Fact Check: ರಾತ್ರೋರಾತ್ರಿ 500 ರೂ ನೋಟುಗಳ ಮೇಲೆ ದೊಡ್ಡ ಘೋಷಣೆ ಮಾಡಿದ ಕೇಂದ್ರ ಸರ್ಕಾರ, ನಿಟ್ಟುಸಿರು ಬಿಟ್ಟ ಜನರು.

ಕೇಂದ್ರ ಸರ್ಕಾರ 500 ರೂ. ನೋಟುಗಳ ಬಗ್ಗೆ ಮಹತ್ವದ ಘೋಷಣೆ ಹೊರಡಿಸಿದೆ.

500 Rs Note Fact Check 2024: ದೇಶದಲ್ಲಿ ಎರಡು ಬಾರಿ ನೋಟು ಅಮಾನ್ಯಕರಣಗೊಂಡಿದೆ. 2016 ರಲ್ಲಿ ಮೊದಲ ಬಾರಿಗೆ ಕೇಂದ್ರ ಸರ್ಕಾರ 500 ಮತ್ತು 1000 ರೂ. ಮುಖಬೆಲೆಯ ನೋಟುಗಳು ರದ್ದು ಮಾಡಿದ್ದು, ನಂತರ 2023 ರಲ್ಲಿ ಚಲಾವಣೆಯಲ್ಲಿರುವಂತಹ 2000 ರೂ. ನೋಟುಗಳನ್ನು ರದ್ದುಪಡಿಸಿದೆ.

ಸದ್ಯ ಹಳೆಯ 500 , 1000, 2000 ನೋಟುಗಳು ಭಾರತೀಯ ಕರೆನ್ಸಿಯಾಗಿ ಉಳಿದಿಲ್ಲ. ಪ್ರಸ್ತುತ 500 ರೂ. ದೊಡ್ಡ ನೋಟಾಗಿ ಚಾಲನೆಯಲ್ಲಿದೆ. ಇನ್ನು ಚಲಾವಣೆಯಲ್ಲಿರುವ 500 ರೂ. ನೋಟುಗಳ ಕುರಿತಾಗಿ ಒಂದೊಂದೇ ಸುದ್ದಿಗಳು ವೈರಲ್ ಆಗುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ 500 ರೂ. ನೋಟಿನ ಕುರಿತಾಗಿ ಅನೇಕ ಸುದ್ದಿಗಳು ಹರಿದಾಡಿದ್ದು, ಜನರು 500 ರೂ. ನೋಟುಗಳನ್ನು ಬಳಸಲು ಭಯಪಡುವಂತಾಗಿದೆ. ಸದ್ಯ 500 ರೂ. ನೋಟುಗಳ ಕುರಿತಾಗಿ ಕೇಂದ್ರ ಸರ್ಕಾರ ಜನರಿಗೆ ಸ್ಪಷ್ಟನೆ ನೀಡಿದೆ.

500 Rs Note Fact Check
Image Credit: Rightsofemployees

500 ರೂ. ನೋಟಿನಲ್ಲಿ ಈ ರೀತಿ ಇದ್ದರೆ ಅದು ಮಾನ್ಯವಲ್ಲ..!
ಚಲಾವಣೆಯಲ್ಲಿರುವ 500 ರೂ. ನೋಟುಗಳು ಮಾನ್ಯವಲ್ಲ ಎನ್ನುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಗಳು ವೈರಲ್ ಆಗುತ್ತಿವೆ. 500 ರೂ. ನೋಟಿನಲ್ಲಿ ಈ ರೀತಿಯ ಚಿಹ್ನೆಯಿದ್ದರೆ ನೋಟು ಮಾನ್ಯವಲ್ಲ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. 500 ರೂಪಾಯಿ ನೋಟುಗಳ ಕೆಳಭಾಗದಲ್ಲಿ ಸರಣಿ ಸಂಖ್ಯೆಯ ಮಧ್ಯದಲ್ಲಿ ನಕ್ಷತ್ರ ಚಿಹ್ನೆ ಇದೆ. ನಕ್ಷತ್ರ ಚಿಹ್ನೆ ಇರುವ ನೋಟುಗಳು ನಕಲಿ, ಅವು ಮಾನ್ಯವಾಗಿಲ್ಲ ಮತ್ತು ಯಾರೂ ಅಂತಹ ನೋಟುಗಳನ್ನು ತೆಗೆದುಕೊಳ್ಳಬಾರದು ಎಂದು ಸುದ್ದಿಗಳು ಹರಿದಾಡುತ್ತಿದೆ.

PNB Fact Check
ಇನ್ನು 500 ರೂ. ನೋಟಿನ ಸುದ್ದಿ ಜನ ನಿದ್ದೆಗೆಡಿಸುತ್ತಿದೆ. ಈ ಕಾರಣಕ್ಕೆ ಕೇಂದ್ರ ಸರ್ಕಾರ 500 ರೂ. ನೋಟುಗಳ ಬಗ್ಗೆ ಮಹತ್ವದ ಘೋಷಣೆ ಹೊರಡಿಸಿದೆ. PNB Fact Check ಈ ಬಗ್ಗೆ ತನಿಖೆ ನಡೆಸಿ ಜನರಿಗೆ ಸ್ಪಷ್ಟ ಮಾಹಿತಿ ನೀಡಿದೆ. ಸರಣಿ ಸಂಖ್ಯೆಯ ಮಧ್ಯದಲ್ಲಿ ನಕ್ಷತ್ರ ಇರುವ 500 ರೂಪಾಯಿ ನೋಟುಗಳು ನಕಲಿ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ ಎಂದು PND Fact Check ಸ್ಪಷ್ಟಪಡಿಸಿದೆ.

PNB Fact Check On 500 Note
Image Credit: The Hindu

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು. 2016 ರಲ್ಲಿ 500 ಮತ್ತು 1000 ರೂಪಾಯಿ ನೋಟುಗಳ ಅಮಾನ್ಯೀಕರಣದ ನಂತರ, ಹೊಸದಾಗಿ ಬಿಡುಗಡೆಯಾದ 10, 20, 50, 100 ಮತ್ತು 500 ರೂಪಾಯಿ ನೋಟುಗಳು ನಕ್ಷತ್ರ ಚಿಹ್ನೆಯನ್ನು ಹೊಂದಿರುತ್ತವೆ ಎಂದು ಆರ್‌ಬಿಐ ತಿಳಿಸಿದೆ. ಈ ಬಗ್ಗೆ ಯಾವುದೇ ಅನುಮಾನ ಪಡುವ ಅಗತ್ಯವಿಲ್ಲ, ಸುಳ್ಳು ಮಾಹಿತಿ ನಂಬಬೇಡಿ ಎಂದು RBI ಜನರಿಗೆ ಸೂಚಿಸಿದೆ.

Join Nadunudi News WhatsApp Group

Join Nadunudi News WhatsApp Group