Yuva Nidhi New: ಪದವಿ ಮತ್ತು ಡಿಪ್ಲೋಮ ಪಾಸ್ ಆದವರಿಗೆ ದೀಪಾವಳಿ ಉಡುಗೊರೆ, ಯುವ ನಿಧಿ ಯೋಜನೆಯ ಬಿಗ್ ಅಪ್ಡೇಟ್.

ಯುವ ನಿಧಿ ಯೋಜನೆ ಬಗ್ಗೆ ಕಾಂಗ್ರೆಸ್ ಸರ್ಕಾರದ ಮಹತ್ವದ ನಿರ್ಧಾರ.

Yuva Nidhi Scheme Latest Update: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Government)ವಿಧಾನ ಸಭಾ ಚುನಾವಣೆಗೂ ಮುನ್ನ ಘೋಷಣೆ ಮಾಡಿದ 5 ಗ್ಯಾರಂಟಿ ಯೋಜನೆಗಳಲ್ಲಿ ಈಗಾಗಲೇ 4 ಯೋಜನೆಗಳು ಜಾರಿಗೆ ಬಂದಿದೆ. ಆದರೆ 5 ನೇ ಘೋಷಣೆಯಾದ ಯುವ ನಿಧಿ ಯೋಜನೆಯೊಂದು ಜಾರಿಗೆ ಬರುದು ಬಾಕಿ ಇದೆ. ಇದೀಗ ಯುವಕರು ಕೂಡ ಹಣ ಪಡೆಯುವ ಗ್ಯಾರಂಟಿ ಯೋಜನೆಯಾದ ಯುವ ನಿಧಿ (Yuva Nidhi) ಬಗ್ಗೆ ಕಾಂಗ್ರೆಸ್ ಸರ್ಕಾರ ಮಹತ್ವದ ಮಾಹಿತಿಯನ್ನ ನೀಡಿದೆ.

yuva nidhi scheme
Image Credit: India Today

ಕಾಂಗ್ರೆಸ್ ಸರ್ಕಾರದ ಯುವ ನಿಧಿ ಯೋಜನೆ
2022 -23 ನೇ ಸಾಲಿನಲ್ಲಿ ತೇರ್ಗಡೆಯಾಗಿ 6 ತಿಂಗಳು ಉದ್ಯೋಗ ಸಿಗದೇ ಇದ್ದರೆ ಕರ್ನಾಟಕ ಸರ್ಕಾರದ ಈ ಯುವನಿಧಿ ಯೋಜನೆಯ ಲಾಭ ಸಿಗಲಿದೆ. ವೃತ್ತಿಪರ ಕೋರ್ಸ್ ಒಳಗೊಂಡು ಎಲ್ಲಾ ಪದವೀಧರರಿಗೆ ಪ್ರತಿ ತಿಂಗಳು 3000 ರೂ. ಹಾಗೂ ಡಿಪ್ಲೋಮ ಪದವೀಧರರಿಗೆ ಮಾಸಿಕ 1500 ರೂ. ನಿರುದ್ಯೋಗ ಭತ್ಯೆ ಸಿಗಲಿದೆ. 2 ವರ್ಷದೊಳಗೆ ಉದ್ಯೋಗ ದೊರೆತರೆ ಯೋಜನೆ ಸೌಲಭ್ಯ ಸ್ಥಗಿತವಾಗುತ್ತದೆ.

ಸುಳ್ಳು ಮಾಹಿತಿಯನ್ನ ನೀಡಿದರೆ ಕಟ್ಟಬೇಕು ಹೆಚ್ಚಿನ ದಂಡ
ಯುವನಿಧಿ ಯೋಜನೆಯ ಲಾಭ ಪಡೆಯುತ್ತಿದ್ದು ಮದ್ಯದಲ್ಲಿ ಉದ್ಯೋಗ ದೊರೆತರೆ ಅದರ ಬಗ್ಗೆ ಮಾಹಿತಿ ನೀಡಬೇಕು ಹಾಗೆ ಸುಳ್ಳು ಮಾಹಿತಿಯನ್ನ ನೀಡಿ ಯೋಜನೆಗೆ ಅರ್ಜಿ ಸಲ್ಲಿಸಿದರೆ ಹೆಚ್ಚಿನ ದಂಡವನ್ನು ಕಟ್ಟಬೇಕಾಗುತ್ತದೆ.

Yuva Nidhi Scheme Latest Update
Image Credit: Oneindia

ಯುವ ನಿಧಿ ಯೋಜನೆಗೆ ಚಾಲನೆ
ಕಾಂಗ್ರೆಸ್ ಸರ್ಕಾರದ 5 ನೇ ಗ್ಯಾರಂಟಿ ಯೋಜನೆಯಾದ ಯುವ ನಿಧಿ ಯೋಜನೆಯನ್ನು ಡಿಸೇಂಬರ್ ನಲ್ಲಿ ಜಾರಿಗೆ ತರುದಾಗಿ ಸಚಿವ ಶರಣಪ್ರಕಾಶ್ ಆರ್ ಪಾಟೀಲ್ ಮಾಹಿತಿ ನೀಡಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಶರಣಪ್ರಕಾಶ್ ಆರ್ ಪಾಟೀಲ್ ಯುವ ನಿಧಿ ಯೋಜನೆಯನ್ನು ಡಿಸೇಂಬರ್ ನಲ್ಲಿ ಜಾರಿಗೆ ತರಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಪದವೀಧರರಿಗೆ ಪ್ರತಿ ತಿಂಗಳು 3000 ರೂ. ಹಾಗೂ ಡಿಪ್ಲೋಮ ಪದವೀಧರರಿಗೆ ಮಾಸಿಕ 1500 ರೂಪಾಯಿ ನೀಡಲಾಗುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಈ ಯೋಜನೆಗೆ ಸುಮಾರು 250 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

Join Nadunudi News WhatsApp Group

Join Nadunudi News WhatsApp Group