Yuva Nidhi Registration: ಈ ದಿನದಂದು ನಿರುದ್ಯೋಗಿಗಳ ಖಾತೆಗೆ ಯುವ ನಿಧಿ ಹಣ ಜಮಾ, ಡಿ 26 ಕ್ಕೆ ಈ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿ.

ನಿರುದ್ಯೋಗ ಭತ್ಯೆ ಪಡೆಯಲು ಈ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ

Yuva Nidhi Registration Latest Update: ಸದ್ಯ ರಾಜ್ಯ ಸರಕಾರ ಉಚಿತ ಗ್ಯಾರಂಟಿಯಾದ ನಿರುದ್ಯೋಗ ಭತ್ಯೆಯನ್ನು ನೀಡಲು ಮುಂದಾಗಿದೆ. ಈಗಾಗಲೇ ರಾಜ್ಯ ಸರ್ಕಾರದಿಂದ ಯುವ ನಿಧಿ ಯೋಜನೆಯ ಕುರಿತು ಸಾಕಷ್ಟು ಅಪ್ಡೇಟ್ ಹೊರಬಿದ್ದಿದೆ. 2022 -23 ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಇಲ್ಲದವರಿಗೆ ರಾಜ್ಯ ಸರ್ಕಾರದ ಯುವ ನಿಧಿ ಯೋಜನೆಯ ಲಾಭ ದೊರೆಯಲಿದೆ.

ಪದವಿ ವಿದ್ಯಾರ್ಥಿಗಳಾಗಿದ್ದರೆ ರೂ. 3000 ಮಾಸಿಕ ಭತ್ಯೆ, ಡಿಪ್ಲೊಮೊ ವಿದ್ಯಾರ್ಥಿಗಳಾಗಿದ್ದರೆ ರೂ. 1500 ಮಾಸಿಕ ಭತ್ಯೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದೀಗ ಈ ಯುವ ನಿಧಿ ಯೋಜನೆಯ ಕುರಿತು ಸರ್ಕಾರ ಮಹತ್ವದ ಮಾಹಿತಿ ನೀಡಿದೆ. ನೀವು ಯುವ ನಿಧಿ ಯೋಜನೆಯ ಲಾಭವನ್ನು ಈ ದಿನಾಂಕದಂದು ಪಡೆಯಬಹುದು  ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

Yuva Nidhi Registration Date
Image Credit: Original Source

ಈ ದಿನದಂದು ನಿರುದ್ಯೋಗಿಗಳ ಖಾತೆಗೆ ಯುವ ನಿಧಿ ಹಣ ಜಮಾ
ಇನ್ನು 2022 -23 ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಇಲ್ಲದವರಿಗೆ ರಾಜ್ಯ ಸರ್ಕಾರದ ಯುವ ನಿಧಿ ಯೋಜನೆಯ ಲಾಭ ದೊರೆಯಲಿದೆ. ನಿರುದ್ಯೋಗ ಭತ್ಯೆ 1500 ಹಾಗೂ 3000 ರೂ. ಗಳನ್ನೂ ಅರ್ಹರ ಖಾತೆಗೆ ಜಮಾ ಮಾಡಲು ರಾಜ್ಯ ಸರ್ಕಾರ ದಿನಾಂಕ ನಿಗದಿ ಮಾಡಿದೆ.

ಜನವರಿ 12 ರಿಂದ ಅರ್ಹ ಖಾತೆಗೆ ನಿರುದ್ಯೋಗ ಭತ್ಯೆ ಹಣವನ್ನು ಜಮಾ ಮಾಡಲಾಗುತ್ತದೆ ಎಂದು ವೈದ್ಯಕೀಯ ಸಚಿವ ಶರಣ್ ಪ್ರಕಾಶ್ ಪಾಟೀಲ್ ಮಾಹಿತಿ ನೀಡಿದ್ದಾರೆ. ಇನ್ನು ಡಿ. 26 ರಿಂದಲೇ ಯುವ ನಿಧಿ ಯೋಜನೆ ನೋಂದಣಿ ಕೂಡ ಪ್ರಾರಂಭವಾಗಲಿದೆ. ಡಿ. 26 ರಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಅವರು ಚಾಲನೆ ನೀಡಲಿದ್ದಾರೆ.

Yuva Nidhi Registration Latest Update
Image Credit: Oneindia

ಇಂತವರಿಗೆ ನಿರುದ್ಯೋಗ ಭತ್ಯೆ ಹಣ ಜಮಾ ಆಗುವುದಿಲ್ಲ
•ಪದವಿ ಅಥವಾ ಡಿಪ್ಲೊಮಾ ಉತ್ತೀರ್ಣರಾದ ನಂತರ ಉನ್ನತ ಶಿಕ್ಷಣ ಪಡೆಯುತ್ತಿರುವ ಯುವಕರು.

Join Nadunudi News WhatsApp Group

•ಅಪ್ರೆಂಟಿಸ್ ವೇತನದ ಫಲಾನುಭವಿ.

•ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿರುವ ಯುವಕರು.

•ಸ್ವಯಂ ಉದ್ಯೋಗದಲ್ಲಿರುವ ಯುವಕರು.

•ಸರ್ಕಾರದ ಇತರ ಆರ್ಥಿಕ ನೆರವು ಯೋಜನೆಯ ಫಲಾನುಭವಿ.

Yuva Nidhi Registration latest News Update
Image Credit: Original Source

ನಿರುದ್ಯೋಗ ಭತ್ಯೆ ಪಡೆಯಲು ಈ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ

*ಆಧಾರ್ ಕಾರ್ಡ್

*ಆದಾಯ ಪ್ರಮಾಣಪತ್ರ

*ಶಿಕ್ಷಣ ಸಂಸ್ಥೆಯಿಂದ ಪಡೆದ ಪ್ರಮಾಣ ಪತ್ರ ಹಾಗೂ ಅಂಕಪಟ್ಟಿ

*ಬ್ಯಾಂಕ್ ಖಾತೆಯ ವಿವರ ಇಮೈಲ್ ಐಡಿ

*ಮೊಬೈಲ್ ಸಂಖ್ಯೆ

*ಭಾವಚಿತ್ರ

*ಪದವಿ ಹಾಗೂ ಡಿಪ್ಲೊಮೊ ಮುಗಿಸಿದ ಕೊನೆಯ ವರ್ಷದ ಅಂಕಪಟ್ಟಿ

Join Nadunudi News WhatsApp Group