Yuva Nidhi: ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವಾಗ ಎಚ್ಚರ, ಇಂತವರ ಮೇಲೆ ಕೇಸ್ ದಾಖಲಿಸಲು ಸರ್ಕಾರದ ಆದೇಶ

ಯುವ ನಿಧಿ ಯೋಜನೆಯ ಅರ್ಜಿ ಸಲ್ಲಿಸಿದವರಿಗೆ ಸರ್ಕಾರದಿಂದ ಎಚ್ಚರಿಕೆ, ಸುಳ್ಳು ಮಾಹಿತಿ ನೀಡಿದರೆ ಕಾನೂನು ಕ್ರಮ.

Yuva Nidhi Rules And Regulations: ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ನ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವ ನಿಧಿ ಯೋಜನೆ (Yuva Nidhi Scheme) ಅನುಷ್ಠಾನಗೊಳ್ಳಲು ಸಿದ್ಧವಾಗಿದೆ. ಈಗಾಗಲೇ ಯುವ ನಿಧಿ ಯೋಜನೆಯ ನೋಂದಣಿ ಪ್ರಾರಂಭವಾಗಿದ್ದು, ಸರ್ಕಾರ ಕಟ್ಟು ನಿಟ್ಟಿನ ನಿಯಮವನ್ನು ವಿಧಿಸುತ್ತಿದೆ.

ಏಳೆಂಟು ತಿಂಗಳ ಬಳಿಕ ಇದೀಗ ನಿರುದ್ಯೋಗ ಭತ್ಯೆ ಅರ್ಹರ ಕೈತಲುಪಲಿದೆ. ಪದವಿ ಮತ್ತು ಡಿಪ್ಲೊಮೊ ವ್ಯಾಸಂಗ ಮುಗಿಸಿ ಇನ್ನು ಉದ್ಯೋಗ ಸಿಗದವರು ಇನ್ನುಮುಂದೆ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ನಿಮಗೀಗ ಯುವನಿಧಿ ಯೋಜನೆ ಸಹಾಯವಾಗಲಿದೆ. ನೀವು ನಿರುದ್ಯೋಗ ಪಡೆಯುವವರೆಗೂ ನಿರುದ್ಯೋಗ ಭತ್ಯೆ ಪಡೆದುಕೊಳ್ಳಬಹುದು.

yuva nidhi yojana rules and regulations
Image Credit: Original Source

ನಿರುದ್ಯೋಗ ಯುವಕ ಯುವತಿಯರಿಗೆ ಹೊಸ ವರ್ಷಕ್ಕೆ ಗುಡ್ ನ್ಯೂಸ್
ಪದವಿ ವಿದ್ಯಾರ್ಥಿಗಳಾಗಿದ್ದರೆ ರೂ. 3000 ಮಾಸಿಕ ಭತ್ಯೆ, ಡಿಪ್ಲೊಮೊ ವಿದ್ಯಾರ್ಥಿಗಳಾಗಿದ್ದರೆ 1500 ರೂ. ಗಳನ್ನೂ ನೊರುದ್ಯೋಗ ಭತ್ಯೆಯಾಗಿ ಪಡೆಯಬಹುದು. ಇನ್ನು ಡಿ. 26 ರಿಂದಲೇ ಯುವ ನಿಧಿ ಯೋಜನೆ ನೋಂದಣಿ ಕೂಡ ಪ್ರಾರಂಭವಾಗಿದೆ. ಡಿ. 26 ರಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ. ಜನವರಿ 12 ರಿಂದ ಅರ್ಹ ಖಾತೆಗೆ ನಿರುದ್ಯೋಗ ಭತ್ಯೆ ಹಣವನ್ನು ಜಮಾ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರ ಅಧಿಕೃತ ಘೋಷಣೆ ಹೊರಡಿಸಿದೆ.

ಯುವ ನಿಧಿ ಯೋಜನೆಯ ಅರ್ಜಿ ಸಲ್ಲಿಸಿದವರಿಗೆ ಸರ್ಕಾರದಿಂದ ಎಚ್ಚರಿಕೆ
ಇನ್ನು ರಾಜ್ಯ ಸರ್ಕಾರ ಯುವ ನಿಧಿ ಯೋಜನೆಗೆ ಕೆಲ ಷರತ್ತುಗಳನ್ನು ವಿಧಿಸಿದೆ. ನಿರುದ್ಯೋಗ ಭತ್ಯೆ ಪಡೆಯುವ ಉತ್ಸಾಹದಲ್ಲಿ ಸುಳ್ಳು ಮಾಹಿತಿ ನೀಡಿ ಹಣವನ್ನು ಪಡೆದರೆ ಅಂತವರ ವಿರುದ್ಧ ಕ್ರಮ ಕೈಗೊಳಲಾಗುವುದು ಎಂದು ಸರ್ಕಾರ ಜನರಿಗೆ ಎಚ್ಚರಿಸಿದೆ. 2022 -23 ನೇ ಸಾಲಿನಲ್ಲಿ ಉತ್ತೀರ್ಣರಾಗಿ 6 ತಿಂಗಳು ಉದ್ಯೋಗ ಇಲ್ಲದವರಿಗೆ ಮಾತ್ರ ಯುವ ನಿಧಿ ಯೋಜನೆಯ ಲಾಭ ದೊರೆಯಲಿದೆ. ಎರಡು ವರ್ಷಗಳು ಮಾತ್ರ ಯುವ ನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ಸಿಗಲಿದೆ. ಎರಡು ವರ್ಷದೊಳಗೆ ಅಭ್ಯರ್ಥಿಗೆ ಉದ್ಯೋಗ ದೊರೆತರೆ ಮಾಸಿಕ ಹಣ ಸ್ಥಗಿತಗೊಳ್ಳಲಿದೆ.

yuva nidhi yojana rules and regulations
Image Credit: Original Source

ನಿರುದ್ಯೋಗ ಭತ್ಯೆ ಪಡೆಯುತ್ತಿರುವ ಅಭ್ಯರ್ಥಿಯು ಮಧ್ಯದಲ್ಲಿ ಕೆಲಸವನ್ನು ಪಡೆದರೆ ಸರ್ಕಾರಕ್ಕೆ ಮಾಹಿತಿ ತಿಳಿಸಬೇಕು. ಆದಾಗ್ಯೂ ಕೆಲಸ ಸಿಕ್ಕಿ ನಿರುದ್ಯೋಗ ಭತ್ಯೆ ಪಡೆಯುತ್ತಿದ್ದರೆ ಅಂತವರ ಹಣ ಹಿಂಪಡೆಯಲಾಗುತ್ತದೆ ಮತ್ತು ಅವರ ಮೇಲೆ ಕೇಸ್ ದಾಖಲಿಸಲಾಗುತ್ತದೆ. ನಕಲಿ ಮಾಹಿತಿ ನೀಡಿ ಸರ್ಕಾರದಿಂದ ನಿರುದ್ಯೋಗ ಭತ್ಯೆ ಪಡೆದರೆ ಅಂತವರಿಗೆ ಸರ್ಕಾರ ಬಾರಿ ದಂಡ ವಿಧಿಸುವುದರ ಜೊತೆ ಕಾನೂನು ಕ್ರಮ ಕೈಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಹೀಗಾಗಿ ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವವರಿಗೆ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ.

Join Nadunudi News WhatsApp Group

Join Nadunudi News WhatsApp Group