500 Rupees Fake Note: 500 ರೂಪಾಯಿ ನೋಟುಗಳ ಕುರಿತಂತೆ ದೊಡ್ಡ ಆದೇಶ ಹೊರಡಿಸಿದ ಕೇಂದ್ರ ಸರ್ಕಾರ, ಜನರೇ ಎಚ್ಚರ.

500 Rupees Fake Note: ಇದೀಗ ಸಾಮಾಜಿಕ ಜಾಲತಾಣ (Social Media)ದಲ್ಲಿ 500 ರೂಪಾಯಿ ನೋಟ್ ಗಳ ಬಗ್ಗೆ ವೈರಲ್ ಆಗುತ್ತಿದೆ. 500 ರೂಪಾಯಿ ನಕಲಿ ನೋಟ್ ಗಳ ಬಗ್ಗೆ ಮಾಹಿತಿ ನೀಡಲಾಗಿದೆ.

ಸರ್ಕಾರ ಅದೆಷ್ಟೇ ಪ್ರಯತ್ನ ಪಟ್ಟರು ಕಳ್ಳ ನೋಟು ದಂಧೆ ಮಾತ್ರ ಇನ್ನು ಕೂಡ ನಿಂತಿಲ್ಲ. ವಂಚಕರು ತಮ್ಮ ಹೊಸ ಹೊಸ ಮಾರ್ಗಗಳನ್ನು ಅನುಸರಿಸಿಕೊಂಡು ತಮ್ಮ ಕೈ ಚಳಕ ತೋರಿಸುತ್ತಲೇ ಇದ್ದಾರೆ. ಈ ನಡುವೆ 500 ರೂಪಾಯಿ ನೋಟಿಗೆ (500 Notes) ಸಂಬಂಧಪಟ್ಟಂತೆ ಸಂದೇಶವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Here is the information given by the government about 500 rupee notes
Image Credit: thequint

ಇಲ್ಲಿ 500 ರೂಪಾಯಿ ನಕಲಿ ನೋಟಿನ ಬಗ್ಗೆ ಮಾಹಿತಿ ನೀಡಲಾಗಿದೆ. ಈ ನೋಟು ಯಾಕೆ ನಕಲಿ ಅನ್ನುವುದು ಕೂಡ ವಿಡಿಯೋಯಾದಲ್ಲಿ ವಿವರಿಸಲಾಗಿದೆ. ಈ ಸಂದೇಶ ಸ್ವೀಕರಿಸಿದ ಬಹಳಷ್ಟು ಮಂದಿ ತಮ್ಮ ಬಳಿ ಏರುವ ನೋಟನ್ನು ಪರೀಕ್ಷಿಸಿ ನೋಡುವಂತೆ ಮಾಡಿದೆ.

ವಿಡಿಯೋದಲ್ಲಿ ಇದ್ದ ಮಾಹಿತಿ ಏನು
ಇದೀಗ ಸರ್ಕಾರದ ಅಧಿಕೃತ (PIB Fact Check) ಫ್ಯಾಕ್ಟ್ ಚೆಕರ್ ಪಿಐಬಿ, ತನ್ನ ಟ್ವಿಟರ್ ನಲ್ಲಿ ಸಾಮಾಜಿಕ ಮಾದ್ಯಮದಲ್ಲಿ ಹರಿದಾಡುವ ವಿಡಿಯೋ ಬಗ್ಗೆ ಮಾಹಿತಿ ನೀಡಿದೆ.

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಸಂದೇಶ ಸತ್ಯಕ್ಕೆ ದೂರವಾದದ್ದು ಎಂದು ಅದು ಹೇಳಿದೆ. ಇಂತಹ ನಕಲಿ ಸಂದೇಶಗಳ ಬಗ್ಗೆ ಜನರಿಗೆ ಎಚ್ಚರಿಕೆ ನೀಡಿದೆ.

Join Nadunudi News WhatsApp Group

Central Govt informed about fake notes
Image Credit: livehindustan

ತನ್ನ ಟ್ವೀಟ್‌ನಲ್ಲಿ ನೋಟಿನ ಚಿತ್ರವನ್ನು ಸಹ ಪಿಐಬಿ ಹಂಚಿಕೊಂಡಿದೆ. ಹಸಿರು ಪಟ್ಟಿ ಆರ್‌ಬಿಐ ಗವರ್ನರ್ ಸಹಿ ಬಳಿ ಹಾದು ಹೋಗಿದ್ದರೂ, ಅಥವಾ ಗಾಂಧೀಜಿ ಚಿತ್ರದ ಬಳಿ ಹಾದು ಹೋಗಿದ್ದರೂ ಆ ನೋಟುಗಳು ಅಸಲಿ ಎಂದು ಪಿಐಬಿ ಹೇಳಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ 500 ರೂ. ನೋಟು ಮಹಾತ್ಮಾ ಗಾಂಧಿ ಅವರ ಚಿತ್ರ ಮತ್ತು ಆರ್.ಬಿ.ಐ ಗವರ್ನರ್ ಸಹಿಯನ್ನು ಹೊಂದಿದೆ. ನೋಟಿನ ಹಿಂಬದಿಯಲ್ಲಿ ಕೆಂಪು ಕೋಟೆಯ ಚಿತ್ರವಿದೆ. ನೋಟಿನ ಬಣ್ಣ ಸ್ಟೋನ್ ಗ್ರೇ ಬಣ್ಣದಾಗಿದ್ದು, ವಿಭಿನ್ನ ವಿನ್ಯಾಸ ಮತ್ತು ಜೋಮೆಟ್ರಿ ಮಾದರಿಯನ್ನು ಹೊಂದಿದೆ.

The central government has given information about the fake notes that are circulating
Image Credit: economictimes.indiatimes

500 ರೂ. ನೋಟನ್ನು ಗಮನಿಸುವುದು ಹೇಗೆ
1. ನೋಟಿನ ಮೇಲೆ 500 ರ ನಂಬರ್ ಬರೆದಿರಬೇಕು.
2. ಲೆಟೆಂಟ್ ಇಮೇಜ್ ಮೇಲೆ 500 ಸಂಖ್ಯೆಯನ್ನು ಬರೆದಿರಬೇಕು.
3.ನೋಟಿನ ಮೇಲೆ ದೇವಾನಾಗರಿಯಲ್ಲಿ 500 ಎಂದು ಬರೆದಿರಬೇಕು.
4.ನೋಟಿನ ಮಧ್ಯದಲ್ಲಿ ಮಹಾತ್ಮಾ ಗಾಂಧೀಜಿ ಚಿತ್ರ ಇರಬೇಕು.

The central government has clarified about the features of the 500 rupee notes
Image Credit: scroll

5. RBI ಲಾಂಛನವು ರಾಜ್ಯಪಾಲರ ಸಹಿ ಮತ್ತು ಮಹಾತ್ಮಾ ಗಾಂಧೀಜಿಯವರ ಭಾವಚಿತ್ರದ ಬಲಭಾಗದಲ್ಲಿರಬೇಕು.
6. ಸೂಕ್ಷ್ಮ ಅಕ್ಷರಗಳಲ್ಲಿ ಭಾರತ ಮತ್ತು ಇಂಡಿಯಾ ಎಂದು ಬರೆದಿರಬೇಕು.
7.ಮಹಾತ್ಮ ಗಾಂಧಿ ಚಿತ್ರ ಮತ್ತು 500 ರ ವಾಟರ್‌ಮಾರ್ಕ್ ಇರಬೇಕು.

8.ಮೇಲಿನ ಎಡ ಮತ್ತು ಕೆಳಗಿನ ಬಲಭಾಗದಲ್ಲಿರುವ ನಂಬರ್ ಪ್ಯಾನೆಲ್ ಕೂಡಾ ಗಮನಿಸಿ.
9. ಕೆಳಗೆ ಬಲಭಾಗದಲ್ಲಿ ಬಣ್ಣ ಬದಲಾಯಿಸುವ ಶಾಯಿಯಲ್ಲಿ ಅಂದರೆ ಹಸಿರಿನಿಂದ ನೀಲಿ ಬಣ್ಣಕ್ಕೆ ತಿರುಗಿವ ಶಾಯಿಯಲ್ಲಿ 500 ಎಂದು ಬರೆದಿರಬೇಕು. ಬಲಭಾಗದಲ್ಲಿ ಅಶೋಕ ಸ್ತಂಭದ ಚಿಹ್ನೆ ಇರಬೇಕು.

Join Nadunudi News WhatsApp Group