದಿದೆ.

ಇನ್ನು ರಾಜ್ಯದ ಜನತೆ 4 ಗ್ಯಾರಂಟಿ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಇನ್ನು ಯುವ ನಿಧಿ ಯೋಜನೆಯ ಅರ್ಜಿ ಸಲ್ಲಿಕೆ ಈಗಾಗಲೇ ಆರಂಭವಾಗಿದೆ. ಈ ಯೋಜನೆಯ ಹಣವನ್ನು ಜನವರಿ 12 ಕ್ಕೆ ಬಿಡುಗಡೆ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಸರಕಾರ ಈಗಾಗಲೇ ಹೇಳಿಕೆ ನೀಡಿದೆ.

Yuva Nidhi Scheme Launch
Image Credit: knnindia

ಕರ್ನಾಟಕ ಸರ್ಕಾರದ ಯುವ ನಿಧಿ ಯೋಜನೆ
ರಾಜ್ಯದಲ್ಲಿ ಪದವಿ ಹಾಗೂ ಡಿಪ್ಲೋಮಾ ಪೂರ್ಣ ಗೊಳಿಸಿದ ನಿರುದ್ಯೋಗಿ ಯುವಕ ಯುವತಿಯರಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ರಾಜ್ಯ ಸರ್ಕಾರದ ಈ ಯೋಜನೆಯಲ್ಲಿ ಪದವಿ ಪೂರ್ಣಗೊಳಿಸಿದ ನಿರುದ್ಯೋಗಿಗಳಿಗೆ 3000, ಹಾಗೆ ಡಿಪ್ಲೋಮಾ ಪೂರ್ಣಗೊಳಿಸಿದ ನಿರುದ್ಯೋಗಿಗಳಿಗೆ 1500 ರೂಪಾಯಿಯನ್ನು ನಿರುದ್ಯೋಗ ಭತ್ಯೆಯಾಗಿ ನೀಡಲಾಗುತ್ತದೆ. ಈ ಯೋಜನೆ ಮುಂದಿನ 2 ವರ್ಷಗಳ ವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ. ಯುವ ನಿಧಿ ಯೋಜನೆಗೆ ಈಗಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ನೀವು ನಿಮ್ಮ ಮೊಬೈಲ್ ನಲ್ಲಿ ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇದೀಗ ನಾವು ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುದು ಹೇಗೆಂದು ತಿಳಿದುಕೊಳ್ಳೋಣ.

ಯುವ ನಿಧಿ ಯೋಜನೆಗೆ ಮೊಬೈಲ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ…?
✤ಮೊದಲು ಮೊಬೈಲ್ ನಲ್ಲಿ ಗೂಗಲ್ ಬ್ರೌಸರ್ ಓಪನ್ ಮಾಡಬೇಕು.

✤ನಂತರ https://sevasindhugs.karnataka.gov.in/ ಲಿಂಕ್ ಅನ್ನು ಗೂಗಲ್ ಬ್ರೌಸರ್ ನಲ್ಲಿ ನಮೂದಿಸಿ.

Join Nadunudi News WhatsApp Group

✤ತದ ನಂತರ ರಾಜ್ಯ ಸರ್ಕಾರದ ಅಧಿಕೃತ ಸೇವಾ ಸಿಂಧೂ ವೆಬ್ ಪೋರ್ಟಲ್ ತೆರೆಯುತ್ತದೆ.

✤ಮುಖಪುಟದಲ್ಲಿ ನಿಮಗೆ 5 ಯೋಜನೆಗಳು ಕಾಣಿಸುತ್ತದೆ, ಅದರಲ್ಲಿ ನೀವು ಕೊನೆಯ ಯೋಜನೆ ಯುವ ನಿಧಿ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

Yuva Nidhi Online Application By Mobile
Image Credit: Original Source

✤ಸೇವಾ ಸಿಂಧೂ ವೆಬ್ ಪೋರ್ಟಲ್ ನಲ್ಲಿ ನೀವು ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಒಂದು ವೇಳೆ User ID Pasword ಇಲ್ಲದೆ ರಿಜಿಸ್ಟ್ರೇಷನ್ ಆಯ್ಕೆ ಮಾಡಿದರೆ ಆಧಾರ್ ನಂಬರ್ ಹಾಗೂ ಕ್ಯಾಪ್ಚ್ ಕೋಡ್ ನಮೂದಿಸಿ ರಿಜಿಸ್ಟ್ರೇಷನ್ ಮಾಡಬೇಕಾಗುತ್ತದೆ.

✤ರಿಜಿಸ್ಟ್ರೇಷನ್ ಅದ ಬಳಿಕ ಲಾಗಿನ್ ಆಗಬೇಕು.

✤ಅಲ್ಲಿ ರುವ ಸ್ವಯಂ ಘೋಷಣೆಯನ್ನು ಓದಿ, ಸರರ್ಕಾರದ ಮಾನದಂಡಗಳಿಗೆ ಬದ್ಧರಾಗಿರುವವರಾದರೆ ವಯಕ್ತಿಕ ಮಾಹಿತಿಯನ್ನು ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

✤ನಂತರ Aadhar authentication ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ KYC ಪುಟ ತೆರೆದುಕೊಳ್ಳುತ್ತದೆ.
✤OPT ನಮೂದಿಸಿ, ಆಧಾರ ಕಾರ್ಡ್ ನ ವಿವರವನ್ನು ನಮೂದಿಸಬೇಕಾಗುತ್ತದೆ.

✤ವಿದ್ಯಾರ್ಥಿಗಳು ಆಯ್ಕೆ ಮೇಲೆ ಕ್ಲಿಕ್ ಮಾಡಿ, ವಿಧ್ಯಾಬ್ಯಾಸಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾಗುತ್ತದೆ.

✤ಈ ಎಲ್ಲ ಕೆಲಸಗಳು ಪೂರ್ಣಗೊಂಡ ನಂತರ ಸಬ್ ಮೀಟ್ ಆಯ್ಕೆ ಮಳೆ ಕ್ಲಿಕ್ ಮಾಡಿ ಸ್ವೀಕೃತಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

Join Nadunudi News WhatsApp Group