Yuva Nidhi Launch: ಕಾಂಗ್ರೆಸ್ 5ನೇ ಗ್ಯಾರೆಂಟಿಗೆ ಅರ್ಜಿ ಆರಂಭ, ಈ ದಾಖಲೆಯೊಂದಿದೆ ಅರ್ಜಿ ಸಲ್ಲಿಸಿ

ಯುವ ನಿಧಿ ಯೋನಗೆ ಜನರು ಈ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

Yuva Nidhi Scheme Application Process: ಯುವನಿಧಿ ಯೋಜನೆಯನ್ನು ಹೊಸ ವರ್ಷದ ಆರಂಭದಿಂದ ಪ್ರಾರಂಭಿಸಲಿದ್ದು, ಈ ಯೋಜನೆಗೆ ಸರಕಾರ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಿದೆ. ಇಂದಿನಿಂದಲೇ ಅರ್ಹ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ.

ಈ ಯುವನಿಧಿ ಯೋಜನೆಯಡಿ 2023-24ನೇ ಸಾಲಿನಲ್ಲಿ ಯಾವುದೇ ವೃತ್ತಿಪರ ಕೋರ್ಸ್, ಪದವಿ, ಡಿಪ್ಲೋಮಾ ಉತ್ತೀರ್ಣರಾಗಿ, 6 ತಿಂಗಳಲ್ಲಿ ಉದ್ಯೋಗ ಸಿಗದವರಿಗೆ ಮುಂದಿನ 24 ತಿಂಗಳು ಪದವೀಧರರಿಗೆ ಮಾಸಿಕ 3000ರೂ., ಡಿಪ್ಲೋಮಾ ಮುಗಿಸಿದವರಿಗೆ ಮಾಸಿಕ 1500ರೂ. ನಿರುದ್ಯೋಗ ಭತ್ಯೆ ನೀಡಲಾಗುತ್ತದೆ. ಉದ್ಯೋಗ ಸಿಕ್ಕಿದ ಕೂಡಲೇ ಈ ಸೌಲಭ್ಯ ಸ್ಥಗಿತಗೊಳ್ಳಲಿದೆ.

Yuva Nidhi Scheme Karnataka
Image Credit: Deccanherald

ಅರ್ಜಿ ನೋಂದಾವಣೆಗೆ ಬೇಕಾಗಿರುವ ಅಗತ್ಯ ದಾಖಲೆಗಳು

ಅರ್ಜಿ ಸಲ್ಲಿಸಲು ಮತದಾರರ ಗುರುತಿನ ಚೀಟಿ, ಪದವಿ ಅಭ್ಯರ್ಥಿ ಗಳಾಗಿದ್ದರೆ ಅಂಕಪಟ್ಟಿ ಮತ್ತು ವಿಶ್ವವಿದ್ಯಾಲಯದ ಪದವಿ ಪ್ರಮಾಣ ಪತ್ರ, ಡಿಪ್ಲೋಮಾ ಹೊಂದಿದ್ದರೆ ಸಂಬಂಧಿಸಿದ ಶಿಕ್ಷಣ ಇಲಾಖೆಯಿಂದ ನೀಡಿದ ಅಂಕಪಟ್ಟಿ ಮತ್ತು ಪ್ರಮಾಣ ಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಮತ್ತು ಅದರ ಮಾಹಿತಿ ಅಗತ್ಯವಿದೆ.

ಅರ್ಜಿ ಸಲ್ಲಿಸುವ ವಿಧಾನ

Join Nadunudi News WhatsApp Group

ಸೇವಾಸಿಂಧು, ಗ್ರಾಮ ಒನ್, ಕರ್ನಾಟಕ ಒನ್ ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ನೇರ ನಗದು ವರ್ಗಾವಣೆಗಳನ್ನು (ಡಿಬಿಟಿ) ಸ್ವೀಕರಿಸಲು ಮೊಬೈಲ್ ಸಂಖ್ಯೆಗೆ ಲಿಂಕ್ ಆದ ಆಧಾರ್ ಸಂಖ್ಯೆಯ ಬ್ಯಾಂಕ್ ಖಾತೆಯನ್ನು ಹೊಂದಿರತಕ್ಕದ್ದು.ಅಭ್ಯರ್ಥಿಗಳು ಅರ್ಜಿ ಹಾಕುವ ವೇಳೆ ತಾವು ಉತ್ತೀರ್ಣರಾದ ದಿನದಿಂದ 6 ತಿಂಗಳವರೆಗಿನ ತಮ್ಮ ಬ್ಯಾಂಕ್ ಖಾತೆಯ ವಹಿವಾಟು ಪ್ರತಿ ನೀಡಬೇಕು. ಪದವಿ, ಡಿಪ್ಲೋಮಾ ಬಳಿಕ ಉನ್ನತ ಶಿಕ್ಷಣ ಮುಂದು ವರಿಸಿದರೆ ಈ ಭತ್ಯೆಗೆ ಅರ್ಹರಾಗುವುದಿಲ್ಲ.

Yuva Nidhi Scheme Online Application
Image Credit: Goodreturns

ಸ್ವಯಂಘೋಷಣೆ ಕಡ್ಡಾಯ ಆಗಿದೆ

ಅಭ್ಯರ್ಥಿ ನಿರುದ್ಯೋಗ ಸ್ಥಿತಿ ಬಗ್ಗೆ ಸ್ವಯಂ ಘೋಷಿಸಬೇಕು. ಉದ್ಯೋಗ ಪಡೆದ ನಂತರ ತಪ್ಪು ಘೋಷಣೆ ಅಥವಾ ಘೋಷಿಸಲು ವಿಫಲವಾದರೆ ದಂಡ ವಿಧಿಸಲಾಗುವುದು. ಈ ಎಲ್ಲಾ ಮಾಹಿತಿಯನ್ನು ಸರಿಯಾಗಿ ತಿಳಿದು ಅರ್ಜಿ ನೋಂದಾಯಿಸತಕ್ಕದ್ದು.

Join Nadunudi News WhatsApp Group